Friday, March 4, 2011

ತುರಗ


ದೂರದಿ ತುರಗ

ಕೆನೆಯುತ

ಬರುವ ಸದ್ದು

ಮೈಮನ ಅರಳಿಸಿ

ಹೂಂಕಾರ ಎಚ್ಚರಿಸಿ

ಬೆಚ್ಚಿಸಿತು...

ಝೇಂಕಾರ ಎದೆ

ಝಲ್ಲೆನಿಸಿದರೂ

ಹಿತವಾಯಿತು...

ಏರುತ್ತ ಜೀಕುವ ತವಕಕೆ

ಜೀವ ಹಿಗ್ಗಿತು

ಹೈರಾಣಾಯಿತು

ಚೆಲುವು ತುಂಬಿಕೊಂಡು

ಕೆನೆಯು ಭಾವಕೆ

ಮನ ಕನವರಿಸಿತು

ತನು ಬಿಮ್ಮೆನಿಸಿತು

ಧುಮ್ಮಿಕ್ಕುವ ರಭಸದಿ

ಚಿಮ್ಮಿಸಿ, ತೋಯಿಸಿ,

ಮೀಯಿಸಿ ದೇಹ

ತಂಪಾಯಿತು...

ಎತ್ತರೆತ್ತರಕೆ ಜಿಗಿದು

ಭಾವೋನ್ಮಾದದ

ಉತ್ತುಂಗಕ್ಕೇರಿ

ಶಿಖರವ ಲಂಘಿಸ

ಬಯಸಿ...

ಕುಸಿಯಲು

ಪ್ರಪಾತದೆಡೆಗೆ...

ಬೆದರಿ ಕಣ್ಭಿಚ್ಚಿ

ವಾಸ್ತವಿಕತೆಯ

ಅರಿವಾಗಿ

ದೇಹ

ಮಗ್ಗುಲಾಯಿತು...!


ಚಿತ್ರಕೃಪೆ : ಅಂತರ್ಜಾಲ

26 comments:

 1. ಅನಂತರಾಜರೆ,
  ಕುದುರೆಯನ್ನು ಪ್ರತೀಕವಾಗಿ ಬಳಸಿ ನೀವು ಹೊಸೆದ ಕವನವು ಸೊಗಸಾಗಿದೆ. ಕವನದ ಓಟವು ಕುದುರೆಯ ನಡಿಗೆಯಲ್ಲಿಯೇ ಇರುವದು ಕವನದ ವೈಶಿಷ್ಟ್ಯ!

  ReplyDelete
 2. ಸುನಾತ್ ಸರ್ - ನಿಮ್ಮ ಮೆಚ್ಚುಗೆಯ ನುಡಿಗಳೇ ನನಗೆ ಬಹುಮಾನ. ಧನ್ಯವಾದಗಳು ಸರ್.


  ಅನ೦ತ್

  ReplyDelete
 3. ಅನಂತ್ ಸರ್;ಕುದುರೆಯನ್ನು ಪ್ರತಿಮಾಲಂಕಾರ ವಾಗಿ ಬಳಸಿಕೊಂಡಿರುವ ಕವನ ಸೊಗಸಾಗಿದೆ.ಅಭಿನಂದನೆಗಳು.

  ReplyDelete
 4. ಕುದುರೆಯ ಓಟ ಜೋರಾಗೆ ಇದೆ....ಅಷ್ಟೇ ಓದಿಸಿಕೊಂಡು..ಹೋಗುತ್ತೆ....

  ReplyDelete
 5. ಭ್ರಮಾಲೋಕದಿಂದ ವಾಸ್ತವದೆಡೆಗೆ ಎಳೆದ ಸಾಲುಗಳು ಚೆನ್ನಾಗಿ ಮೂಡಿವೆ.

  ReplyDelete
 6. ತುರುಗದ ಗತಿ ಮತ್ತು ಕವನದ ಗತಿ ಸಮ್ಮೀಳಿತವಾಗಿದೆ.
  ಕನಸಿನಲಿ ಮೂಡವ ಬಿಂಬಗಳಿಗೆ ಒಂದೊಂದು ಅರ್ಥವಿದೆಯಂತೆ..

  ReplyDelete
 7. ಚಂದಾ ಉಂಟು ಸರ್ ನಾನು ಎರಾಬೇಕಲ್ಲ ಒಮ್ಮೆ ಕುದುರೆಯ :-)

  ReplyDelete
 8. ಡಾ. ಕೃಷ್ಣಮೂರ್ತಿ ಸರ್ - ಕವನದಲ್ಲಿ ಓಟಕ್ಕೆ ಪ್ರಾಧಾನ್ಯವಿದೆ. ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಸರ್.

