Wednesday, November 3, 2010

ದೀಪಗಳ ಹಬ್ಬ - ದೀಪಾವಳಿ.....

ಗಣೇಶ ಚೌತಿಯಿಂದ ಆರಂಭಿಸಿ ದೀಪಾವಳಿಯವರೆಗೂ ಬರುವ ಹಬ್ಬಗಳ ಸಾಲುಗಳು, ಆಚರಣೆ ಇರುವ ಎಲ್ಲರ ಮನೆಯಲ್ಲಿಯೂ ಸಡಗರದ ವಾತಾವರಣವನ್ನುಂಟು ಮಾಡುತ್ತವೆ. ಸಾಂಸ್ಕೃತಿಕವಾಗಿ ಸಂಬಂಧಗಳನ್ನು ಒಗ್ಗೂಡಿಸುವ ಮತ್ತು ಉಳಿಸುವ ಪ್ರಯತ್ನ ಯಾಂತ್ರಿಕ ಜೀವನದಲ್ಲಿ, ಕನಿಷ್ಟ ಹಬ್ಬಗಳ ಮೂಲಕವಾದರೂ ಉದ್ದೀಪನಗೊಳಿಸುವ ದಿಸೆಯಲ್ಲಿ, ನಮ್ಮ ಸಂಸ್ಕೃತಿಯ ಕೊಡುಗೆ ಅಪಾರ. ಹಬ್ಬಗಳನ್ನು ನಾವು ಸಡಗರ-ಸಂಭ್ರಮದಿಂದ ಆಚರಿಸುತ್ತೇವಾದರೂ ಅವುಗಳ ಆಚರಣೆಯ ಹಿನ್ನೆಲೆಯ ಅರಿವು ಇಲ್ಲದೆ, ಬರಿಯೆ ಸಿಹಿ ತಿನಿಸುಗಳ ಸ್ವಾದಿಸುವ ಮೂಲಕ ಸಂತೋಷ, ಹರಟೆಗಳಲ್ಲಿ ಸಮಯವನ್ನು ಕಳೆದು, ಅಮೂಲ್ಯವಾದ ಸಾಂಸ್ಕೃತಿಕ ಆಚರಣೆಗಳ ಮಹತ್ವವನ್ನು ನಾವು ಬದಿಗೊತ್ತಿರುವುದು ವಾಸ್ತವಿಕ ಸಂಗತಿಯಾಗಿದೆ. ನಾಳೆ ಬೆಳಗಾದರೆ ದೀಪಾವಳಿ ನಮ್ಮ ಮನೆ ಬಾಗಿಲ ಮುಂದಿದೆ.

ದೀಪಾವಳಿ - ಹೆಸರೇ ಹೇಳುವಂತೆ ದೀಪಗಳ ಸಮೂಹ. ಮನೆಯ ತುಂಬ ಪ್ರಣತಿಗಳನ್ನು ಹಚ್ಚಿ ಅದರ ನಗುವಿನಲ್ಲಿ ನಾವು ನಗುತ್ತಾ ಸಂಭ್ರಮಿಸುವುದು. "ದೀಪಯತಿ ಸ್ವಂ ಪರ ಇತಿ ದೀಪ:" - ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. ತಮಸೋಮಾ ಜ್ಯೋತಿರ್ಗಮಯ ಎಂಬ ಮಾತಿನ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ... ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬ ದೀಪಾವಳಿ.

ದೀಪಾವಳಿಯನ್ನು ಐದು ದಿನಗಳ ಹಬ್ಬವನ್ನಾಗಿ, ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ. ಆಶ್ವಯುಜದ ಕೊನೆ ಮತ್ತು ಕಾರ್ತೀಕ ಮಾಸದ ಆರಂಭದ ದಿನಗಳಲ್ಲಿ ಅದ್ಧೂರಿಯ ಆಚರಣೆ... ತ್ರಯೋದಶಿ ಹಬ್ಬದ ಮೊದಲ ದಿನ. ದೀಪಾವಳಿ ಹಬ್ಬವನ್ನು ಶ್ರೀ ರಾಮಚಂದ್ರನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದ ದಿನವೆಂದೂ... ಶ್ರೀ ಕೃಷ್ಣನು ನರಕಾಸುರನನ್ನು ಕೊಂದ ದಿನವೆಂದೂ ಆಚರಿಸುತ್ತಾರೆ.

