Sunday, August 8, 2010

ಬೆಳಕಿನ ಬಾಗಿಲು


ತಂಗಾಳಿಯಿಂದ
ತೂರಿ ಬಂದ

ಲಹರಿಗೆ

ಮನದ ಕದವ

ತೆರೆದು

ವ್ಯಾಪಿಸಲು
ಅನುಮತಿಸೆ,
ಅತಿಥಿಯಷ್ಟೇ

ಆಗದೆ ಉಳಿದು
ಬಿಮ್ಮನೆ ಬೆಸೆದು

ರಾಗದ ತಂತಿಯ
ಮೇಲೆ ನರ್ತಿಸಿ

ಮೊಗ್ಗಿಗೆ ಉಸಿರಾಡಿಸಿ
ತನುವ ಅರಳಿಸಿ

ಸುವಾಸನೆಯ
ಕಂಪನ್ನು ಪಸರಿಸಿ
ಭಾವಕೆ ಅನುಭೂತಿಸಿ
ಕರವ ಪಿಡಿದು

ಬೆಳಕಿನ ಬಾಗಿಲ ತೆರೆದು
ಮುದದಿ ಮುನ್ನಡೆಸೆ....

ಎಲ್ಲೆಡೆಯೂ

ವ್ಯಾಪಿಸಿದ
ಬರೀ ಬೆಳಕು...!

ಲಹರೀ,

ನೀ ಕಾಣಲೊಲ್ಲೆ...

ಓಹ್....
ನಾನೂ ಕಾಣಲೊಲ್ಲೆ... !




ಚಿತ್ರಕೃಪೆ : ಅಂತರ್ಜಾಲ

25 comments:

  1. ಬೆಳಕಿನ ಬಾಗಿಲು ತೆರೆದು, ಮನಸ್ಸನ್ನೆಲ್ಲ ಉಲ್ಲಾಸದಿಂದ ತುಂಬುತ್ತದೆ ನಿಮ್ಮ ಈ ಕವನ!

    ReplyDelete
  2. ಸುಂದರ ಅನುಭೂತಿಗಳಿಂದ ತುಂಬಿದ ಸುಂದರ ಕವನ.ನಾಲಕ್ಕು ಸಲ ಮತ್ತೆ ಮತ್ತೆ ಓದಿ ಆನಂದಿಸಿದೆ.

    ReplyDelete
  3. ಸು೦ದರ ಭಾವನಾತ್ಮಕ ಕವನ....ಚೆನ್ನಾಗಿದೆ.

    ReplyDelete
  4. ಭಾವನಾತ್ಮಕವಾಗಿದೆ,
    ಬೆಳಕಿನ ಬಾಗಿಲು ತೆರೆದು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ನಿಮ್ಮ ಕವನ ಇಷ್ಟ ಆಯ್ತು.

    ReplyDelete
  5. ಬೆಳಕಿನ ಬಾಗಿಲು ಉಲ್ಲಾಸ ತ೦ದಿತು ಎ೦ದು ಕವನಕ್ಕೆ ಮೆಚ್ಚುಗೆ ಸೂಚಿಸಿದ ಸುನಾತ್ ಸರ್ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  6. ಕವನ ನಿಮಗೆ ಮುದ ನೀಡಿತೆ..?ಡಾ.ಮೂರ್ತಿ ಸರ್.. ವ೦ದನೆಗಳು.

    ಅನ೦ತ್

    ReplyDelete
  7. ಕವನವನ್ನು ಮೆಚ್ಚಿ ತಿಳಿಸಿದ ಮನಮುಕ್ತಾ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  8. ಕವನಕ್ಕೆ ಮೆಚ್ಚುಗೆ ತಿಳಿಸಿದ ಮನಸು ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  9. ಬೆಳಕಿನ ಬಾಗಿಲು ತೆರೆದು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಭಾವವನ್ನು ಗುರುತಿಸಿ ಮೆಚ್ಚುಗೆ ಸೂಚಿಸಿದ ಪ್ರವೀಣ್ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  10. ಕವನ ಸು೦ದರ ಎ೦ಚು ಮೆಚ್ಚುಗೆ ತಿಳಿಸಿದ ಸಾಗರಿ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  11. ಅರಿವಿನ ಲಹರಿಯನ್ನು ಒಳ ಹರಿಯಲು ಬಿಟ್ಟಾಗ, ಅದು ಸಂಪೂರ್ಣವಾಗಿ ನಮ್ಮೊಳಗೆ ವ್ಯಾಪಿಸಿ, ಬೆಳಕಿನ ಬಾಗಿಲು ತೆರೆದು ಕೈ ಹಿಡಿದು ನಡೆಸಿದಾಗ, ನಮ್ಮನ್ನೇ ವ್ಯಾಪಿಸಿಕೊಂಡ ಲಹರಿಯಲ್ಲಿ ಲೀನವಾಗಿದ್ದ ನಾವು, ಇಬ್ಬರೂ ಶುಭ್ರ, ಪ್ರಖರ, ದೈವೀಕ ಬೆಳಕಿನಲ್ಲಿ, ಅಣುವಾಗಿ ಸೇರಿಹೋಗುವ ಸಾಂಕೇತಿಕ ಅರ್ಥವೇ ಅನಂತ್ ಸಾರ್..? ನಿಮ್ಮ ಕವನದ ಭಾವನೆ / ಪರಿಕಲ್ಪನೆ ನನಗೆ ತುಂಬಾ ಇಷ್ಟವಾಯಿತು. ಕವನ ಚಿಕ್ಕದಾಗಿದ್ದರೂ ನಿಜಕ್ಕೂ ಅರ್ಥಪೂರ್ಣವಾಗಿದೆ, ಮನಸ್ಸಿಗೆ ಮುಟ್ಟುವಂತಿದೆ. ಧನ್ಯವಾದಗಳು....

