Friday, August 13, 2010

ಹಾರೈಕೆ.....

Chubby Love: A yound sister ties 'rakhi' to her brother to celebrate the bond of brother-sister relationship on the occasion of Raksha Bandhan, in New Delhi on August 16, 2008.

ದೀವಿಗೆಯ ಬೆಳಗುತಿಹೆ ದೇವ ಮಂದಿರದಲ್ಲಿ

ಹರಕೆಯನು ಹಾರೈಸಿ ಮನ ಮಂದಿರದಲ್ಲಿ... (ಪ)



ಒಡಲಾಳ ತುಂಬಿಹುದು ಆ ಮಧುರ ವಾತ್ಸಲ್ಯ

ಒಡನಾಡಿ ನಿನ್ನೊಡನೆ ನಾ ಕಳೆದ ಬಾಲ್ಯ


ಕೂಡುತ್ತ ಆಡಿದೆನು ಕೈ ಹಿಡಿದು ಓಡಿದೆವು


ಪ್ರೀತಿಯ ತಿಳಿ ನೀರಿನಲಿ ನಲಿದು ಚೆಲ್ಲಾಡಿದೆವು... (೧)



ಅವ್ವನ ಪ್ರೇಮದ ಧಾರೆ ನಿನ್ನೆಡೆಗೆ ಹೆಚ್ಚಿತ್ತು

ಅಪ್ಪನ ಮಮತೆಯ ಹರವು ನನ್ನೆಡೆಗೆ ಹರಿದಿತ್ತು


ಸೋದರನೆ ನಿನ್ನೊಲವು ಎಲ್ಲವನು ಮೀರಿತ್ತು


ಆದರವ ತೋರಿಸುವ ಮನವ ತುಂಬಿಸುತಲಿತ್ತು...(೨)



ಶಾಲೆಯಾ ದಿನಗಳಲಿ ಕಾಡಿಸುವ ಗುರುವಾದೆ

ಮನೆಯಲ್ಲಿ ಪಾಠಗಳ ನೀ ನನಗೆ ಕಲಿಸಿದ್ದೆ


ಲೆಕ್ಕವನು ಮಾಡುತ್ತ ನಾ ಒಳಗೆ ಕುಳಿತಿರಲು


ಇಕ್ಕೊ ಬಂದೇನೆಂದು ನೀ ಹೊರಗೆ ಓಡಿದ್ದೆ....(೩)


ಹರೆಯದಾ ದಿನಗಳಲಿ ಬಲು ಭಾರ ಬಿದ್ದಿತ್ತು

ಕಳೆದ ಅಪ್ಪನ ಜಾಗ ನಿನ್ನನ್ನೇ ಆರಿಸಿತ್ತು


ಅವ್ವನಾ ಕಣ್ಣಿನಲಿ ನಿನ್ನದೇ ಕನಸಿತ್ತು


ಬದುಕಬಂಡಿಯ ನೊಗವ ನೀನು ಹೊತ್ತಾಗಿತ್ತು...(೪)



ಸಂಸಾರ ನೌಕೆಯಲಿ ನಾವಿಕನು ನೀನಾಗಿ

ಸಂಕಷ್ಟ ದಿನಗಳನು ನಗುನಗುತ ಸಾಗಿಸಿದೆ


ಒಡಹುಟ್ಟಿ ಬಂದೆವು ಒಡನಾಡಿ ಬೆಳೆದೆವು


ನಡೆಯಲ್ಲಿ ನುಡಿಯಲ್ಲಿ ಮಮತೆಯ ಮಾತಾದೆವು...(೫)



ವ್ಯಾಸಂಗದ ದಿನಗಳಲಿ ನಾ ಮಿತಿಯ ಅರಿತಿದ್ದೆ

ವ್ಯಾಕುಲವು ಇರದಂತೆ ನೀ ನನ್ನ ಸಲಹಿದ್ದೆ


ಪದವಿಯನು ಮುಗಿಸುತ್ತ ನಾ ಹೊರಗೆ ಬಂದಿರಲು


ಮುದದಿಂದ ನೀ ನನಗೆ ಸಿಹಿಯನ್ನು ತಿನಿಸಿದ್ದೆ....(೬)



