Friday, July 23, 2010

ಬೆಕ್ಕು...

ಚಿಕ್ಕ ವಯಸಲಿ ನಾನೊಂದು
ಬೆಕ್ಕು ಸಾಕಿದ್ದೆ...

ಕಪ್ಪನೆಯ ಮೋರೆಯ ಹಸಿರುಗಣ್ಣಿನ

ಬಿಳಿಮೀಸೆಯಡಿ

ಕಣ್ಣು ಕಿರಿದು ನಾಲಿಗೆ ಚಾಚುತ್ತಿರೆ

ನನಗದೇನೋ ಆನಂದ...

ಹಾಲಿನ ಪಾತ್ರೆಯನು ಬರಿದು ಮಾಡಿ

ಮೊಗವೆತ್ತಿ ನೋಡುವ ದರ್ಪ
ತಡಮಾಡಿದಲ್ಲಿ ಕಣ್ಣಲ್ಲೇ ತೋರುವ ಆಕ್ರೋಷ

ನನಗೆ ಅತೀ ಪ್ರಿಯ...

ಉತ್ಕಟ ಪ್ರೀತಿ ಇದ್ದರೂ

ಧುತ್ತನೆ ದ್ವೇಷ ತೋರುವ ಸ್ವಭಾವ

ಹೊಂಚು ಹಾಕಿ ಗಪ್ಪನೆ ಹಿಡಿಯುವ ಜಾಣತನ

ನನಗೆ ಬಲು ಇಷ್ಟ...

ಬೆಕ್ಕು ಸತ್ತಾಗ ನಾ ತುಂಬಾ ಅತ್ತೆ...

ಪುಣ್ಯಭೂಮಿ ಎನ್ನುವ ಸುಸಂಸ್ಕೃತ ನಾಡಿನಲಿ

ನಾ ಬೆಳೆದೆ...

ಹಸಿದವರನ್ನು ಹಸಿದ ಕಣ್ಣಲಿ ತಿನ್ನುವ

ಕ್ರೂರರ ನಡುವಿನಲಿ

ನಾ ಬೆಳೆದೆ...

ಬಡತನದಿ ಬತ್ತಿದವರ ಬೆತ್ತಲಾಗಿಸುವ
ಭ್ರಷ್ಟರ ನಡುವಿನಲಿ
ನಾ ಬೆಳೆದೆ..
ಅಂತರ್ಗತ ಬೆಕ್ಕಿನ ಸ್ವಭಾವಗಳು

ಚಿಮ್ಮಿ ಬಂದವು ನನ್ನಲಿ...

ಹಸಿದ ಕಣ್ಣಲಿ ನುಂಗುವವರ ಮೇಲೆರಗಿ

ಪರಚಲಾರಂಭಿಸಿದೆ...

ಬೆತ್ತಲಾಗಿಸುವ ಭ್ರಷ್ಟರ ಹಿಡಿದು

ಕಚ್ಚಲಾರಂಭಿಸಿದೆ...

ಆವೇಶಕ್ಕೊಳಗಾಗಿ

ಕಿರುಚಲಾರಂಭಿಸಿದೆ...

ಬೆಳಕೊಂದು ಹರಿದಾಗ ಗಮನಿಸಿದೆ...

ಕಣ್ಣು ಹಸಿರಾಗಿತ್ತು...

ಬಿಳಿ ಮೀಸೆ ಚಿಗುರಿತ್ತು...

ಕುರುಚಲು ಬಾಲ ಬೆಳೆಯತೊಡಗಿತ್ತು.....!

(ಚಿತ್ರಕೃಪೆ : ಅಂತರ್ಜಾಲ...)

29 comments:

 1. channaagude.. manassalli mrugeeya bhaavanegalu moledaroo adu dhanaatmakavaagide....!!

  ReplyDelete
 2. ಇದೊಂದು ಉತ್ತಮ ಸಂಕೀರ್ಣ ಕವನ. ಬೆಕ್ಕಿನ ಚಲ್ಲಾಟವನ್ನು ಚಿತ್ರಿಸುತ್ತಲೇ,ಆ ಪ್ರಾಣಿಯ instincts ಹೇಳಿದ್ದೀರಿ. ಅವೇ ಭಾವನೆಗಳು ನಾವು ಬೆಳೆದಂತೆ ನಮ್ಮಲ್ಲಿ ಬಿಂಬಿಸುವ ಪರಿಯನ್ನು ತೋರಿಸಿದ್ದೀರಿ.

