Monday, September 5, 2011

ಪಾರ್ವತಿ ಪುತ್ರ












ಪಾರ್ವತಿ ಪುತ್ರನೇ ನಮೋ ನಮೋ

ಪಾವನ ಮೂರ್ತಿಯೆ ನಮೋ ನಮೋ ||


ಲೋಕ ಜನನಿಯ ಮಗನ೦ತೆ

ಲೋಕೋಧ್ಧಾರಕ ನೀನ೦ತೆ

ಹರನಾ ಕೋಪಕೆ ವಿರೂಪಗೊ೦ಡು

ಗಜನ ಮುಖವ ಹೊತ್ತು ಬ೦ದೆಯ೦ತೆ ||||


ರಜನೀಕರ ನಿನ್ನ ಮುದದಿ೦ದ ಭಜಿಸೆ

ಕರುಣಾಕರ ನೀ ಒಲಿಯುವೆಯ೦ತೆ

ಕೊಟ್ಟ ಶಾಪವನು ಹಿ೦ದಕ್ಕೆ ಪಡೆಯುವ

ಸಿಟ್ಟು ನಿನಗೆ ಎ೦ದೂ ಇಲ್ಲವ೦ತೆ || ೨ ||


ಗಜಾನನನೇ ತ್ರಿಜಗದ ಒಡೆಯನೆ

ನಿಜದಿ೦ದ ಭಜಿಸುವೆ ಅನುದಿನವೂ

ಅವನಿಯ ಅರಸ ಅನ೦ತಶಯನಗೆ

ಅಗಜೆಯ ಸುತ ನೀ ಅತಿ ಪ್ರಿಯನ೦ತೆ || ೩ ||




ಈ ಭಕ್ತಿ ಗೀತೆ ಸೆಪ್ಟೆಂಬರ್ ತಿಂಗಳ "ಮಂಜುವಾಣಿ"ಯಲ್ಲಿ ಪ್ರಕಟಿತಗೊಂಡಿದೆ.



ಚಿತ್ರಕೃಪೆ : ಅಂತರ್ಜಾಲ

9 comments:

  1. ಭಕ್ತಿ ಭಾವ ಉಕ್ಕಿಸುವ ಗೀತೆ.
    ಚನ್ನಾಗಿದೆ
    ಧನ್ಯವಾದಗಳು.

    ReplyDelete
  2. ಭಕ್ತಿ ಪೂರ್ಣ ಕವನ ಸಾಕ್ಷಾತ್ಕಾರ. ಗಜ ಮುಖ ನಿಮಗೂ ಮನಗೂ ಗೆಲುವನ್ನೇ ತರಲಿ.

    ಮಂಜುವಾಣಿ ಎಂದರೆ ಶ್ರೀಕ್ಷೇತ್ರ ಧರ್ಮಸ್ಥಳದ ಮಾಸ ಪತ್ರಿಕೆಯೇ?

    ReplyDelete
  3. ಭಕ್ತಿಭಾವವನ್ನು ಉಕ್ಕೇರಿಸುವ ಮಧುರ ಗೀತೆಯನ್ನು ಕೊಟ್ಟಿದ್ದೀರಿ. ಧನ್ಯವಾದಗಳು.

    ReplyDelete
  4. GAJANANANIGE NIMMA JOTENAMMADOO BHAKTI POORVAKA NAMANA, KAVANA BHAKTI POORITA, ABHINANDANEGALU.

    ReplyDelete
  5. ಪಾರ್ವತಿ ಪುತ್ರನೆಂದು ಕರೆಯುತ್ತಾ.. ಮೊದಲು ಅಮ್ಮನ ನೆನಪು ಮಾಡಿ.. ಮಗನನ್ನು ನಮಿಸಿದ್ದೀರಿ ಅನಂತ್ ಸಾರ್.. ತುಂಬಾ ಇಷ್ಟವಾಯಿತು. ರಾಗ ಸಂಯೋಜಿಸಿ ಹಾಡಲು ತುಂಬಾ ಚೆನ್ನಾಗಿದೆ. ಸರಳವಾದ ಸಾಹಿತ್ಯ, ಸುಲಭವಾಗಿ ಹಾಡಬಹುದು. ಧನ್ಯವಾದಗಳು.... ನವರಾತ್ರಿಯಲ್ಲಿ "ಅಮ್ಮ"ನದೇ ಪೂಜೆ ವಿವಿಧ ರೂಪದಲ್ಲಿ... ದೇವಿಯ ಕುರಿತಾದ ಒಂದು ಒಳ್ಳೆಯ ಭಕ್ತಿಗೀತೆ ನಿರೀಕ್ಷಿಸಬಹುದೇ ನಿಮ್ಮ ತಾಣದಲ್ಲಿ?.. :-)

    ಶ್ಯಾಮಲ

    ReplyDelete
  6. ಸರ್,
    ಪಾರ್ವತಿ ಪುತ್ರನ ಬಗ್ಗೆ ಬರೆದ ಪದ್ಯ ಚೆನ್ನಾಗಿದೆ..ಮಂಜುವಾಣಿಯಲ್ಲಿ ಪ್ರಕಟವಾಗಿದ್ದಕ್ಕೆ ನಿಮಗೆ ಅಭಿನಂದನೆಗಳು.

    ReplyDelete
  7. sir,chendada bhaktipooraka
    kavana,manjuvaaniyalli
    prakatavaagiruvudakke
    abhinandanegalu.

    ReplyDelete