ಅದೊಂದು ದಿನ ನಿನ್ನ ಮೊಗದಿ ಸಂತಸವಿತ್ತು

ಅವ್ವನಾ ಕೋಣೆಯಲಿ ಪಿಸುಮಾತು ನಡೆದಿತ್ತು


ವಿಷಯವನು ಅರಿಯುತಿರೆ ನಾ ಒಲ್ಲೆ ಎನುತಿರಲು


ಹೊಸ ಬದುಕು ಜೀವನದ ಅನಿವಾರ್ಯ ಎಂದಿದ್ದೆ...(೭)



ನಿನ್ನ ಸಂಭ್ರಮ ನೋಡಿ ನಾ ಚಕಿತಗೊಂಡಿದ್ದೆ

ನನ್ನ ಕಳುಹಿಸಲು ಸಂಚು ಮಾಡಿರುವೆಯೆಂದೆ


ಭಾವನೆಯು ಉಮ್ಮಳಿಸಿ ನಿನ್ನತ್ತ ನೋಡಿರಲು


ಹೆತ್ತವರ ಭಾಗ್ಯವಿದು ಎಂದು ಕಣ್ಣೊರೆಸಿದೆ...(೮)


ತವರನ್ನು ತೊರೆದು ನಾ ಬಲು ದೂರ ನಡೆದಿದ್ದೆ

ತುಂಬು ಸಂಸಾರದಲಿ ನಾ ಮುಳುಗಿ ಹೋಗಿದ್ದೆ

ಪಂಚಮಿಯ ದಿನದಂದು ನಿನ್ನ ಬಲು ನೆನೆದಿದ್ದೆ

ನಗುತ ಬಾಳುವ ವರವ ನಿನಗಾಗಿ ಬೇಡಿದ್ದೆ...(೯)



ದೀವಿಗೆಯ ಬೆಳಗುತಿಹೆ ದೇವ ಮಂದಿರದಲ್ಲಿ

ಹರಕೆಯನು ಹಾರೈಸಿ ಮನ ಮಂದಿರದಲ್ಲಿ.... (ಪ)



ಅಣ್ಣ-ತ೦ಗಿಯ ಮಧುರ ಬಾ೦ಧವ್ಯದ ನೆನಪಿನಲ್ಲಿ ಎಲ್ಲರಿಗೂ "ಪ೦ಚಮಿ ಹಬ್ಬದ" ಶುಭಾಶಯಗಳು.

38 comments:

  1. ಕವನ ಸುಂದರವಾಗಿದೆ.ಪಂಚಮಿಯ ಶುಭಾಶಯಗಳು.ನಮಸ್ಕಾರ.

    ReplyDelete
  2. ಮೊಮ್ಮೊದಲು ಕವನವನ್ನು ಮೆಚ್ಚಿ ತಿಳಿಸಿದ ಡಾ.ಸರ್ ತಮಗೂ ಪ೦ಚಮಿ ಹಬ್ಬದ ಶುಭಾಶಯಗಳು.

    ಅನ೦ತ್

    ReplyDelete
  3. ಚೆ೦ದದ ಕವನದೊ೦ದಿಗೆ ಅಣ್ಣ ತ೦ಗಿಯ ಭಾ೦ದವ್ಯವನ್ನು ಚೆನ್ನಾಗಿ ವಿವರಿಸಿದ್ದೀರಿ..
    ನಿಮಗೂ ಪ೦ಚಮಿ ಹಬ್ಬದ ಶುಭಾಶಯಗಳು.

    ReplyDelete
  4. ಮುದ್ದಾದ ಕವನ

    ಪಂಚಮಿಗೆ ಒಳ್ಳೆಯ ಕವನ

    ReplyDelete
  5. ಪಂಚಮಿ ಹಬ್ಬಕ್ಕೆ ಸಿಹಿಯಾದ ಕವನವನ್ನೇ ತಿನ್ನಿಸಿದ್ದೀರಿ. ತುಂಬ ಮಧುರವಾದ, ಭಾವಪೂರ್ಣ ಕವನ.

    ReplyDelete
  6. ತುಂಬಾ ಮುದ್ದಾದ ಚಿತ್ರ.... ಜುಟ್ಟಿನ ಪುಟ್ಟ ಮುದ್ದು ತಂಗಿಯೆಡೆಗೆ ಅಣ್ಣನ ಮುಕ್ತ ನಗು.... ನಿಮ್ಮ ಹಾರೈಕೆಯನ್ನು ಓದಿದ ಎಲ್ಲಾ ಹೆಣ್ಣು ಮಕ್ಕಳೂ ತನಗೇ ತನ್ನಣ್ಣ ಹಾರೈಸುತ್ತಿದ್ದಾನೆಂದು ತಿಳಿಯುತ್ತಾಳೇನೋ ಅನಂತ್ ಸಾರ್..... ಆಪ್ತವಾಗಿದೆ.... ಮನಸ್ಸೂ ಕಣ್ಣೂ ಎರಡೂ ತುಂಬಿತು. ಧನ್ಯವಾದಗಳು ನಿಮಗೆ ಹಬ್ಬದ ಶುಭ ಹಾರೈಕೆಗಳು....

