Tuesday, August 23, 2016

ಯಾದವರಾಯ

 


ಕಂದನಾಗಿ ಬಂದಿಹ ಯಾದವರಾಯ
ಕುಂದುಗಳನೆಂದಿಗೂ ಎಣಿಸದಿರಯ್ಯ
ಬಂದಿಹೆ ನಿನ್ನಯ ಶರಣಕ್ಕಿಂದು
ಭವ ಬಂಧನಗಳ ನೀ ಬಿಡಿಸಯ್ಯ... ||

ಅರಿಗಳ ಭಯದಲಿ ಬಲು ನೊಂದೆನಯ್ಯ
ಹರಿಯೇ ಎನ್ನ ಸಂಗ ನೀ ಬಿಡಲಯ್ಯ
ತುರುಗಳ ಕಾಯುವ ಗೊಲ್ಲ ನೀನಯ್ಯ
ಕರುಗಳ ಮಂದೆಯಲ್ಲಿ ನಾ ಇಹೆನಯ್ಯ... ||

ಲೌಕಿಕ ವಿಷಯಕ್ಕೆ ಮನ ಹಿಗ್ಗುವುದಯ್ಯ
ಲವಲೇಶವಾದರೂ ಭಕುತಿ ಇರಿಸಯ್ಯ
ಲೋಕಾನಂದನೆ ನಿನ್ನ ಕರುಣೆ ಬಹಳಯ್ಯ
ಲೋಪವಾದರೆ ಎನ್ನ ನೀ ಕಾಯಬೇಕಯ್ಯ... ||

ಸಂಚಿತ ಹೊರೆಯನು ಹೊತ್ತಿಹೆನಯ್ಯ
ಪ್ರಾಪಂಚಿಕ ತೊಡಕಲಿ ಸಿಲುಕಿಹೆನಯ್ಯ
ಅಂಜಿಕೆ ತುಂಬಿದ ಮನ ನನ್ನದಯ್ಯ
ಕಂಜನಾಭ ಪೊರೆಯೈ ಅನಂತಶಯನಯ್ಯ...||




https://soundcloud.com/shyamalarao/7lbzhtkst0pg


ಚಿ ತ್ರ ಕೃ ಪೆ  : ಅಂ ತ ರ್ಜಾ ಲ

2 comments:

  1. ಭಕ್ತಿ ತುಂಬಿದ ಗೀತೆಯಿಂದ ಮನಸ್ಸಿಗೆ ಸಂತೋಷವಾಯಿತು.

    ReplyDelete