ದೀಪೇನ ಲೋಕಾನ್ ಜಯತಿ ದೀಪಸ್ತೇಜೋಮಯ: ಸ್ಮೃತ: |
ಚರುರ್ವರ್ಗಪ್ರದೋ ದೀಪಸ್ತಸ್ಮಾದ್ ದೀಪೈರ್ಯಜೇತ್ ಪ್ರಿಯೇ ||

ತೇಜೋಮಯವಾದ ದೀಪವು ಧರ್ಮ, ಅರ್ಥ, ಕಾಮ, ಮೋಕ್ಷ ರೂಪವಾದ ಚರುರ್ವರ್ಗಪ್ರದವಾಗಿದೆ ಹಾಗೂ ದೀಪವನ್ನು ಬೆಳಗಿಸು ಎಂದು ಶ್ಲೋಕವು ಸಾರುತ್ತದೆ. ನರಕ ಚತುರ್ದಶಿಯು ದೀಪಾವಳಿಯ ಪ್ರಮುಖ ದಿನ. ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನು ಶಾಸ್ತ್ರವು ಹೇಳಿರುತ್ತದೆ.

ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಂ ಚತುರ್ದಶಿ |
ಪ್ರಾತ: ಸ್ನಾನಂ ತು : ಕುರ್ಯಾದ್ಯಮಲೋಕಂ ಪಶ್ಯತಿ ||

ತೈಲದಲ್ಲಿ ಲಕ್ಷ್ಮೀದೇವಿಯೂ, ನೀರಿನಲ್ಲಿ ಗಂಗೆಯೂ ದೀಪಾವಳಿಯ ಚತುರ್ದಶಿಯಂದು ವಿಶೇಷವಾಗಿ ಸನ್ನಿಹಿತರಾಗಿರುತ್ತಾರೆ ಎಂದು ಶಾಸ್ತ್ರ ತಿಳಿಸುತ್ತದೆ. ಅಂದು ಬೆಳಿಗ್ಗೆ ಸುಮಂಗಲೆಯರಿಂದ ತೈಲವನ್ನು ಹಚ್ಚಿಸಿಕೊಂಡು ಆರತಿ ಮಾಡಿಸಿಕೊಳ್ಳುವುದು ನಂತರ ಅಭ್ಯಂಜನವನ್ನು ಮಾಡುವುದು ಹಬ್ಬದ ಪ್ರಮುಖ ಅಂಗ. ಅಭ್ಯಂಗನ ಸ್ನಾನದ ನಂತರ ಹೊಸ ಬಟ್ಟೆ ಧರಿಸಿ, ಮನೆಯ ಹಿರಿಯರಿಗೆ ನಮಸ್ಕರಿಸಿ, ಸಿಹಿ ತಿಂದು ಪಟಾಕೆ ಹಚ್ಚುತ್ತಾರೆ ಮಕ್ಕಳು..... ಅಷ್ಟೇ ಅಲ್ಲದೆ ಅಂದು ನರಕಾಸುರನ ಸಂಹಾರ ಮಾಡಿ ಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ. ಪದ್ಧತಿಯಂತೆ ಇಂದಿಗೂ ಆರತಿ ಮಾಡುವುದು ಸಂಪ್ರದಾಯದಂತೆ ಬೆಳೆದು ಬಂದಿದೆ.

ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯಂದು ರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮೀ ಪೂಜೆಯನ್ನು ಮಾಡಿ, ಮನೆಯ ತುಂಬಾ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ದಿನ ತುಂಬಾ ಪ್ರಶಸ್ತವಾದ ದಿನ ಲಕ್ಷ್ಮೀ ಪೂಜೆಗೆ. ಇದು ಶ್ರೀ ಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ , ನಚೀಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೆಂದೂ ಹೇಳುತ್ತಾರೆ.