    ಶ್ಯಾಮಲ

    ReplyDelete
  7. ಕವನ ಓದುತ್ತ ಓದುತ್ತ ಕಣ್ಣು ತೇವವಾಯಿತು... ಕೆಲವು ನೆನಪುಗಳು ಮರುಕಳಿಸಿದವು... ಧನ್ಯವಾದಗಳು ಸರ್ ಚೆಂದದ ಕವನಕ್ಕೆ...ನಿಮಗೂ ಪ೦ಚಮಿ ಹಬ್ಬದ ಶುಭಾಶಯಗಳು.

    ReplyDelete
  8. ಸರ್‍, ಕವನ ಓದುತ್ತಾ ಹೋದಂತೆ.. ಕಣ್ಣೆವೆ ತುಂಬಿತು. ನಿಮಗೂ ಸಹ ಹಬ್ಬದ ಶುಭಾಶಯಗಳು.
    ಸ್ನೇಹದಿಂದ,

    ReplyDelete
  9. ಕವನ ತುಂಬಾ ಚೆನ್ನಾಗಿದೆ..
    ಸಾಲುಗಳು ಒಂದು ಜೀವನದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿವೆ..
    "ಶುಭ ಆಶಯಗಳು.."

    ReplyDelete
  10. ಪಂಚಮಿ ಹಬ್ಬಕ್ಕೆ ಸಿಹಿಕವನ. ಸರಳ ಭಾಷೆಯಲ್ಲಿ ಸುಂದರವಾಗಿ ಮೂಡಿದೆ. ಮೊದಲ ಕೆಲವು ಸಾಲುಗಳನ್ನು ಓದುವಾಗ ನನ್ನನ್ನು ಕಷ್ಟಪಟ್ಟು ಓದಿಸಿದ ಅಣ್ಣಂದಿರ ನೆನಪಾಗಿ ಕಣ್ಣಾಲಿ ತುಂಬಿ ಬಂತು.
    ತು೦ಬಾ ಭಾವಪೂರಿತ ಕವನ.

    ReplyDelete
  11. ಚೆ೦ದದ ಕವನವೆ೦ದು ಪ್ರತಿಕ್ರಿಯಿಸಿದ ಮನಮುಕ್ತಾ ಅವರಿಗೆ ವ೦ದನೆಗಳು

    ಅನ೦ತ್

    ReplyDelete
  12. ಮುದ್ದಾದ ಕವನವೆ೦ದು ಪ್ರತಿಕ್ರಿಯಿಸಿದ ಡಾ.ಗುರುಮೂರ್ತಿ ಸರ್ ಅವರಿಗೆ ವ೦ದನೆಗಳು

    ಅನ೦ತ್

    ReplyDelete
  13. ಪಂಚಮಿ ಹಬ್ಬಕ್ಕೆ ಮಧುರವಾದ, ಭಾವಪೂರ್ಣ ಕವನ ಎ೦ದು ಬರೆದು ತಿಳಿಸಿದ ಸುನಾತ್ ಸರ್ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  14. ಕವನವು ಆಪ್ತವಾಗಿದೆ, ಮನಸ್ಸೂ ಕಣ್ಣೂ ಎರಡೂ ತುಂಬಿತು.. ಎ೦ದು ಭಾವಪೂರ್ಣರಾಗಿ ಪ್ರತಿಕ್ರಿಯಿಸಿದ ಶ್ಯಾಮಲಾ ಅವರಿಗೆ ತು೦ಬು ಧನ್ಯವಾದಗಳು.

    ಅನ೦ತ್

    ReplyDelete
  15. ಕವನ ಓದುತ್ತ ಕೆಲವು ನೆನಪುಗಳು ಮರುಕಳಿಸಿದವು...ಎ೦ದು ಪ್ರತಿಕ್ರಿಯಿಸಿದ ಪ್ರಗತಿ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  16. ಕವನ ಓದುತ್ತಾ ಹೋದಂತೆ.. ಕಣ್ಣೆವೆ ತುಂಬಿತು ಎ೦ಬ ನಿಮ್ಮ ಮನದಾಳದ ಭಾವ ಪ್ರತಿಕ್ರಿಯೆಗೆ ಧನ್ಯವಾದಗಳು ಚ೦ದ್ರು ಸರ್.

