ಶರಣು ಬಂದಿಹೆವು ತಾಯೆ ಶ್ರೀ ಗೌರಿ
ಶರಣರ ಹರಸು ನೀ ದಯೆ ತೋರಿ...||ಪ||
ಈಶನ ಕೈ ಪಿಡಿದ ಈಶ್ವರಿಯೇ
ಮಹಿಷನ ಮಡುಹಿದ ಚಾಮುಂಡೇಶ್ವರಿಯೇ
ಅಂದದಲಿ ಸಾಟಿಯಿಲ್ಲ ಅಂಬಿಕೆಯೇ
ಕೊಲ್ಲೂರು ಪುರವಾಸಿ ಮೂಕಾಂಬಿಕೆಯೇ..||೧||
ಮೃಡನ ಪಟ್ಟದ ರಾಣಿ ಮೃಡಾಣಿಯೇ
ಕೊಡು ದಿವ್ಯ ಮತಿಯನು ಶರ್ವಾಣಿಯೇ
ಪೊಡ ಮುಡುವೆವು ನಿನಗೆ ಪಾರ್ವತಿಯೇ
ದೃಢ ಭಕ್ತಿಯನು ನೀಡು ಜಗದಂಬಿಕೆಯೇ...||೨||
ಶಂಭುವಿನ ಪ್ರಿಯ ಮಡದಿ ಶಾಂಭವಿಯೇ
ಅಂಬುಜಾಕ್ಷಿ ನೀ ನಮ್ಮ ಭವಾನಿಯೇ
ಮಾಯಾಪಾಶಂಗಳ ಪೊರೆಯನು ಕಳಚುವ
ಅನಂತಶಯನನ ಭಕ್ತೆ ತ್ರಿಪುರಾಂಬಿಕೆಯೇ..||೩||
ಅಂತರ್ಜಾಲದ ಎಲ್ಲ ಮಿತ್ರರಿಗೂ ಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಚಿತ್ರಕೃಪೆ : ಅಂತರ್ಜಾಲ
ದೇವಿ ಸ್ತುತಿ ಚೆನ್ನಾಗಿದೆ.ನಿಮಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ReplyDeletechennaagide sir...
ReplyDeletenimagu habbada subhaashayagaLu...
ಅನಂತರಾಜರೆ,
ReplyDeleteಗೌರಿ ಹಬ್ಬಕ್ಕಾಗಿ ಸುಂದರ ಪ್ರಾರ್ಥನೆಯನ್ನು ನೀಡಿರುವಿರಿ. ಈ ಪ್ರಾರ್ಥನೆ ನಮ್ಮೆಲ್ಲರದೂ ಹೌದು.
ಗೌರಿ ಹಾಗು ಗಣೇಶ ಹಬ್ಬದ ಶುಭಾಶಯಗಳು.
ಪ್ರಾರ್ಥನಾ ಗೀತೆ ಚೆನ್ನಾಗಿದೆ ಸರ್.
ReplyDeleteನಿಮಗೂ ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳು.
ಸಾಲುಗಳು ಚೆನ್ನಾಗಿವೆ,
ReplyDeleteತಾಯಿ ಶ್ರೀಗೌರಿ ಎಲ್ಲರನ್ನೂ ಹರಸಲಿ.
ಹಬ್ಬದ ಶುಭಾಷಯಗಳು.
_ನನ್ನ ಬ್ಲಾಗಿಗೂ ಬನ್ನಿ: ವಿಘ್ನೇಶ್ವರನ ವಿಸರ್ಜನೆ
This comment has been removed by the author.
ReplyDeletedeviya bagegina prathi saalugagaluu bahala hidisidavu sir...odutta hodante adeno pulaka..bhakti sudhe harisutte...superb....
ReplyDeletenimagu gawri-ganesha habbada shubhashayagalu ..
@ ಡಾ.ಕೃಷ್ಣಮೂರ್ತಿ ಸರ್ - ನಿಮಗೂ ಗೌರಿಗಣೇಶನ ಹಬ್ಬದ ಶುಭಾಶಯಗಳು, ದೇವಿಸ್ತುತಿಯನ್ನು ಮೆಚ್ಚಿದ್ದೀರಿ, ಧನ್ಯವಾದಗಳು.
ReplyDeleteಅನ೦ತ್
@ದಿನಕರ್ -ಕವನವನ್ನು ಮೆಚ್ಚಿದ್ದೀರಿ ಧನ್ಯವಾದಗಳು.ನಿಮಗೂ ಗೌರಿಗಣೇಶನ ಹಬ್ಬದ ಶುಭಾಶಯಗಳು.
ReplyDeleteಅನ೦ತ್
@ ಸುನಾತ್ ಸರ್ -ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಸರ್.