ನಾಲ್ಕನೆಯ ದಿನವನ್ನು ಬಲಿ ಪಾಡ್ಯಮಿ ಎಂದು ಕರೆಯುತ್ತಾರೆ. ವಿಷ್ಣು ಪುರಾಣದ ಪ್ರಕಾರ ಶ್ರೀ ಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ. ಆದ್ದರಿಂದ ದಿನ ಗೋಪೂಜೆ ಹಾಗೂ ಗೋವರ್ಧನನ ಪೂಜೆಗೆ ಮಹತ್ವ. ಮನೆಯಲ್ಲಿನ ಎತ್ತುಗಳಿಗೂ ಪೂಜೆ. ಸ್ನಾನ ಮಾಡಿಸಿ, ಅರಿಸಿನ ಕುಂಕುಮ ಹಚ್ಚಿ, ಕೊಂಬಿಗೆ ಸೇವಂತಿಗೆ, ಚಂಡು ಹೂಗಳನ್ನು ಸುತ್ತಿ ಪೂಜಿಸುತ್ತಾರೆ. ನಮ್ಮೂರಿನಲ್ಲಿ ನಾವು ಚಿಕ್ಕವರಿದ್ದಾಗ, ಎತ್ತುಗಳ ಮೆರವಣಿಗೆ ಕೂಡ ಮಾಡುತ್ತಿದ್ದರು. ಗದ್ದೆಗಳಲ್ಲಿ, ಹೊಲಗಳಲ್ಲಿ ಧಾನ್ಯ ಲಕ್ಷ್ಮಿಯ ಪೂಜೆಯನ್ನೂ ಮಾಡುತ್ತಾರೆ. ಎತ್ತುಗಳ ಓಟದ ಸ್ಫರ್ಧೆ ಕೂಡ ನೋಡಿದ್ದ ನೆನಪು ಚಿಕ್ಕಂದಿನಲ್ಲಿ... ಹಾಗೇ ದಿನ ಮಹಾಬಲಿ ಭೂಮಿಗೆ ಬರುತ್ತಾನೆಂಬುದೂ ಒಂದು ನಂಬಿಕೆ. ಹೊಲ, ಗದ್ದೆಗಳಲ್ಲಿ ಬಲೀಂದ್ರನ ಸ್ಮರಣಾರ್ಥ ದೀಪಗಳನ್ನು ಕೂಡ ಹಚ್ಚಿಡುತ್ತಾರೆ.

ಐದನೆಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃ ದ್ವಿತೀಯಾ ಎಂದು ಆಚರಿಸುತ್ತಾರೆ. ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ. ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುತ್ತಾಳೆಂಬ ಪ್ರತೀತಿ.
ರೀತಿ ನಮ್ಮ ಸಂಸ್ಕೃತಿಯ ಸೊಬಗನ್ನು ನಾವು ಅರಿತು ಶ್ರದ್ಧೆಯಿಂದ ಆಚರಿಸಿದರೆ ಸಡಗರದ-ಸಂಭ್ರಮದ ಹಬ್ಬಗಳು ಅರ್ಥಪೂರ್ಣವೆನಿಸುತ್ತವೆ ಮತ್ತು ಸಂಭ್ರಮದ, ಸಡಗರದ ವಾತಾವರಣ ಮನೆಯಲ್ಲಿ ಧನಾತ್ಮಕ ತರಂಗಗಳನ್ನು ಆಹ್ವಾನಿಸುತ್ತದೆ.

ಸರ್ವರಿಗೂ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.....


ಚಿತ್ರಕೃಪೆ : ಅಂತರ್ಜಾಲ


24 comments:

 1. ಅನಂತ ಸರ್‍,
  ಸರಳವಾಗಿ ನಮ್ಮ ಸಂಸ್ಕೃತಿಯ ಬರಹ ಕೊಟ್ಟಿದ್ದೀರಿ. ಧನ್ಯವಾದಗಳು.
  ನಿಮ್ಮ ಕುಟುಂಬದವರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

  ಸ್ನೇಹದಿಂದ,

  ReplyDelete
 2. ದೀಪಾವಳಿಯ ಬಗ್ಗೆ ಒ೦ದು ಚೆ೦ದದ ಲೇಖನ...
  ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.