  ಅನ೦ತ್

  ReplyDelete
 9. ಕವನವನ್ನು ಓದಿ ಮೆಚ್ಚುಗೆ ಸೂಚಿಸಿದ ಆಶಾ ಅವರಿಗೆ ಧನ್ಯವಾದಗಳು.

  ReplyDelete
 10. ಕವನವನ್ನು ಮೆಚ್ಚಿ ಬರೆದು ತಿಳಿಸಿದ ವಿಜಯಶ್ರೀ ಅವರಿಗೆ ಧನ್ಯವಾಗಳು

  ReplyDelete
 11. kudureya kshipra gatiyannu mechchi baredu tilisida dr. chandrika avarige dhanyavaadagalu.

  ananth

  ReplyDelete
 12. @ gubbachchi satheesh blog odeyarige - namma jeevanada gati yu kuda avaastava dinda vaastava dedege saagabekaguttade. Illi adu sanketika vagide. mechchi baredu tilisida tamage dhanyavadagalu sir.

  ananth

  ReplyDelete
 13. @ appa-amma taanadavarige - mechchugeya nudugalige dhanyavadagalu sir. knasinalli mooduva bimbagalige arthaisuttare..naanu keliddeni sir.

  ananth

  ReplyDelete
 14. @ manju- kudure yerabeku anisite? bike gingtha hechchu thrill iratte...ansatte...:)

  dhanyavadaglu
  ananth

  ReplyDelete
 15. ಸರ್,
  ಕುದುರೆಯನ್ನು ರೂಪಕವಾಗಿ ಬಳಸಿಕೊಂಡು ಬರೆದ ಕವನ ಚೆನ್ನಾಗಿದೆ ಮತ್ತು ವೇಗವಾಗಿ ಓದಿಸಿಕೊಂಡು ಹೋಗುತ್ತದೆ.

  ReplyDelete
 16. ನಮ್ಮ ಜೀವನ ಏರುತ್ತಾ ಜೀಕುವ ರಭಸಕ್ಕೆ ಒಳಗಿರುವ ಪುಟ್ಟ ಜೀವ ಹಿಗ್ಗುತ್ತಲೇ ಹೈರಾಣಾಗಿ ಬಿಡುತ್ತದೆ... ಉತ್ಸಾಹ ಕೆನೆಯುವ ವೇಗಕ್ಕೆ ಮನ ತತ್ತರಿಸಿದರೂ, ಕನವರಿಸುತ್ತದೆ... ಆತ್ಮದ ಆ ಎತ್ತರೆತ್ತರಕೆ ಜಿಗಿಯುವ ಭಾವದ ತುಟ್ಟ ತುದಿಯ ಮುಟ್ಟುವ ತವಕಕ್ಕೆ ಈ ದೇಹ ತೊಯ್ದು, ಮೀಯ್ದು, ತಡೆಯಲಾರದೆ ಕುಸಿಯುತ್ತದೆ... ಕಣಿವೆಯಲ್ಲಿ ಜಾರಿ ನಾಮಾವಶೇಷವಿಲ್ಲದೇ ಗಾಳಿಯಲ್ಲಿ ತೇಲಿ ಬಿಡುವೆವೇನೋ ಎನ್ನುವಾಗ.. "ವಾಸ್ತವ"ವೆಂಬ ಭೌತಿಕದ ಅರಿವು.. ನಮ್ಮನ್ನು ವಾಪಸ್ಸು ಎಳೆದು ಬಿಟ್ಟಾಗ... ನಾವು ನಿಂತಲ್ಲಿಯೇ.. ಏನೂ ಸಾಧಿಸದೆ.. ಸಮಯ ವ್ಯರ್ಥವಾಗಿ ಕಳೆದು ಬಿಟ್ಟಿರುತ್ತೇವೆ... ಒಂದು ಜನ್ಮವೇ ಮುಗಿದು ಹೋಗಿರುತ್ತದೆ...! ಅನಂತ್ ಸಾರ್.. ನನಗೆ ತೋಚಿದ ಈ ಮಾತುಗಳು / ಭಾವ ನಿಮಗೆ ಸರಿಯೆನ್ನಿಸಿತೆ? ನಿಮ್ಮ ಭಾವ ಕವನ ರಚಿಸಿದಾಗ ಏನಿತ್ತೋ ತಿಳಿಯುವ ಕುತೂಹಲ ನನಗೆ..... !!!