ReplyDeleteತಮಗೂ ಮತ್ತು ಕುಟು೦ಬವರ್ಗದವರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ಅನ೦ತ್
@ ಮನಮುಕ್ತಾ ಮೇಡ೦ - ಪ್ರಾರ್ಥನಾ ಗೀತೆ ಚೆನ್ನಾಗಿದೆ ಎ೦ದು ಮೆಚ್ಚಿ ಬರೆದು ತಿಳಿಸಿದ್ದೀರಿ. ಧನ್ಯವಾದಗಳು. ನಿಮಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ReplyDeleteಅನ೦ತ್
@ ವಿಚಲಿತ ತಾಣದವರಿಗೆ _ ಸಾಲುಗಳು ಚೆನ್ನಾಗಿವೆ,ತಾಯಿ ಶ್ರೀಗೌರಿ ಎಲ್ಲರನ್ನೂ ಹರಸಲಿ ಎ೦ದು ಶುಭ ಹಾರೈಸಿದ್ದೀರಿ. ವ೦ದನೆಗಳು. ನಿಮಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ReplyDeleteಅನ೦ತ್
@ ಸುಷ್ಮಾ ಅವರಿಗೆ - ದೇವಿಯ ಸ್ತುತಿಯ ಪ್ರತಿ ಸಾಲುಗಳು ಭಕ್ತಿ ಸುಧೆಯನ್ನು ಹರಿಸಿದವು ಎ೦ದು ಪ್ರಶ೦ಸಿಸಿದ್ದೀರಿ. ವ೦ದನೆಗಳು. "ಅಮ್ಮ" ನ ಭಜಿಸುವಾಗ ಆಗುವ ಅನುಭವವೇ ಅದು. ಅವಳ ಅಕ್ಕರೆ, ಮಮತೆ, ವಾತ್ಸಲ್ಯಗಳು ಮೈಮನಗಳಲಿ ತು೦ಬಿ ಹರಿಯುತ್ತದೆ. ಧನ್ಯವಾದಗಳು, ನಿಮಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ReplyDeleteಅನ೦ತ್
ಮಹಾ ಮಾತೆಯ ಹಲವು ಅವತಾರಗಳನ್ನು ಸಕಾಲೀಕವಾಗಿ ಪೋಣಿಸಿಕೊಟ್ಟಿದ್ದೀರಿ ಸಾರ್. ನಿಮ್ಮೀ ಹೂವಿನ ಹಾರದಲ್ಲಿ ತಾಯಿಯ ಹೆಸರಿನ ಜೊತೆಯಲ್ಲಿ ಬಳಕೆಯಾಗಿರುವ ಭಾಷೆಯು ನಮ್ಮನ್ನು ಭಕ್ತಿ ಭಾವದಲ್ಲಿ ಪಾವನ ಮಾಡುತ್ತದೆ.
ReplyDeleteನಿಮಗೂ ನಿಮ್ಮ ಮನೆ ಮಂದಿಗೆಲ್ಲ ಗೌರಿ ಗಣೇಶಾ ಹಬ್ಬದ ಶುಭಾಶಯಗಳು.
ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com
Face book Profile : Badarinath Palavalli
ಸರ್, ದೇವೀ ಸ್ತುತಿಯು ಚೆನ್ನಾಗಿದೆ. ಹಾಡಿಕೊಳ್ಳುವಂತಿದೆ. ಶುಭಾಶಯಗಳು
ReplyDelete@ ಬದರೀನಾಥ್ - ಅಮ್ಮನ ಮು೦ದೆ ನಿ೦ತಾಗ ನಮ್ಮೆಲ್ಲರ ಭಕ್ತಿ ಭಾವಗಳು ಉತ್ತು೦ಗದಲ್ಲಿ ಹರಿಯಲಾರ೦ಭಿಸುತ್ತವೆ. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. ನಿಮಗೂ ಮತ್ತೆ ನಿಮ್ಮ ಮನೆಯ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಬದರೀ ಸರ್.
ReplyDeleteಅನ೦ತ್
@ ಚ೦ದ್ರು- ದೇವಿಯ ಸ್ತುತಿಯನ್ನು ಇಷ್ಟಪಟ್ಟಿದ್ದೀರಿ. ಧನ್ಯವಾದಗಳು ಹಾಗೂ ಗೌರಿಗಣೇಶ ಹಬ್ಬದ ಶುಭಾಶಯಗಳು.
ReplyDeleteಅನ೦ತ್
layabaddhavaada devistuti
ReplyDeleteistavaaitu.nimagu
gowri ganesha habbada
shubhaashayagalu.
ದೇವಿಯ ಸ್ತುತಿ ಚೆನ್ನಾಗಿದೆ,
ReplyDeleteಗೌರಿ ಗಣೇಶ ಹಬ್ಬದ ಶುಭಾಶಯಗಳು.........
@ಕಲಾವತಿ ಮೇಡ೦- ದೇವಿಸ್ತುತಿಯನ್ನು ಮೆಚ್ಚಿ ಬರೆದು ತಿಳಿಸಿದ್ದೀರಿ. ಧನ್ಯವಾದಗಳು ಹಾಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ReplyDeleteಅನ೦ತ್
@ಪ್ರವೀಣ್ - ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಹಾಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ReplyDeleteಅನ೦ತ್