Thursday, July 7, 2011

ಜಲಲ ಜಲಲ ಜಲಧಾರೆ....








ಧರೆಗೆ ಧಾರೆಯಾಗಿ

ಧಾವಿಸುತ ಆವರಿಸಿ

ಧುಮ್ಮಿಕ್ಕಿ

ಹರಿದು ಬಂದರೂ

ಬರಿದಾಗಲಿಲ್ಲ...

ಮೊಗೆಮೊಗೆದು ಉಕ್ಕಿ ಬಂದರೂ

ಕರಗಲಿಲ್ಲ...

ಗಿರಿಯ ಬಳಸಿ ಬಂದರೂ

ತೊರೆಯು ತುಂಬಿ ಬಂದರೂ

ನೆರೆಯಾಗಲಿಲ್ಲ,

ಹೊರೆಯಾಗಲಿಲ್ಲ...

ಕೆರೆಯು ತುಂಬಿದರೂ

ಕೋಡಿ ಹರಿಯಲಿಲ್ಲ

ಕೇರಿಯ ಜೀವಗಳಿಗೆ

ಕೊರೆಯಾಗಲಿಲ್ಲ...

ಜೀವ-ಹನಿ, ಹನಿಸಿತು,

ಜೀವ-ಹಾನಿ ಆಗಲಿಲ್ಲ...

ಕೊಳೆಯ ತೊಳೆಯಿತು,

ಪ್ರಳಯವಾಗಲಿಲ್ಲ....

ಇಳಿದಿಳಿದು ಬಂದಂತೆ...

ಇಳೆಯು ನಳನಳಿಸುತ್ತ

ಬಾಳ ಹಸನಾಗಿಸುತ್ತ

ಕಳೆದಿದ್ದ ಜೀವಕಳೆಯ

ಮರಳಿ ತುಂಬಿಸುತ್ತ

ಮಮತಾಮಯಿ

ಧರಿತ್ರಿಯ

ಮಾತೃಭಾವದಿ

ಬೆರೆತು

ಪವಿತ್ರವಾಯಿತು

ವಸುಧೆಯ

ಸೌಂದರ್ಯವನು

ಸಾರ್ಥಕವಾಗಿಸಿತು


22 comments:

  1. ಜಲಲ ಧಾರೆಗೆ ನಿಮ್ಮ ಕಸೂತಿ ಅಲಂಕಾರ ಚೆನ್ನಾಗಿದೆ, Nice !

    ReplyDelete
  2. ಈ ಕವನವನ್ನು ‘ಕರುಣಾ ಧಾರೆ’ ಎಂದು ವರ್ಣಿಸಲೆ? ಸೊಗಸಾದ ಕವನ.

    ReplyDelete
  3. ॒@ ಓ ಮನಸೇ.. ತಾಣದವರಿಗೆ - ತಮ್ಮ ಮೆಚ್ಚುಗೆಯ ನುಡಿಗಳಿಗೆ ವ೦ದನೆಗಳು.

    ಅನ೦ತ್

    ReplyDelete
  4. @ ಭಟ್ ಸರ್ - ಕಸೂತಿ ಅಲ೦ಕಾರದ ಉಪಮೆಗೆ ಧನ್ಯವಾದಗಳು.

    ಅನ೦ತ್

    ReplyDelete
  5. @ಕವಿತ - ತಮ್ಮ ಮೆಚ್ಚುಗೆಗೆ ಧನ್ಯವಾದಗಳು ಮೇಡ೦...

    ಅನ೦ತ್

    ReplyDelete
  6. @ ಮನಮುಕ್ತಾ - ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಅನ೦ತ್

    ReplyDelete
  7. @ ಸುನಾತ್ ಸರ್ - ಕರುಣಾಧಾರೆ...ಇನ್ನು ಹೆಚ್ಚು ಸೂಕ್ತ ಎನ್ನಿಸಿತು. ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

    ಅನ೦ತ್

    ReplyDelete
  8. tumba chennagide sir kavana. istavaayitu

    ReplyDelete
  9. ಸೊಗಸಾಗಿದೆ ಸರ್ ಜಲಧಾರೆಯ ಕವನ. ಧನ್ಯವಾದಗಳು

    ReplyDelete
  10. @ಆಶಾ ಮೇಡ೦- ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ವ೦ದನೆಗಳು.

    ಅನ೦ತ್

    ReplyDelete
  11. @ ಮನಸು ತಾಣದವರಿಗೆ - ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ. ವ೦ದನೆಗಳು.

    ಅನ೦ತ್

    ReplyDelete
  12. @ ಪ್ರಭಾಮಣಿ ನಾಗರಾಜ್ - ಜಲಧಾರೆಯ ಕವನವನ್ನು ಇಷ್ಟಪಟ್ಟೀದ್ದಿರಿ. ವ೦ದನೆಗಳು ಮೇಡ೦.

    ಅನ೦ತ್

    ReplyDelete
  13. waw....vry nice lines sir....n balasida chithra kuda ondu reethiya freshnes feel kodatte...Tanq....

    ReplyDelete
  14. @ ಪ್ರದೀಪ್ - ಮೆಚ್ಚುಗೆಯ ನುಡಿಗಳಿಗೆ ವ೦ದನೆಗಳು.

    ಅನ೦ತ್

    ReplyDelete
  15. @ ಗಿರೀಶ್ - ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಅನ೦ತ್

    ReplyDelete
  16. @ ಮೌನರಾಗ ತಾಣದವರಿಗೆ - ನಿಮಗೆ ಸ್ವಾಗತ. ಚಿತ್ರ-ಚಿತ್ರಣವನ್ನೂ ಮೆಚ್ಚಿ ಬರೆದು ತಿಳಿಸಿದ್ದೀರಿ. ಧನ್ಯವಾದಗಳು.

    ಅನ೦ತ್

    ReplyDelete