Thursday, July 14, 2011

ಗುರು ...







ನೆನೆನೆನೆದು
ನಲುಗಿ

ನೀರವ ಬದುಕಲಿ

ಬೆಂದು ಬಸವಳಿದು

ನೊಂದಿಹ ಮನಕೆ ..

ಭಾವ ಧಾರೆಯ

ಸಿಂಚನವನೊಮ್ಮೆ

ಕರುಣಿಸಿ

ನಿಸ್ತೇಜ

ಜೀವಕೋಶಗಳ

ಉತ್ಧಾನಿಸಿ

ಹೃನ್ಮನಗಳ

ಹುರಿದುಂಬಿಸಿ

ಅನವರತ ಆಶಯದ

ಅವಭೃತ ಮಾಡಿಸಿ

ಕಳೆಗುಂದಿದ ಕಣಗಳಿಗೆ

ಓಕುಳಿಯಾಡಿಸಿ

ಒಲುಮೆಯ ಚಿಲುಮೆಯಲಿ

ಮೀಯಿಸಿ ತೋಯಿಸಿ

ಪರಿಶೋಧಿಸಿ

ನನ್ನೆದೆಗೂಡನು

ನಿನ್ನ ಬೀಡಾಗಿಸು

ಗುರುವೇ

ಹೇ

ದೇವ...

ಬದುಕಿನಲ್ಲೊಮ್ಮೆ

ಬಂದು ಹರಸು

ಭವಗಳ ಹರಿಸು...


ಚಿತ್ರಕೃಪೆ : ಅಂತರ್ಜಾಲ


9 comments:

  1. ಗುರುಪೂರ್ಣಿಮೆಯ ಗುರುವಂದನೆಗೆ ಸುಂದರ ಪ್ರಾರ್ಥನೆಯನ್ನು ಮಾಡಿರುವಿರಿ. ನಿಮ್ಮೊಡನೆ ನಾನೂ ದನಿಗೂಡಿಸುತ್ತೇನೆ.

    ReplyDelete
  2. ಗುರುಪೂರ್ಣಿಮೆಯಂದು ಗುರುವಿಗಾಗಿ ರಚಿಸಿದ ಸಾಲುಗಳು ಚೆಂದವಾಗಿದೆ. ಗುರುವಿಗೆ ವಂದಿಪೆ...

    ReplyDelete
  3. Tumba chennagide nimma kavana...
    Nimmava,
    -Raghu

    ReplyDelete
  4. ಪದಗಳ ಸು೦ದರ ನರ್ತನದಿ೦ದ ಕೂಡಿದ ಪ್ರಾರ್ಥನಾ ಕವನ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ ಸರ್, ಅದಕ್ಕೊಪ್ಪುವ ಚಿತ್ರವನ್ನೇ ಹಾಕಿದ್ದೀರಿ. ಧನ್ಯವಾದಗಳು.

    ReplyDelete
  5. gurunamanake arthagarbhitavaada adbhutavaada kavana.abhinandanegalu anantharaaj sir.

    ReplyDelete
  6. kavanavannu mechchi baredu tilisida - sunath sir, guru sir, manjula devi, manasu taanadavaru, raghu, asha, prabhamani mattu kalarava taanadavarige tumbu hrudayada dhanyavaadagalu.

    ananth

    ReplyDelete