  ReplyDelete
 3. ಸರ್,

  ದೀಪಾವಳಿಯ ಬಗ್ಗೆ ಮತ್ತು ನಮ್ಮ ಸಂಕೃತಿಯ ಬಗ್ಗೆ ಸೊಗಸಾದ ಲೇಖನ. ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು.

  ReplyDelete
 4. ದೀಪಾವಳಿಯ ಮಹತ್ವವನ್ನು ಸಾರವ ಲೇಖನ. ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು

  ReplyDelete
 5. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಅನಂತರಾಜ್ ಸರ್. ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ....

  ವಸಂತ್

  ReplyDelete
 6. ದೀಪಾವಳಿಯ ಹಾರ್ದಿಕ ಶುಭಾಶಯಗಳು.....

  ReplyDelete
 7. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

  ReplyDelete
 8. ಒಳ್ಳೆಯ ಲೇಖನ, ನಿಮಗೂ ಕೂಡ ದೀಪಾವಳಿಯ ಶುಭಾಶಯಗಳು

  ReplyDelete
 9. ದೀಪಾವಳಿಯ ಕುರಿತು ಉತ್ತಮ ಮಾಹಿತಿಯ ಲೇಖನ ಸರ್, ದನ್ಯವಾದಗಳು ಮತ್ತು ದೀಪಾವಳಿಯ ಶುಭಾಶಯಗಳು

  ReplyDelete
 10. ಅನಂತರಾಜರೆ,
  ದೀಪಾವಳಿಯ ತಿರುಳನ್ನು ತೆರೆದು ತೋರಿಸಿದ್ದೀರಿ. ನಿಮಗೆ ದೀವಳಿಗೆಯ ಹಾರ್ದಿಕ ಶುಭಾಶಯಗಳು.

  ReplyDelete
 11. ಅನಂತ್ ಸರ್,

  ದೀಪಾವಳಿಯ ಹಿನ್ನಲೆಯನ್ನು ವಿಸ್ತಾರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು
  ದೀಪಾವಳಿ ಶುಭಾಶಯಗಳು

  ReplyDelete
 12. Ananth avare!!
  you are absolutely right. now a days festivals are limited to the extent of making and eating sweets and wearing new clothes, without knowing the significance of the festival. Hindu /Indian culture is so meaningful and colurful. you have provided valuable insight into the observance of Deepavali.
  thank you. wishing all a VERY HAPPY DEEPAVALI
  :-)
  malathi S

  ReplyDelete
 13. ಚ೦ದ್ರು ಅವರಿಗೆ - ಬರಹವನ್ನು ಮೆಚ್ಚಿ ಬರೆದಿದ್ದೀರಿ. ಧನ್ಯವಾದಗಳು ಹಾಗೂ ದೀಪಾವಳಿಯ ಶುಭಾಶಯಗಳು.

  ಅನ೦ತ್

  ReplyDelete
 14. @ ಮನಮುಕ್ತಾ ಮೇಡ೦ - ಬರಹ ಇಷ್ಟ ಪಟ್ಟಿದ್ದೀರಿ, ಧನ್ಯವಾದಗಳು ಮತ್ತು ದೀಪಾವಳಿಯ ಶುಭಾಶಯಗಳು.
  @ ಶಿವು ಸರ್ ಮತ್ತು ಮಹೇಶ್ ಭಟ್ ಸರ್ - ಮೆಚ್ಚುಗೆಗೆ ಧನ್ಯವಾದಗಳು ಹಾಗೂ ದೀಪಾವಳಿಯ ಶುಭಾಶಯಗಳು.
  @ ಗುರುಮೂರ್ತಿ ಸರ್ ಮತ್ತು ವಿಜಯಶ್ರೀ ಮೇಡ೦- ನಿಮಗೂ ದೀಪಾವಳಿಯ ಶುಭಾಶಯಗಳು.