    ಅನ೦ತ್

    ReplyDelete
  17. ಕವನ ತುಂಬಾ ಚೆನ್ನಾಗಿದೆ..ಎ೦ದು ಪ್ರತಿಕ್ರಿಯಿಸಿದ ಕತ್ತಲು ಮನೆ ಬ್ಲಾಗಿಗರಿಗೆ ಧನ್ಯವಾದಗಳು.

    ಅನ೦ತ್

    ReplyDelete
  18. ಕಣ್ಣಾಲಿ ತುಂಬಿ ಬಂತು. ತು೦ಬಾ ಭಾವಪೂರಿತ ಕವನ..ಎ೦ದು ಪ್ರತಿಕ್ರಿಯಿಸಿದ ಸೀತಾರಾಮ್ ಅವರಿಗೆ ಧನ್ಯವಾದಗಳು. ಭಾವ ನಿಮ್ಮನ್ನು ಮುಟ್ಟಿದ್ದರೆ ಅದು ಕವನದ ಉದ್ದೇಶದ ಸಫಲತೆ ಸರ್.

    ಅನ೦ತ್

    ReplyDelete
  19. naaga panchamiya hirime tilisida neevu uttama maahiti neediddeeri. nimage dhanyavaadagalu.

    ReplyDelete
  20. ನನ್ನ ತಾಣಕ್ಕೆ ಭೇಟಿ ನೀಡಿ ತಾವು ನೀಡಿದ ಪ್ರತಿಕ್ರಿಯೆ ನನ್ನನ್ನು ನಿಮ್ಮ ಈ ಸುಂದರ ತಾಣ ಪರಿಚಯಿಸಿತು. ಈ ಕವನ ಓದಿ ಅಣ್ಣ-ತಂಗಿ ಸಂಬಂಧ ನೆನೆದು ಮನಸ್ಸು ಭಾರವಾಯಿತು. ಒಳ್ಳೆಯ ಭಾವನಿವೇದನೆ, ಅನಂತರಾಜರೇ. ನಮನಗಳು.

    ReplyDelete
  21. ಬ್ಲಾಗಿಗೆ ಭೇಟಿ ನೀಡಿ ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದೆ ಬಾಲು ಅವರಿಗೆ ವ೦ದನೆಗಳು.

    ಅನ೦ತ್

    ReplyDelete
  22. ನಿಮ್ಮ ತಾಣಗಳಿಗೆ ಭೇಟಿ ನೀಡಿ ಕೊ೦ಚ ವಿಹರಿಸಿ ಆನ೦ದಿಸಿದೆ ನಾಗರಾಜ್ ಸರ್. ನನ್ನ ತಾಣಕ್ಕೂ ಬ೦ದು ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ವ೦ದನೆಗಳು.

    ಅನ೦ತ್

    ReplyDelete
  23. ನಿಮಗೂ ಪಂಚಮಿ ಹಬ್ಬದ ಶುಭಾಶಯಗಳು , ಅನಂತರಾಜ್ ಅವರೆ!!
    ಕಳೆದ ಎರಡು ಮೂರು blog-post ಗೆ ಪ್ರತಿಕ್ರಯಿಸುತ್ತಾ ಇದ್ದೀರಿ, ಧನ್ಯವಾದಗಳು. ಇವತ್ತು ನಿಮ್ಮ ಬ್ಲಾಗ್ ಗೆ ಬಂದೆ, ಆದರೆ background colour ಯಾಕೋ ಕಣ್ಣಿಗೆ ಹೋಡಿತಾ ಇದೆ, ನನ್ನ ಕಣ್ಣಿನ ದೋಷ ಇರಬಹುದು ಅಥವಾ monitor resolution set ಮಾಡ್ಬೇಕೇನೋ.
    ಇನ್ನೊಮ್ಮೆ ಬರುತ್ತೇನೆ.
    take care
    :-)
    ಮಾಲತಿ ಎಸ್

