ರಂಗಧಾಮದ ರಂಗ ಧರೆಯಲ್ಲಿ ಉದಯಿಸಿದ
ಅಂತರಂಗದಾ ಒಲವ ಸೆಳೆದು ಬಯಲಾಗಿಸಿದ ||
ಕಣ್ಣಲ್ಲಿ ಕಣ್ಣಿಟ್ಟು ಕಣ್ಣಾ ತಾನೆನಿಸಿದ
ಮಣ್ಣಲ್ಲಿ ಕುಣಿಯುತ ಕಣಕಣದಿ ನೆಲೆಸಿದ
ಹುಣ್ಣೀಮೆ ಬೆಳಕಲಿ ತಣ್ಣಾನೆ ಗಾಳಿಯಲಿ
ಚಿಣ್ಣಾರ ಒಡಗೂಡಿ ಚಿನ್ನಾಟ ನಡೆಸಿದ .. ||೧||
ಮೋಹನ ರಾಗದಲಿ ಮುರಳೀಯ ನುಡಿಸುತ
ಮೋಹಕ ಭಾವಗಳ ಬಹಿರಂಗಗೊಳಿಸಿದ
ಶೃಂಗಾರ ಲೀಲೆಯ ಅನಾವರಣ ಮಾಡುತ
ಸಂಗಾ ಸುಖದ ಬಯಕೆ ಉತ್ತುಂಗಕ್ಕೇರಿಸಿದ.. ||೨||
ಉದಾಸ ಮನದಲ್ಲಿ
ಉಲ್ಲಾಸ ತುಂಬಿಸುತ
ಗೋಕುಲ ಬಾಲಕ ವ್ಯಾಕುಲ ಹರಿಸಿದ
ಚಿನ್ಮಯ ರೂಪದ ಅನಂತ ಶಯನನು
ಚಿಂತಿತ ಚಿತ್ತದಲಿ ಚಿತ್ತಾರ ಚಿತ್ರಿಸಿದ.. ||೩||
https://soundcloud.com/shyamalarao/rangadhama
ಮಧುರವಾದ ಭಕ್ತಿಗೀತೆ. ಓದಿ ಹಾಗು ಕೇಳಿ ಆನಂದವಾಯಿತು.
ReplyDelete