  ReplyDelete
 15. @ ವಸ೦ತ್ ಮತ್ತು ವಿ ಆರ್ ಭಟ್ ಸರ್ - ಲೇಖನವನ್ನು ಮೆಚ್ಚಿದ್ದೀರಿ, ಧನ್ಯವಾದಗಳು ಹಾಗೂ ದೀಪಾವಳಿಯ ಶುಭಾಶಯಗಳು.
  @ ತರುಣ್ - ಉತ್ತಮ ಲೇಖನ ಎ೦ದು ಪ್ರಶ೦ಸಿಸಿದ್ದೀರಿ - ಧನ್ಯವಾದಗಳು ಮತ್ತು ದೀಪಾವಳಿಯ ಶುಭಾಶಯಗಳು.

  ReplyDelete
 16. @ ಸುನಾತ್ ಸರ್ - ಲೇಖನವನ್ನು ಮೆಚ್ಚಿ ತಿಳಿಸಿದ್ದೀರಿ, ಧನ್ಯವಾದಗಳು ಹಾಗೂ ದೀಪಾವಳಿಯ ಶುಭಾಶಯಗಳು.
  @ ಶಿವು ಸರ್ - ತಮ್ಮ ಮೆಚ್ಚುಗೆಗೆ ಧನ್ಯವಾದಗಳು ಮತ್ತು ತಮಗೂ ದೀಪಾವಳಿಯ ಶುಭಾಶಯಗಳು.

  ಅನ೦ತ್

  ReplyDelete
 17. @ ಮಾಲತಿ ಮೇಡ೦ - I really believe that its our profound duty to provide / pass on valuable significance of celebration of our festivals towards our coming generation. At least for the sake of that we may need to know..! Thanks for sharing your thoughts.

  Ananth

  ReplyDelete
 18. ಅನಂತ್ ರಾಜ್ ಸರ್...

  ದೀಪಗಳ ಹಬ್ಬದ ಆಚರಣೆಯ ಅರ್ಥಗಳು..
  ಅವುಗಳ ಮಹತ್ವಗಳು ಬಹಳ ಚೆನ್ನಾಗಿ ವಿವರಿಸಿದ್ದೀರಿ..

  ನಮ್ಮ ಹಿರಿಯರು ಪ್ರತಿಯೊಂದಕ್ಕೂ ಬಹಳ ಮಹತ್ವ ಕೊಟ್ಟಿರುತ್ತಾರೆ..

  ಅಂದಿನ ಹಬ್ಬಗಳ ಸಂಭ್ರಮಗಳು ಈಗ ಕಾಣುತ್ತಿಲ್ಲ...

  ಸಕಾಲಿಕ ಲೇಖನ.. ಅಭಿನಂದನೆಗಳು...

  ReplyDelete
 19. ಸರ್ ವಂದನೆಗಳೊಂದಿಗೆ ದೀಪಾವಳಿಯ ಮಹತ್ವವನ್ನು ಸಾರವ ಲೇಖನ ವನ್ನು ಮುಂದಿರಿಸಿದ್ದಕ್ಕೆ ಧನ್ಯವಾದಗಳು , ಬೇಸರಿಸಬೇಡಿ ವ್ಳಮ್ಬಕ್ಕೆ ಕ್ಷಮೆ ಇರಲಿ ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು
  ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಬನ್ನಿ ...
  http://nannavalaloka.blogspot.com/2010/11/blog-post_10.html

  ReplyDelete
 20. nimagu habbada subhaashaya sir...

  chandada lekhanakke abhinandane....

  nanna blogige banni sir...

