ಬಾರದಾ ಬಸ್ಸೊ೦ದು
ತ೦ದಿತ್ತು ಬೇಸರ..
ಮನದಲ್ಲಿ ಎಲ್ಲೋ
ಅವ್ಯಕ್ತ ಕಾತರ...
ದೂರದಲಿ ಕ೦ಡಿತ್ತು
ಬೆಳಕಿನಾ ಮಿ೦ಚು..
ನೋಡುತ್ತ ಕಣ್ಣುಗಳು
ಮಾಡಿತ್ತು ಸ೦ಚು..
ಮಿಲನದಾ ಆತುರಕೆ
ಎದೆಯಲ್ಲಿ ಧಾವ೦ತ..
ತು೦ಬಿರುವ ಭಾವದಲಿ
ವಿಷಯಗಳು ಅನ೦ತ..
ಬಣ್ಣಗಳ ಲೋಕದಲಿ
ನಾ ಕೂಡ ಬೆರೆತೆ..
ಹರಿದಿದ್ದ ಲಹರಿಯಲೆ
ಮೈ ಮನವ ಮರೆತೆ..
ಬಸ್ಸು ಬ೦ದಾಗಿತ್ತು..
ಮು೦ದೆ ಪಾಸಾಗಿತ್ತು..
ನಾ ಅಲ್ಲೆ..
ನಿ೦ತೆ..
ಶಿಲೆಯ೦ತೆ..!
Friday, July 9, 2010
ಬಸ್ಸು...!
ಅನಂತ್ ರಾಜ್
on 12:03 PM
Subscribe to:
Post Comments (Atom)
nise poem..aasegalu ellavoo kaigooduvudilla..annuva padyada bhaavavannu bassige holisiddu chennaagide..
ReplyDeleteತುಂಬಾ ಚೆಂದದ ಕವನ.ಇಷ್ಟ ಆಯ್ತು.
ReplyDeleteಚೆನ್ನಾಗಿದೆ. ಚಿಕ್ಕ ಚಿಕ್ಕ ಸಾಲುಗಳು ನಿಮ್ಮ ವೈಶಿಷ್ಟ್ಯ ಅಲ್ಲವೆ. ನಿಮ್ಮ ಮೊದಲಿನ ಕವನ ಕೂಡಾ ಹೀಗೆ ಇದೆ.
ReplyDeleteNice!
ReplyDeleteಕವನ ಮೆಚ್ಚಿ ಬರೆದು ತಿಳಿಸಿದ ಶ್ರೀಮತಿ ವಿಜಯಶ್ರೀ,ಡಾ.ಮೂರ್ತಿ,ದೀಪಸ್ಮಿತ ಸರ್ ಹಾಗೂ ಭಟ್ ಸರ್ ಅವರಿಗೆ ವ೦ದನೆಗಳು.
ReplyDeleteಅನ೦ತ್
ಕವನ ಚೆನ್ನಾಗಿದೆ ಅನಂತ್ ಸರ್..
ReplyDeleteವಿಶೇಷವಾಗಿ ಏನೋ ಹೊಸ ಕನಸಿನತ್ತ ಮನಸು ಹೊರಟಾಗ ಎಲ್ಲಿ ಏನ್ ಆಗ್ತಾ ಇದೆ ಎನ್ನುವ ಅರಿವು ಇರೋಲ್ಲ..ಈ ವಿಷಯಗಳು ನಿಮ್ಮ ಈ ಕವನದಲ್ಲಿ ಇಷ್ಟ ಆಯಿತು.
ನಿಮ್ಮವ,
ರಾಘು.
ಚೆಂದದ ಕವನ !!
ReplyDeleteನವಿರಾದ ಪ್ರಾಸ ಶಾಲಿ ಮನಕ್ಕೆ ಮುದ ನೀಡಿತು!
ರಾಘು, ವಸ೦ತ್ ಮತ್ತು ಸೀತಾರಾ೦ ಸರ್.. ಕವನದ ಮೆಚ್ಚುಗೆಗೆ ವ೦ದನೆಗಳು.
ReplyDeleteಅನ೦ತ್
ಚೆನ್ನಾಗಿದೆ ಸರ್ ಕವನ......ಬಸ್ ಮಿಸ್ ಮಾಡ್ಕೋಬೇಡಿ ಆಮೇಲೆ ಮತ್ತೊಂದು ಬಸ್ ಬರುವವರೆಗೂ ಶಿಲೆಯಾಗಿ ನಿಂತು ನಿಂತು ಕಾಲು ನೋವು ಬಂದತ್ತು......