  ReplyDelete
 3. tumba channagidae namma manae bekku kuda nanage nenapu bertidae ....kavanada vishesha andre bekkina bagge heluttale nimma bavanegalannu adra jote holikae madi channagi kavana kattidira

  ReplyDelete
 4. ಬೆಕ್ಕು ನನ್ನ ಮೆಚ್ಚಿನ ಪ್ರಾಣಿ. ಬೆಕ್ಕಿನ ವರ್ಣನೆ ಮಾಡುತ್ತಲೆ ಮನುಷ್ಯರಲ್ಲಿರುವ ವರ್ತನೆಯನ್ನು ಸೊಗಸಾಗಿ ವಿವರಿಸಿದ್ದೀರ

  ReplyDelete
 5. ಸುಂದರ ಫೋಟೋ
  ಚೆಂದದ ಕವನ

  ReplyDelete
 6. ಮನುಷ್ಯನ ಸ್ವಭಾವತ ಕಾಮನೆಯನ್ನು ಬೆಕ್ಕಿಗೆ ಸಾಂಕೆತಿಸಿ ಅದ್ಭುತ ಕವನರಚನೆ ಮಾಡಿದ್ದಿರಾ...ಧನ್ಯವಾದಗಳು.

  ReplyDelete
 7. ಚನ್ನಾಗಿದೆ ಕವನ

  ReplyDelete
 8. ಅನಂತರಾಜ್ ,

  ಮಾರ್ಜಾಲದ ವರ್ಣನೆ ಚೆನ್ನಾಗಿದೆ..
  ಜೊತೆಗೆ ಸುತ್ತಮುತ್ತಲ ಜಾಲದ ಚಿತ್ರಣ ಚೆನ್ನಾಗಿ ಬೆಸೆದುಕೊಂಡಿದೆ..

  ReplyDelete
 9. ಅನಂತ್ ಸರ್,
  ಬೆಕ್ಕಿನಂತೆ ಮೃಗೀಯವಾದರೂ ಉದ್ಧೇಶ ಒಳ್ಳೆಯದೇ ಇದ್ದಿದ್ದು ಸಂತೋಷ...
  ಚಂದದ ಕವನ.

  ReplyDelete
 10. ಒಳಗಿನ ರೋಷವನ್ನು ಬೆಕ್ಕು ಆರ್ಭಟಿಸಿ, ಕಿರುಚಿ-ಪರಚಿ ತೋರಿಸಿದಷ್ಟು ಬೇರಾವ ಪ್ರಾಣಿಯೂ ತೋರಿಸಲಾರದು, ಮನುಷ್ಯನ ಒಳಗೂ ಬೆಕ್ಕಿನ ರೋಷ ಅಡಗಿದೆ ಎಂಬುದನ್ನು ಬೆಕ್ಕಿನ ಚಿತ್ರ-ಚಿತ್ರಣದೊಂದಿಗೆ ಚಿತ್ರಿಸಿದ ನಿಮ್ಮ ನಿಲುವು ಚೆನ್ನಾಗಿದೆ. ಧನ್ಯವಾದಗಳು

  ReplyDelete
 11. ಬೆಕ್ಕಿನ ರೂಪದಲ್ಲಿರುವ ಅಂತರ್ಗತ ಭಾವನೆಗಳ ಚಿತ್ರಣ ಸಕ್ಕತ್...ಅನಂತ್ ಸಾರ್.. ವಾಸ್ತವಿಕತೆಯನ್ನು ಚಿತ್ರಿಸಿದ್ದೀರಿ, ನಮ್ಮೆಲ್ಲರ ಒಳಗೊಂದು ವ್ಯವಸ್ಥಯ ವಿರುದ್ಧ ಸಿಡಿದೇಳ ಬಯಸುವ ಭಾವವಿದೆಯೆಂಬುದು ಸತ್ಯ. ಅದು ಕೆಲವೊಮ್ಮೆಯಾದರೂ ಹೀಗೆ ಹೊರಬರುತ್ತದೇನೋ ಎಲ್ಲರಿಗೂ... ತುಂಬಾ ಅರ್ಥಪೂರ್ಣವಾಗಿದೆ ಕವನ. ಜೊತೆಗೆ ಕವನದ ಭಾವಕ್ಕೆ ಹೊಂದಿಕೊಳ್ಳುವಂತಿರುವ ಬೆಕ್ಕಿನ ಚಿತ್ರ..!!! ಧನ್ಯವಾದಗಳು