    ಶ್ಯಾಮಲ

    ReplyDelete
  12. ಸಾಂಕೇತಿಕ ಅರ್ಥದಲ್ಲಿ ಬದುಕಿನ ಬೆಳಕ ದೀಪ ನಮ್ಮೊಳಗೇ ಬೆಳಗುವ ಪರಿ ಅದ್ಭುತವಾಗಿ ವಿವರಿಸಿದ್ದಿರಾ....
    ಅರಿವೇ ಗುರು!
    ಚೆಂದದ ಲೇಖನ!

    ReplyDelete
  13. ಸರ್

    ತುಂಬಾ ಚೆನ್ನಾಗಿದೆ ಕವನ
    ಸಾಲುಗಳು ಇಷ್ಟವಾದವು

    ReplyDelete
  14. ಅರಿವಿನ ಲಹರಿಯ ಒಳ-ಹರಿವು ನೀಡುವ ಅನುಭೂತಿಯ concept ನಲ್ಲಿ ಬರೆದ ಒ೦ದು ಕವನ ಶ್ಯಾಮಲಾ..ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.

    ಅನ೦ತ್

    ReplyDelete
  15. ಕವನವನ್ನು ಓದಿ ಮೆಚ್ಚುಗೆ ಸೂಚಿಸಿದ ಡಾ.ಗುರುಮೂರ್ತಿ ಸರ್ ಅವರಿಗೆ ಧನ್ಯವಾದಗಳು

    ಅನ೦ತ್

    ReplyDelete
  16. ಅರಿವೇ ಬೆಳಕು, ಬೆಳಕಿನ ಲಹರಿ ಚೆನ್ನಾಗಿ ಮೂಡಿಬಂದಿದೆ, ಧನ್ಯವಾದಗಳು

    ReplyDelete
  17. ಅರಿವಿನ ಲಹರಿಯನ್ನು ಮೆಚ್ಚಿದ ಭಟ್ ಸರ್ ಗೆ ವ೦ದನೆಗಳು.

    ಅನ೦ತ್

    ReplyDelete
  18. ಬೆಳಕಿನ ಬಾಗಿಲು ಸರಳ ಸುಂದರವಾಗಿದೆ

    ಸಾರ್,

    ನನ್ನ ಬ್ಲಾಗಿಗೆ ಬಂದು ಪದ್ಯ ಓದಿದ್ದಕ್ಕಾಗಿ ಥ್ಯಾಂಕ್ಸ್

    ReplyDelete
  19. ಸಾಲುಗಳು ಇಷ್ಟವಾದವು... ವ೦ದನೆಗಳು.

    ReplyDelete
  20. ಬ್ಲಾಗಿಗೆ ಸ್ವಾಗತ ಹಾಗೂ ಕವನ ಸು೦ದರ ಎ೦ದ ನಿಮಗೆ ಧನ್ಯವಾದಗಳು ಬದರೀನಾಥ್ ಅವರೆ.

    ಅನ೦ತ್

    ReplyDelete
  21. ಕವನದ ಸಾಲುಗಳು ಇಷ್ಟ ಪಟ್ಟು ತಿಳಿಸಿದ್ದಕ್ಕೆ ಪ್ರಗತಿ ಹೆಗ್ಗಡೆ ನಿಮಗೆ ಧನ್ಯವಾದಗಳು.

    ಅನ೦ತ್

    ReplyDelete
  22. ಅನಂತ್ ಸರ್, ಅಭಿನಂದನೆಗಳು
    ಬಾಗಿಲನು ರೆತೆದು ತಂಗಾಳಿ ಒಳ ಬಂದರೆ....
    ಏನೆಲ್ಲ ಭಾವಮಂಥೆನೆ ಸಾಧ್ಯ ಮತ್ತು ಅದನ್ನು ಹೇಗೆಲ್ಲಾ ಬಣ್ಣಿಸಬಹುದು ಎನ್ನುವುದನ್ನು ಪದಗಳ ಹಂದರದಲ್ಲಿ ಬಂಧಿಸಿ ಕವಿತೆಯಾಗಿ ಹರಿಯಬಿಟ್ಟಿದ್ದು ...ವಾವ್..ಸುಂದರ....ಸಾಲುಗಳು!!

    ReplyDelete
  23. ಕವನವನ್ನು ಮೆಚ್ಚಿದ ಅಜಾದ್ ಸರ್ ಗೆ ವ೦ದನೆಗಳು.

    ಅನ೦ತ್

    ReplyDelete