Thursday, August 11, 2011

ಮಾರ









ಮಾರ ಬಂದನೇ ಸುಕುಮಾರ ಬಂದನೇ

ವೀರ ಬಂದನೇ ರಣಧೀರ ಬಂದನೇ...... ||ಪ||


ಹತ್ತೂರ ಸುತ್ತಲಲಿ ಮತ್ತೆ ಸುತ್ತೂರಿನಲಿ

ಚಿತ್ತ ಕೆಡಿಸುವ ಚೆಲುವ ಎತ್ತರದ ಶೂರನಿವ.... ||೧||


ಮೆರಗು ಕಣ್ಣಾಲಿಯಲಿ ಗರಿಯಾದ ದಿರಿಸಿನಲಿ

ಬೆರಗುಗೊಳಿಸುತ ಮನವ ತುರಗಾವ ಏರಿದವ... ||೨||


ಇಂಪಾದ ರಾಗದಲಿ ಮುರುಳೀಯ ನುಡಿಸುತ್ತ

ತಂಪು ಭಾವನೆಗಳ ಕಂಪನ್ನು ಹರಡಿದವ... ||೩||


ಎದೆಯಾ ಮಂದಿರದ ಕದವನ್ನು ತಟ್ಟುತ್ತಾ

ಹದಿಹರೆಯದ ಪೋರಿಯರ ಹೃದಯಾವ ಗೆಲ್ಲುವವ...||೪||


ಚೆಂದಾದ ವದನಾದಿ ಮಂದಹಾಸವ ಬೀರಿ

ಸುಂದರೀ ಎನ್ನುತಲಿ ಎದುರಲ್ಲೇ ನಿಂತವ... ||೫||


ಹತ್ತಿದ ತುರಗಾದಿ ಸುತ್ತಿ ಬಳಸುತ ಎನ್ನ

ಧುತ್ತನೇ ಕೆಳಗಿಳಿದು ಮೆತ್ತಗೇ ಕೈ ಪಿಡಿದ... ||೬||


ದೇವ ಬಂದನೇ ವಾಸುದೇವ ಬಂದನೇ

ನಂದ ಬಂದನೇ ಗೋವಿಂದ ಬಂದನೇ ||||


ಚಿತ್ರಕೃಪೆ : ಅಂತರ್ಜಾಲ



13 comments:

  1. ಅನಂತ್ ಸರ್;ಸುಂದರವಾಗಿದೆ ಕವನ.ಧನ್ಯವಾದಗಳು.

    ReplyDelete
  2. ಅನಂತರಾಜರೆ,
    ಮುರಳೀಮನೋಹರ ದೇವನ ಸಮ್ಮೋಹಕ ವ್ಯಕ್ತಿತ್ವವನ್ನು, ಭಕ್ತನ ಮೇಲೆ ಆತ ಬೀರುವ ಸಮ್ಮೋಹಿನಿಯನ್ನು ಗೇಯವಾದ ಕವನದಲ್ಲಿ ಮಧುರವಾಗಿ ವರ್ಣಿಸಿದ್ದೀರಿ. ಓದುತ್ತ, ಹಾಡಿಕೊಳ್ಳುತ್ತ ಖುಶಿಯನ್ನು ಅನುಭವಿಸಿದೆ.

    ReplyDelete
  3. anatharaaj sir,
    kavana odutaa hodante
    raagavu niraayaasavaagi
    militavaagutaa hadisikolluvantaha geyagite,bhaktipoornavaagide.
    dhanyavaadagalu.

    ReplyDelete
  4. ಅನಂತ್ ಸರ್,

    ಸುಂದರವಾದ ಭಕ್ತಿಗೀತೆ ಸರ್...ಸರಳ ಪದಗಳಲ್ಲಿ ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲ ಬಹುದಾದ , ಹಾಗೆಯೇ ರಾಗವಾಗಿ ಹಾಡಬಹುದಾದ ಸಾಲುಗಳು... ತುಂಬಾ ಇಷ್ಟವಾಯಿತು...ಧನ್ಯವಾದಗಳು...