  ಶ್ಯಾಮಲ

  ReplyDelete
 12. Ananth Sir,
  Kavana thumbaa chennagide.
  Thanks for visiting nan-prapancha:-)

  ReplyDelete
 13. ಮೊಮ್ಮದಲು ಪ್ರತಿಕ್ರಿಯಿಸಿದ ವಿಜಯಶ್ರೀ ಅವರಿಗೆ ಧನ್ಯವಾದಗಳು.
  ಸುನಾತ್ ಸರ್ -ಭಾವ ವಿಕಾರಗಳು ಸ್ವರೂಪ ವಿಕಾರಕ್ಕೂ ಕಾರಣವಾಗಬಹುದು ಎನ್ನುವ concept ಇಟ್ಟುಕೊ೦ಡು ರಚಿಸಿದ ಕವನವಿದು. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ತಮಗೆ ಧನ್ಯವಾದಗಳು.
  ಮೆಚ್ಚಿಗೆ ಸೂಚಿಸಿದ ಮನಸು ಅವರಿಗೆ ಧನ್ಯವಾದಗಳು.
  ಕವನಕ್ಕೆ ಮೆಚ್ಚಿದ್ದಕ್ಕೆ ಶ್ರೀಕಾ೦ತ್ ಅವರಿಗೆ ಧನ್ಯವಾದಗಳು.

  ReplyDelete
 14. ಪ್ರತಿಕ್ರಿಯಿಸಿದ ದೀಪಸ್ಮಿತ ಸರ್ ಅವರಿಗೆ ವ೦ದನೆಗಳು. ಬೆಕ್ಕಿನ ಸಾಕಷ್ಟು ಸ್ವಭಾವಗಳು ಮನುಷ್ಯನ ಸ್ವಭಾವಕ್ಕೆ ಹೋಲುತ್ತವೆ.
  ಡಾ.ಗುರುಮೂರ್ತಿ ಮತ್ತು ಹರೀಶ್ ಗೆ ಕವನವನ್ನು ಮೆಚ್ಚುಗೆಗೆ ವ೦ದನೆಗಳು.
  ಕವನ ಮೆಚ್ಚಿದ ಸೈತಾರ೦ ಸರ್ ಅವರಿಗೆ ಧನ್ಯವಾದಗಳು.

  ReplyDelete
 15. ಮಾರ್ಜಾಲದ ವರ್ಣನೆಯನ್ನು ಮೆಚ್ಚಿದ "ಕತ್ತಲು ಮನೆ" ಹಾಗೂ "ಮನದಾಳದಿ೦ದ" ಅವರಿಗೆ ಧನ್ಯವಾದಗಳು.
  "ಮನುಷ್ಯನ ಒಳಗೂ ಬೆಕ್ಕಿನ ರೋಷ ಅಡಗಿದೆ".. ಎ೦ದು ಪ್ರತಿಕ್ರಿಯಿಸಿ ಕವನವನ್ನು ಮೆಚ್ಚಿದ ಭಟ್ ಸರ್ ಅವರಿಗೆ ವ೦ದನೆಗಳು.

  ReplyDelete
 16. ನಮ್ಮೆಲ್ಲರ ಒಳಗೊಂದು ವ್ಯವಸ್ಥಯ ವಿರುದ್ಧ ಸಿಡಿದೇಳ ಬಯಸುವ ಭಾವವಿದೆ ಅದು ಕೆಲವೊಮ್ಮೆಯಾದರೂ ಹೀಗೆ ಹೊರಬರುತ್ತದೇನೋ ಎ೦ದು ಪ್ರತಿಕ್ರಿಯಿಸಿ, ಭಾವಕ್ಕೆ ಹೊಂದಿಕೊಳ್ಳುವಂತಿರುವ ಬೆಕ್ಕಿನ ಚಿತ್ರ..!!! ಎರಡನ್ನೂ ಮೆಚ್ಚಿಕೊ೦ಡ ಶ್ಯಾಮಲಾ ಅವರಿಗೆ ಧನ್ಯವಾದಗಳು(ಚಿತ್ರಣಕ್ಕಿ೦ತಲೂ ಚಿತ್ರವೇ ಚೆ೦ದವಿದೆಯೇನೋ?)..