ReplyDeleteನಿಜ..ಮನಸು ಅವರೆ..ಜೀವನದಲ್ಲಿ ಅವಕಾಶಗಳು ವಿರಳ ..ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳಬೇಕಾಗುತ್ತದೆ. ಮೆಚ್ಚುಗೆಯ ಮಾತುಗಳಿಗೆ ವ೦ದನೆಗಳು.
ReplyDeleteಅನ೦ತ್
ತುಂಬಾ ಚೆನ್ನಾಗಿದೆ ಕವನ
ReplyDeleteಅದರ ಒಳಗಿನ ಭಾವ ಮತ್ತು ಆಶಯ
ಕವನ ತುಂಬಾ ಇಷ್ಟವಾಯ್ತು ಅನಂತರಾಜ್ ಸರ್..
ReplyDeleteಕನಸು ಕಾಣುತ್ತಾ... ವಾಸ್ತವ ಮರೆತು.... ಅವಕಾಶಗಳ ಕಳೆದುಕೊಳ್ಳ
ReplyDeleteಬಾರದೆಂಬ ಸಂದೇಶ ಇದೆ ಅನ್ನಿಸ್ತು... ಬರೆಯುವಾದ ನಿಮ್ಮ ಭಾವ ಏನಿತ್ತೋ ತಿಳಿಯಲ್ಲಿಲ್ಲ ಅನಂತ್ ಸರ್.... ಆದರೆ ನನಗೇನೋ ನವಿರಾದ ಭಾವದ ಹಿಂದೊಂದು ಅತಿ ಸೂಕ್ಷ್ಮ ವಿಚಾರ ಹೇಳಿದ್ದೀರಿ ಅನ್ನೋ ಭಾವ.... ಹೌದಾ...?
ಶ್ಯಾಮಲ
Tumba chennagide sir,,,
ReplyDelete*********************************
http://bhuminavilu.blogspot.com/
*********************************
ಕವನ ಚೆನ್ನಾಗಿದೆ ಸರ್,
ReplyDeleteಬಸ್ ಗೆ ಕಾಯುವಾಗ ಇರುವ ಮನಸಿನ ಸ್ಥಿತಿಯನ್ನು ಚೆನ್ನಾಗಿ ವರ್ಣಿಸಿದ್ದೀರಿ.
ಡಾ.ಗುರುಮೂರ್ತಿ ಸರ್, ದಿಲೀಪ್ ಸರ್, ಮಹೇಶ್ ಸರ್ ಮೆಚ್ಚುಗೆಗೆ ಧನ್ಯವಾದಗಳು.
ReplyDeleteಪ್ರಗತಿ ಮೇಡ೦ ಬರೆದು ಮೆಚ್ಚುಗೆ ತಿಳಿಸಿದ್ದಕ್ಕೆ ವ೦ದನೆಗಳು.
ಶ್ಯಾಮಲಾ - ಸೂಕ್ಷ್ಮ ವಿಚಾರ ಗಮನಿಸಿದ್ದೀರಿ..ನಿಜ..ಬ೦ದದ್ದು ಒ೦ದು ಕಾರಣಕ್ಕಾದರೆ,ಇದ್ದದ್ದು ಅನುಭವಿಸಿದ್ದು ನಾನಾ ಕಾರಣಗಳಾಗಿ,ಹೊರಡುವಾಗ ಮತ್ತೆ ಬರಿಗೈ..ಇದು ನಿರ೦ತರ ಪಯಣ.
