ನ೦ದನ ನ೦ದಗೆ ಬಾಲ ಮುಕು೦ದಗೆ
ಯಶೋದೆ ಕಂದಗೆ ನಾ ನಮಿಪೆ |
ಸು೦ದರ ವದನಕೆ ಚ೦ದನ ಲೇಪನ
ಗ೦ಧವ ಹಚ್ಚುತ ನಾ ನಮಿಪೆ ||
ವಸುದೇವ ಸುತನಿಗೆ ವಸುವಿನ ಒಡೆಯಗೆ
ವಾಸುದೇವನಿಗೆ ನಾ ನಮಿಪೆ |
ಹಸುಗೂಸಲಿ ತಾ ಅಸುರರ ಕೊ೦ದಿಹ
ಸಕಲರ ವ೦ದ್ಯಗೆ ನಾ ನಮಿಪೆ || ೧ ||
ಗೋಕುಲ ವಾಸಿಗೆ ಗೋವರ್ಧನನಿಗೆ
ಗೋಪಿಯ ಕ೦ದಗೆ ನಾ ನಮಿಪೆ |
ಹೆಂಗಳ ಹೃದಯದ ಬೆಣ್ಣೆಯ ಕದಿಯುವ
ಮಂಗಳ ಮೂರ್ತಿಗೆ ನಾ ನಮಿಪೆ || ೨ ||
ಹನುಮನ ಒಲವನು ಭೀಮನ ಬಲವನು
ಮಧ್ವರ ಗೆಲುವನು ನಾ ನಮಿಪೆ |
ಮಾನವ ಕುಲಕೇ ’ಗೀತೆ’ಯ ಬೋಧಕ
ಅನಂತಶಯನಗೆ ನಾ ನಮಿಪೆ || ೩ ||
http://soundcloud.com/shyamalarao/nandana-nanda
ತುಂಬ ಮಧುರವಾದ, ಭಕ್ತಿಪೂರ್ಣ ಗೀತೆ. ಅಭಿನಂದನೆಗಳು.
ReplyDeleteDhanyavaadagalu Sunaath Sir....
Deleteಅನಂತನ ಗುಣಗಾನ ಮಧುರ ಮಧುರವೀ ಈ ಜೀವನ.
ReplyDelete"ಹೆಂಗಳ ಹೃದಯದ ಬೆಣ್ಣೆಯ ಕದಿಯುವ" ವಾರೇವ್ಹಾ...
ReplyDeleteಒಳ್ಳೆಯ ಸುಮಧುರ ರಚನೆ.
Bhaktipoorna...Bhaavapoorna.... bahala ishtavaaytu rachane Ananth......
ReplyDeleteRoopa
ಅಭಿನಂದನೆಗಳು...
ReplyDelete𝕙𝕥𝕥𝕡𝕤://T.me/spn3187
(already joined to this group 1,400+)
ಮತ್ತು
https://spn3187.blogspot.com/
(already site viewed 3,28,823+)
ನಿಮ್ಮ ಪ್ರೀತಿ ಪಾತ್ರರಿಗೂ ತಿಳಿಸಿ
Share your friends & family also subscribe to say (joining)