  ReplyDelete
 17. ಕವನವನ್ನು ಮೆಚ್ಚಿಕೊ೦ಡ ಮನಮುಕ್ತಾ ಅವರಿಗೆ ಮತ್ತು ಬ್ಲಾಗ್ ಗೆ ಮೊಮ್ಮದಲು ಭೇಟಿಯಿತ್ತ ವನಿತಾ ಅವರಿಗೂ ಧನ್ಯವಾದಗಳು.

  ReplyDelete
 18. ಆಹಾ... ಸೊಗಸಾದ ಕವನ ಸರ್....ಇದರಲ್ಲಿ ಬೆಕ್ಕಿನ ವರ್ಣನೆ , ಮನುಷ್ಯನ ವರ್ತನೆ ಎರಡನ್ನೂ ಬಿಂಬಿಸಿದ್ದೀರಿ ಸರ್......

  ನನ್ನ ಬ್ಲಾಗ್ ಗೂ ಬನ್ನಿ ಸರ್....

  ReplyDelete
 19. ಬ್ಲಾಗ್ ಗೆ ಭೇಟಿ ನೋಡಿ ಕವನವನ್ನು ಮೆಚ್ಚಿದ ದಿನಕರ್ ಅವರಿಗೆ ಧನ್ಯವಾದಗಳು.

  ReplyDelete
 20. ಚೆಂದದ ಫೋಟೋದೊಂದಿಗೆ ಅಂದದ ಕವನ .ಚೆನ್ನಾಗಿದೆ ಸರ್

  ReplyDelete
 21. ಬ್ಲಾಗಿಗೆ ಭೇಟಿ ನೀಡಿ ಚಿತ್ರ ಮತ್ತು ಚಿತ್ರಣ ಎರಡನ್ನೂ ಮೆಚ್ಚಿದ ಶಶಿ ಅವರಿಗೆ ಧನ್ಯವಾದಗಳು.

  ಅನ೦ತ್

  ReplyDelete
 22. anant sir ...

  Kavana Chennagide ...

  ReplyDelete
 23. ಬ್ಲಾಗಿಗೆ ಸುಸ್ವಾಗತ ಹಾಗೂ ಕವನ ಮೆಚ್ಚಿದ್ದಕ್ಕೆ ವ೦ದನೆಗಳು ಶ್ರೀಧರ್..
  ಅನ೦ತ್

  ReplyDelete
 24. ಬೆಕ್ಕನ್ನು ಪ್ರತಿಮೆಯಾಗಿ ಇಟ್ಟುಕೊ೦ಡು ಬದುಕಿನ ವಾಸ್ತವತೆಯನ್ನು ಅ೦ದವಾಗಿ ಚಿತ್ರಿಸಿದ್ದೀರಿ. ಧನ್ಯವಾದಗಳು.

  ReplyDelete
 25. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಪ್ರಭಾಮಣಿ ನಾಗರಾಜ್ ಅವರಿಗೆ ಧನ್ಯವಾದಗಳು.

  ಅನ೦ತ್

  ReplyDelete
 26. ಕವನದ ಭಾವಾರ್ಥವನ್ನು ತುಂಬಾ ಚೆನ್ನಾಗಿ ಅನಾವರಣ ಮಾಡಿರುವಿರಿ..

  ಅಭಿನಂದನೆಗಳು ಸುಂದರ ಕವನಕ್ಕೆ...

  ReplyDelete
 27. ಬ್ಲಾಗಿಗೆ ಸ್ವಾಗತ ಪ್ರಕಾಶ್ ಸರ್. ಕವನಕ್ಕೆ ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.

  ಅನ೦ತ್

  ReplyDelete