  ReplyDelete
 21. @ ಪ್ರಕಾಶ್ ಸರ್ - ಬರಹವನ್ನು ಮೆಚ್ಚಿದ್ದೀರಿ, ತಮಗೆ ವ೦ದನೆಗಳು
  @ ಸತೀಶ್ - ವಿಳ೦ಬವಾದರೂ ಚಿ೦ತೆಯಿಲ್ಲ, ಕಾರ್ತೀಕ ಮುಗಿಯುವವರೆಗೂ ದೀಪಗಳ ಹಬ್ಬವೇ.. ತಮಗೂ ಶುಭಾಶಯಗಳು.
  @ ದಿನಕರ್ - ತಮಗೂ ಹಬ್ಬದ ಶುಭಾಶಯಗಳು

  ಅನ೦ತ್

  ReplyDelete
 22. ಅನತರಾಜ್ ರವರೆ ಬಹಳ ಉತ್ತಮವಾದ ಸವಿವರ ವಾದ ಲೇಖನ ಬರೆದಿದ್ದೀರಿ.ಧನ್ಯವಾದಗಳು

  ReplyDelete
 23. ದೀಪಾವಳಿ ಹಬ್ಬ ೭ ದಿನಗಳ ಕಾಲ ಆಚರಿಸುವ೦ತಹುದು,
  ೧. ಆಶ್ವೀಜ ತ್ರಯೋದಶಿಯಂದು ಹಂಡೆ ಪೂಜೆ ಮತ್ತು ನೀರು ತುಂಬುವ ಹಬ್ಬ.
  ೨. ಆಶ್ವೀಜ ಚತುರ್ದಶಿ - ನರಕಚತುರ್ದಶಿ ಎಂದು ಎಣ್ಣೆ ಮೈ ಆರತಿ ಮತ್ತು ಸಿಹಿ ಸೇವನೆ ಆಮೇಲೆ ಅಭ್ಯಂಜನ ಸ್ನಾನ
  ೩. ಆಶ್ವೀಜ ಅಮವಾಸ್ಯ -ಲಕ್ಷ್ಮಿ ಪೂಜೆ. ಲೆಕ್ಕ ಪತ್ರ ವಹಿವಾಟು ಪೂಜೆ.
  ೪. ಕಾರ್ತಿಕ ಪ್ರತಿಪದ -ಬಲಿಪಾಡ್ಯಮಿ ಗೋಪೂಜೆ ಹೊಸ ಕೆಲಸ ಆರಂಭ. ಮತ್ತು ಆರ್ಥಿಕ ಹೊಸ ವರ್ಷದ ೯ ಹಿಂದೂ ವ್ಯವಹಾರಿಕ ಪದ್ದತಿಯಂತೆ(Financial New year like april first as in english calendar) ಪ್ರಾರಂಭ.
  ೫. ಕಾರ್ತಿಕ ದ್ವೀತಿಯಾ - ಭಾವನ ಬಿದಿಗೆ (ಹೊಸ ಮದುವೆಯಾದ ಅಕ್ಕ ಭಾವರನ್ನು ಮನೆಗೆ ಕರೆದು ಭಾವ ಮರ್ಯಾದೆ ಮಾಡೋ ದಿನ)
  ೬. ಕಾರ್ತಿಕ ತೃತಿಯಾ- ಅಕ್ಕನ ತದಿಗೆ (ಅಕ್ಕ-ತಂಗಿಯರ ಮರ್ಯಾದೆ)
  ೭. ಕಾರ್ತಿಕ ಚೌತಿ - ಅಮ್ಮನ ಚೌತಿ ( ಮದುವೆಯಾದ ಹೆಣ್ಣು ಮಕ್ಕಳು ತಮ್ಮ ಗಂದದಿರೊಂದಿಗೆ ಅಮ್ಮನಿಗೆ ಮಾಡುವ ಮರು ಮರ್ಯಾದೆ)

  ReplyDelete
 24. @ ಧನ್ಯವಾದಗಳು ಕಲಾವತಿ ಅವರಿಗೆ, ತಮಗೂ ಶುಭಾಶಯಗಳು
  @ ಸೀತಾರಾ೦ ಸರ್ - ಮತ್ತಷ್ಟು ಉತ್ತಮ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು

  ಅನ೦ತ್

  ReplyDelete