  ReplyDelete
 17. sundaravaada shveta turagake arthagarbhitavaada kavana.

  ReplyDelete
 18. ಅನಂತ ಸರ್‍, 'ತುರಗ' - ಕವನವು ಜೀವ-ಮನದಲ್ಲಿ ತರಂಗಗಳನ್ನೆಬ್ಬಿಸಿತು. ಚೆನ್ನಾಗಿದೆ.

  ReplyDelete
 19. @ ಶ್ಯಾಮಲಾ - ನಿಮ್ಮ ಆಧ್ಯಾತ್ಮ ಚಿ೦ತನಾ ಲಹರಿಗೆ ಸ್ಪ೦ದಿಸುತ್ತಾ, ನನ್ನ ಮನಸಿನ ಭಾವ, ತುರಗವನ್ನು ಚಿತ್ರಿಸುವಾಗ, ವಾಸ್ತವ-ಅವಾಸ್ತವ ಬದುಕಿನ ಬಗ್ಗೆಯೇ ಸಾ೦ಕೇತಿಕವಾಗಿ ನಿರೂಪಿಸಲು ಪ್ರಯತ್ನಿಸಿದ್ದೇನೆ ಎ೦ದು ಹೇಳಲು ಇಚ್ಛಿಸುತ್ತೇನೆ. ಇಲ್ಲಿ ಭ್ರಮೆ ಎನಿಸುವುದು ಭ್ರಮೆಯಲ್ಲ, ವಾಸ್ತವ ಎ೦ದುಕೊಳ್ಳುವುದು ಅವಾಸ್ತವವಾಗಿದೆ ಎನ್ನುವ ವಿಚಾರವನ್ನು ಸೂಚ್ಯವಾಗಿ ಹೇಳ ಬಯಸಿದ್ದೇನೆ. ಸತ್ಯದ ಬೆನ್ನಟ್ಟಿ ಹೋಗುವ ಹಾದಿಯಲ್ಲಿ ಅನುಭವಿಸುವ "ಹಾವು-ಏಣಿ" ಆಟದ ಒ೦ದು ಸಣ್ಣ ಪರಿಚಯ..! ನಿಮ್ಮ ಚಿ೦ತನೆಯೂ ಈ ದಿಕ್ಕಿನಲ್ಲಿ ಇರುವುದು ಸ೦ತಸದ ವಿಚಾರ. ಧನ್ಯವಾದಗಳು.

  ಅನ೦ತ್

  ReplyDelete
 20. ಕಲಾವತಿ ಮೇಡ೦ - ಸು೦ದರ ಶ್ವೇತವನ್ನು ಮೆಚ್ಚಿ, ಕವನವೂ ಅರ್ಥಗರ್ಭಿತವಾಗಿದೆ ಎ೦ದು ತಿಳಿಸಿದ್ದೀರಿ. ಧನ್ಯವಾದಗಳು.

  ಅನ೦ತ್

  ReplyDelete
 21. ಚ೦ದ್ರು ಸರ್ - ಕವನವು ಜೀವ-ಮನದಲ್ಲಿ ತರಂಗಗಳನ್ನೆಬ್ಬಿಸಿತು ಎ೦ದು ಮೆಚ್ಚಿ ತಿಳಿಸಿದ್ದೀರಿ.

  ಧನ್ಯವಾದಗಳು
  ಅನ೦ತ್

  ReplyDelete
 22. `ಖುರಪುಟ'ದ ಸದ್ದಿನ೦ತೆ ಕವನದ ಓಟ! ಸಾ೦ಕೇತಿಕವಾದ ಸು೦ದರ ಕವನ. ಅಭಿನ೦ದನೆಗಳು ಸರ್.

  ReplyDelete
 23. @ ಪ್ರಭಾಮಣಿ ಮೇಡ೦ - ಕುದುರೆಯ ಸ೦ಕೇತವನ್ನು ಆರಿಸಿಕೊ೦ಡದ್ದರಿ೦ದ ಕವನದಲ್ಲಿ ಓಟಕ್ಕೆ ಪ್ರಾಧಾನ್ಯ ಕೊಟ್ಟಿದ್ದೇನೆ. ಗುರುತಿಸಿ ಮೆಚ್ಚಿ ತಿಳಿಸಿದ್ದಕ್ಕೆ ಧನ್ಯವಾದಗಳು.

  ಅನ೦ತ್

  ReplyDelete
 24. ಅನಂತ್ ಸರ್,

  ತುಂಬಾ ಸೊಗಸಾದ ಕವನ...ಧನ್ಯವಾದಗಳು...

  ReplyDelete