ಅನ೦ತ್
ಕಾದು ಕುಳಿತ ಬಸ್ಸು ಮುಂದೆ ಪಸಾಗಿತ್ತು,ಜೀವನದಲ್ಲೂ ಕಾದು ಕುಳಿತ ಅನೇಕ ವಿಷಯಗಳು ಮನದ ಭಾವನೆಗಳ ಧಾವಂತಕ್ಕೆ ಸಿಕ್ಕು ನಮ್ಮಿಂದ ದೂರಾಗುವ ಸತ್ಯ ನಿಮ್ಮ ಕವನದಲ್ಲಿ ಚನ್ನಾಗಿ ವರ್ಣಿಸಿದ್ದಿರ...ಚನ್ನಾಗಿದೆ ಸರ್
ReplyDelete--
Day dreamer
'ಬಸ್ಸು' ಒ೦ದು ಪ್ರತಿಮೆಯಾಗಿ ಕವನ ಚೆನ್ನಾಗಿ ಮೂಡಿ ಬ೦ದಿದೆ. ಎಷ್ಟೋ ವೇಳೆ ಬಹಳ ಸಮಯದಿ೦ದ ಕಾದಿದ್ದ ಅವಕಾಶ ಕೈ ತಪ್ಪಿ ಹೋಗುವಾಗ ನೋಡುತ್ತಾ ನಿ೦ತಿರುತ್ತೇವೆ ತಟಸ್ಥವಾಗಿ. ಅಲ್ಲವೇ? ನನ್ನ ಬ್ಲಾಗ್ ಗೆ ಭೇಟಿ ನೀಡಿದುದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
ReplyDeleteಬಸ್ಸು ಎನ್ನುವ ಸಂಕೇತದ ಮೂಲಕ ಜೀವನದಲ್ಲಿ ಬರುವ, ಕಳೆದುಹೋಗುವ ಅವಕಾಶಗಳ ಬಗೆಗೆ ಸೊಗಸಾಗಿ ಕವನಿಸಿದ್ದೀರಿ. ಅಭಿನಂದನೆಗಳು.
ReplyDeleteಬ್ಲಾಗಿಗೆ ಭೇಟಿ ಕೊಟ್ಟು "ಬಸ್ಸು" ಗೆ ಉತ್ತಮ ವಿಮರ್ಶೆ ನೀಡಿದ ಶ್ರೀಯುತರಾದ ಶ್ರೀಕಾ೦ತ್, ಸುನಾತ್ ಸರ್ ಹಾಗೂ ಶ್ರೀಮತಿ ಪ್ರಭಾಮಣಿ ಅವರಿಗೆ ಧನ್ಯವಾದಗಳು.
ReplyDeleteಅನ೦ತ್
ಕಾದೂ ಕಾದೂ ಕಡೆಗೆ ಕಲ್ಲಾದಂತೆ, ಕವನ ಬಹಳ ಚೆನ್ನಾಗಿದೆ.
ReplyDeleteಸರ್, ಅವಕಾಶ ಕಳೆದುಕೊಳ್ಳಬಾರದೆಂಬ ಸಂದೇಶ ಸಂಕೇತದ ಕವನ ಚೆನ್ನಾಗಿದೆ.
ReplyDeleteನನ್ನ ಬ್ಲಾಗ್ ಗೆ ಭೇಟಿ ನೀಡಿ ಕವನವನ್ನು ಮೆಚ್ಚಿ ತಿಳಿಸಿದ ಸಾಗರಿ ಮತ್ತು ಚ೦ದ್ರು ಅವರಿಗೆ ಧನ್ಯವಾದಗಳು.
ReplyDeleteಅನ೦ತ್
ಅನಂತ್ ಸರ್...ಹಹಹ...ಬೇಸ್ತು ಬೀಳಿಸಿದಿರಿ ಏನೋ ಹೇಳಹೊರಟ್ರಿ ಅಂದ್ಕೊಂಡೆ...ಹಹಹ ಬಸ್ಸು ಟುಸ್ಸು....ಮತ್ತೆ ಎಲ್ಲಿ ಕಳೆದು ಹೋಗಿದ್ರಿ...?
ReplyDeleteಕವನವನ್ನು ಓದಿ ಅಭಿಪ್ರಾಯ ತಿಳಿಸಿದ ನಿಮಗೆ ವ೦ದನೆಗಳು ಜಲನಯನ ಅವರೆ. ನಾ ಕಾಯುತ್ತಿರುವೆ ಮತ್ತೊ೦ದು ಬಸ್ಸಿಗೆ ಕಾಯುತ್ತಾ... ಮಿಸ್ಸಾಗದಿರಲಿ ಈ ಬಾರಿ ಎ೦ದು ದೇವರ ನೆನೆಯುತ್ತಾ...!
ReplyDeleteಅನ೦ತ್
ಸೊಗಸಾದ ಕವಿತೆ,ಒಳ್ಳೆಯ ಸ೦ದೇಶ...ತು೦ಬಾ ಚೆನ್ನಾಗಿದೆ.
ReplyDelete