    ReplyDelete
  24. ಕವನ ಬಹಳ ಚೆನ್ನಾಗಿದೆ

    ReplyDelete
  25. ತುಂಬಾ ಅಧ್ಬುತವಾದ ಸಾಲುಗಳನ್ನ ಬರೆದಿದ್ದಿರ ಸರ್.
    ಭಾವನೆಗಳು ಉಕ್ಕಿ ಬಂದನ್ತಿವೆ . . . ಥ್ಯಾಂಕ್ಸ್

    ReplyDelete
  26. ತಾಣಕ್ಕೆ ಸ್ವಾಗತ ಮಾಲತಿ ಅವರೆ. ಹಿನ್ನೆಲೆಯ ವರ್ಣ "ಬೆಕ್ಕು" ಕವನಕ್ಕೆ ಪೂರಕವಾಗಿರಲೆ೦ದು ಆಯೋಜಿಸಿದ್ದು. ಪ್ರಭಾವ ಕಡಿಮೆ ಮಾಡುವ ಪ್ರಯತ್ನ ಮಾಡುತ್ತೇನೆ. ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಅನ೦ತ್

    ReplyDelete
  27. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸಾಗರಿ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  28. ಅಧ್ಬುತವಾದ ಸಾಲುಗಳು ಭಾವನೆಗಳನ್ನು ಉಕ್ಕಿಸುತ್ತವೆ ಎ೦ದು ಪ್ರತಿಕ್ರಿಸಿ ಪ್ರೋತ್ಸಾಹಿಸಿದ ನಾಗರಾಜ್ ಸರ್ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  29. ಪಂಚಮಿ ಕವನ ಬಹಳ ಸರಳವಾಗಿ, ಅಣ್ಣ-ತಂಗಿಯ ಮಧುರ ಬಾಂಧವ್ಯವನ್ನು ಹೊರಹೊಮ್ಮಿಸುವಲ್ಲಿ ಯಶಸ್ವಿಯಾಗಿದೆ, ಭಾವನೆಗಳೇ ಇಲ್ಲದೇ ಬದುಕುವ ಇಂದಿನ ಜನಾಂಗ ಹಿಂದಿನ ಕೆಲವಾದರೂ ಹಬ್ಬಗಳನ್ನು ಆಚರಿಸುವ ಮೂಲಕ ಅಂತಹ ಆಪ್ತತೆ ಮೆರೆಯಬೇಕು, ತಮಗೆ ಧನ್ಯವಾದಗಳು

    ReplyDelete
  30. ಕವನ ಮೆಚ್ಚಿ ಬರೆದು ತಿಳಿಸಿದ ಭಟ್ ರವರಿಗೆ ಧನ್ಯವಾದಗಳು

    ಅನ೦ತ್

    ReplyDelete
  31. ಭಾವ ಪೂರ್ಣವಾದ ಪ೦ಚಮಿ ಕವನ ಚೆನ್ನಾಗಿದೆ. ಅಣ್ಣ ತ೦ಗಿಯ ಬಾ೦ಧವ್ಯವನ್ನು ಎತ್ತಿ ತೊರಿಸುವ೦ತಿದೆ. ಆದರೆ ತ೦ಗಿಯರನ್ನು ಆಮ೦ತ್ರಿಸದೆ ಹೊಸಮನೆಯ ಗೃಹಪ್ರವೇಶ ಮಾಡಿಕೊ೦ಡ ಅಣ್ಣನೂ ಇಲ್ಲಿದ್ದಾನೆ!

    ReplyDelete
  32. ಕವನವನ್ನು ಮೆಚ್ಚಿದ ರಾಘು ಗೆ ಧನ್ಯವಾದಗಳು

    ಅನ೦ತ್

    ReplyDelete
  33. ಅಣ್ಣ ತ೦ಗಿಯ ಬಾ೦ಧವ್ಯದ ನಿರೂಪಣೆಯನ್ನು ಮೆಚ್ಚಿ ತಿಳಿಸಿದ ಪ್ರಭಾಮಣಿಯವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  34. ಮೆಚ್ಚಿ ಬರೆದು ತಿಳಿಸಿದ್ದಕ್ಕೆ ವ೦ದನೆಗಳು ಶ್ರೀಕಾ೦ತ್.

    ಅನ೦ತ್

    ReplyDelete
  35. ನಾಗರಪಂಚಮಿಯ ಕವನ ಚನ್ನಾಗಿದೆ ಸರ್

    ReplyDelete
  36. sir nimma kavanadalli sahodara bandavyada varnane tumbaa sogasaagide.abinandanegalu.

    ReplyDelete