ನೆತ್ತರು ಹರಿಸಿದರೂ,
ಪುಂಡರ ಹಿಂಡು-ಹಿಂಡೇ ಕಂಡಾಡಿ,
ಕೆಂಪು ಕೆಸರಲಿ ಚೆಂಡಾಡಿ,
ರುಂಡಾಡಿ, ಮುಂಡಾಡಿ
ಧಮನಿಗಳ ಹರಿದು ಪಿಪಾಸಿಯಾದ
ವಾತ್ಸಲ್ಯಮಯಿಯ ವಾಸ್ತವತೆ..
ಭೀಕರ ಭೋರ್ಗರೆವ ಭೀಭತ್ಸ್ಯಕೆ
ಬೀಜರೂಪಿಣೀ, ಕಾಳಿ, ತ್ರಿಶೂಲಪಾಣಿ
ಏಳುಮಲ್ಲೆ ತೂಕದ ಹಸ್ತಾಗ್ರವಸನೆಯ
ಗಹಗಹಿಸುವಿಕೆ..
ಕಾಲನ ನಿರ್ದೇಶನ,
ಮಹಾಕಾಲನ ನಿರ್ಣಯ...
ನಿಶೆಯಗರ್ಭದಲಿ ಹೂಂಕರಿಸುವ,
ಚೀತ್ಕರಿಸುವ
ದುರ್ಮಾಂಸವ ಹಸಿಹಸಿಯಾಗಿ ದಹದಹಿಸಿ,
ಬೂದಿಯಲಿ ನರ್ತನಗೈದು
ಅರಿವಲಯ ನಿರ್ನಾಮದ ವಿಜೃಂಭಣೆ
ಜಯಘೋಷ, ಹರ್ಷೋದ್ಗಾರ,
ತಾಮಸಗ್ರಸ್ತರ ಗ್ರಹಣ ವಿಮೋಚನೆ..
ಸಾತ್ವಿಕ ದುಂಧುಬಿಯು
ನೂರ್ಮಡಿ ಗಡಚಿಕ್ಕುವ
ಓಂಕಾರದ ನಾದ,
ಜೀವನೆಬ್ಬಿಸಿದ ದೇವ
ವಿಜಯದ ಹೂರಣವ
ಪಾರಣೆ ಮಾಡಿಸಿದ
ಜಯಭೇರಿ ಅಂಬರ ಛೇಧಿಸಿತು
ಜಯ ದುರ್ಗೆ ಜಯ ದುರ್ಗೆ ಜಯ ಜಯ ಜಯ ಜಯ ....
ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು...
ಅನಂತರಾಜರೆ,
ReplyDeleteಸೊಗಸಾದ ದುರ್ಗಾಪ್ರಾರ್ಥನೆ.
ನಿಮಗೂ ಸಹ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ಅನಂತರಾಜ್ ರವರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು.
ReplyDeleteದುಷ್ಟ ಸಂಹಾರ , ಶಿಷ್ಟ ರಕ್ಷಣೆಯ ಹೊಣೆ ಹೊತ್ತ ದೇವಿಯ ವರ್ಣನೆ ನಿಮ್ಮ ಕವನದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಪದಗಳ ಜೋಡನೆ ರಸವತ್ತಾಗಿದೆ.ಅಭಿನಂದನೆಗಳು.
ಅನಂತ್ ಸರ್;ಅದ್ಭುತ ಕವನ.ದಸರಾ ಹಬ್ಬದ ಶುಭಾಶಯಗಳು.
ReplyDeleteanataraj sir deviya mahimeyannu
ReplyDeletenimma kavanadalli arthapoornavaagi hididittiruvri,abhinandanegalu.
ಬಹಳ ಚನ್ನಾಗಿದೆ ವರ್ಣನೆ ಅನಂತ್ ಸರ್... ಶಕ್ತಿ ದುರ್ಗೆ..ಕಾಳಿ..ಅಂಬೆ...ಎಲ್ಲಾ ದುಷ್ಟ ಶಿಕ್ಷೆಯ ಹಾದಿಯ ಪರಮಾವತಾರಿತ ರೂಪಗಳು...ವಿವಿಧ ಗುಣವಿಶೇಷಗಳ ವರ್ಣನೆ..ಬಹಳ ಚನ್ನ್ನಾಗಿ ಮೂಡಿದೆ.
ReplyDeleteananth sir, durga prarthaneya varnane chennagide. nanage internet samasye ittu. adakke comment haakalu agiralilla.
ReplyDeletedhanyvaadagalu.
ದುಷ್ಟ ಶಿಕ್ಷೆ ಶಿಷ್ಟ ರಕ್ಷೆಯಸ೦ಕೆತ ರೂಪಿಣಿಯ ಆರಾಧನಾ ಸ್ತೋತ್ರ ಚೆನ್ನಾಗಿದೆ ಅನಂತ್ ಸರ್.
ReplyDelete