ಕುಂದುಗಳ ಮನ್ನಿಸುವ ನಂದನ ಕಂದನೆ
ಬಂಧನದ ಸನ್ನೆಯಲಿ ಬಲು ನೊಂದಿಹೆನು
ಬಂದಿಹೆ ಭುವಿಗಿಂದು ತಂದೆ ಮುಕುಂದನೆ
ಸಂದೇಹವಿಲ್ಲದೆ ನೀ ಎನ್ನ ಸಲಹಯ್ಯ
ಸಂಚಿತ ಫಲಗಳ ಪ್ರಪಂಚದಿ ಭರಿಸಲು
ನಿಶ್ಚಲ ಭಾವಕ್ಕೆ ಪ್ರೇರಣೆ ನೀಡುತ
ನಿರುತ ಸ್ಥೈರ್ಯವನು ಜೀವಕೆ ಹರಿಸುತ
ಅರ್ಚಿಪ ಮನಸನು ಹೃದಯದಿ ನಿಲಿಸಯ್ಯ ||೧||
ಆಸಕ್ತವಾಗಲಿ ಚಿತ್ತ ಚಿನ್ಮಯನೆಡೆಗೆ
ವಿರಕ್ತವಾಗಲಿ ಸುತ್ತುವ ವಿಷಯದೆಡೆಗೆ
ಮುಕ್ತಭಾವದಿ ಮಾಧವನ ಭಜಿಸಲು
ಕಿಂಚಿತ್ತು ಭವಗಳು ಚುಕ್ತವಾಗಲಯ್ಯ ||೨||
ಇಹಪರ ಎಲ್ಲಕೂ ನಿನ್ನದೇ ರಕ್ಷಣೆ
ಅಹರ್ನಿಶಿ ಇರಲಯ್ಯ ನಿನ್ನಯ ಕರುಣೆ
ಮಹತ್ತಿಗೂ ಮಹಿಮ ನೀ ಅನಂತಶಯನನೆ
ಶರಣು ಬಂದಿಹ ಭಕುತರ ಪೊರೆಯಯ್ಯ ||೩||
https://soundcloud.com/
ಅನಂತರಾಜರೆ,
ReplyDeleteಕವನದಲ್ಲಿ ಭಗವದ್ಭಕ್ತಿ ಹಾಗು ಆರ್ತಭಾವ ಚೆನ್ನಾಗಿ ವ್ಯಕ್ತವಾಗಿವೆ. ಅನಂತಶಯನನು ನಮ್ಮೆಲ್ಲರನ್ನೂ ಪೊರೆಯಲಿ ಎಂದು ಹಾರೈಸುತ್ತೇನೆ.
Nimma mukta uttejanada nudi galige dhanyavadagalu Sunath Sir...:)
Delete