    ReplyDelete
  5. ಭಾಷೆಯ ಸೊಗಡು ಸುಮ್ಮನೆ ಹಾಡಿಕೊಳ್ಳುವಂತೆ ಮಾಡಿತು. ನಂದನ ಕಂದ ಗೋವಿಂದನ ನೆನೆದರೇ ಸಾಕು ತಂಪು ಭಾವನೆಗಳ ಕಂಪು ನಮ್ಮ ಅನುಭವಕ್ಕೆ ಬರುತ್ತದೇನೋ ಅನ್ನಿಸಿತು ಅನಂತ್ ಸಾರ್. ತುಂಬಾ ಇಷ್ಟವಾಯಿತು... :-)

    ಶ್ಯಾಮಲ

    ReplyDelete
  6. ಭಕ್ತಿ ಸುಧೆಯನ್ನು ಹರಿಸಿದ ಕವಿತೆ ,ಸುಂದರವಾದ ಅರ್ಥ ಪೂರ್ಣವಾದ ಕವಿತೆ , ನಿಮ್ಮ ಕವಿತೆ ಓದಿ ಸಂತಸಪಟ್ಟೆ.

    ReplyDelete
  7. @ ಡಾ.ಕೃಷ್ಣಮೂರ್ತಿ ಸರ್- ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.

    ಅನ೦ತ್

    ReplyDelete
  8. @ ಸುನಾತ್ ಸರ್ - ಗೇಯವಾದ ಕವನ ಮಾಧುರ್ಯವಾಗಿದೆ ಎ೦ದು ಮೆಚ್ಚಿದ್ದೀರಿ. ಧನ್ಯವಾದಗಳು ಸರ್.

    ಅನ೦ತ್

    ReplyDelete
  9. @ ಕಲರವ ತಾಣದವರಿಗೆ - ಭಕ್ತಿಪೂಣ೯ವಾದ ಗೇಯಗೀತೆ ಎ೦ದು ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ. ಧನ್ಯವಾದಗಳು ಮೇಡ೦.

    ಅನ೦ತ್

    ReplyDelete
  10. @ಅಶೋಕ್ - ರಾಗವಾಗಿ ಹಾಡಬಹುದಾದ ಸಾಲುಗಳು... ತುಂಬಾ ಇಷ್ಟವಾಯಿತು.. ಎ೦ದಿದ್ದೀರಿ. ತಮ್ಮ ಅಭಿಮಾನಕ್ಕೆ ನಾನು ಚಿರಋಣಿ ಸರ್.

    ಅನ೦ತ್

    ReplyDelete
  11. @ಶ್ಯಾಮಲಾ - ಗೇಯವಾದ ಪದ್ಯಗಳೇ ಹಾಗೆ.. ಭಾಷೆಯ ಸೊಗಡಿನ ಸವಿಯನ್ನು ಉಣಬಡಿಸುತ್ತವೆ. ಅದರಲ್ಲೂ ರಾಗ ಬಲ್ಲವರಿದ್ದರೆ, ಸ೦ಪೂರ್ಣವಾಗಿ ಅದನ್ನು ಅನುಭೂತಿಸಬಲ್ಲರು. ನಿಮ್ಮ ಆತ್ಮೀಯ-ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.

    ಅನ೦ತ್

    ReplyDelete
  12. @ಬಾಲು ಸರ್- ಭಕ್ತಿ ಸುಧೆಯನ್ನು ಹರಿಸಿದ ಕವಿತೆ ಎ೦ದು ಮೆಚ್ಚಿ ಬರೆದು ತಿಳಿಸಿದ್ದೀರಿ. ಧನ್ಯವಾದಗಳು

    ಅನ೦ತ್

    ReplyDelete
  13. ಅನಂತ್ ಸರ್,
    ಸುಂದರ ಗೀತೆ !
    ಕೃಷ್ಣಾಷ್ಟಮಿ ಶುಭಾಶಯಗಳು

    ReplyDelete