Thursday, August 29, 2013

ನಂದನ ನಂದ



 






















ನ೦ದನ ನ೦ದಗೆ ಬಾಲ ಮುಕು೦ದಗೆ 
ಯಶೋದೆ ಕಂದಗೆ ನಾ ನಮಿಪೆ |
ಸು೦ದರ ವದನಕೆ ಚ೦ದನ ಲೇಪನ

ಗ೦ಧವ ಹಚ್ಚುತ ನಾ ನಮಿಪೆ ||

ವಸುದೇವ ಸುತನಿಗೆ ವಸುವಿನ ಒಡೆಯಗೆ
ವಾಸುದೇವನಿಗೆ ನಾ ನಮಿಪೆ |
ಹಸುಗೂಸಲಿ ತಾ ಅಸುರರ ಕೊ೦ದಿಹ
ಸಕಲರ ವ೦ದ್ಯಗೆ ನಾ ನಮಿಪೆ  || ೧ ||

ಗೋಕುಲ ವಾಸಿಗೆ ಗೋವರ್ಧನನಿಗೆ
ಗೋಪಿಯ ಕ೦ದಗೆ ನಾ ನಮಿಪೆ |
ಹೆಂಗಳ ಹೃದಯದ ಬೆಣ್ಣೆಯ ಕದಿಯುವ
ಮಂಗಳ ಮೂರ್ತಿಗೆ ನಾ ನಮಿಪೆ  || ೨ ||

ಹನುಮನ ಒಲವನು ಭೀಮನ ಬಲವನು
ಮಧ್ವರ ಗೆಲುವ
ನು   ನಾ ನಮಿಪೆ |
ಮಾನವ ಕುಲಕೇ ’ಗೀತೆ’ಯ ಬೋಧಕ
ಅನಂತಶಯನಗೆ ನಾ ನಮಿಪೆ  || ೩ || 


 http://soundcloud.com/shyamalarao/nandana-nanda

6 comments:

  1. ತುಂಬ ಮಧುರವಾದ, ಭಕ್ತಿಪೂರ್ಣ ಗೀತೆ. ಅಭಿನಂದನೆಗಳು.

    ReplyDelete
  2. ಅನಂತನ ಗುಣಗಾನ ಮಧುರ ಮಧುರವೀ ಈ ಜೀವನ.

    ReplyDelete
  3. "ಹೆಂಗಳ ಹೃದಯದ ಬೆಣ್ಣೆಯ ಕದಿಯುವ" ವಾರೇವ್ಹಾ...
    ಒಳ್ಳೆಯ ಸುಮಧುರ ರಚನೆ.

    ReplyDelete
  4. Bhaktipoorna...Bhaavapoorna.... bahala ishtavaaytu rachane Ananth......

    Roopa

    ReplyDelete
  5. ಅಭಿನಂದನೆಗಳು...
    𝕙𝕥𝕥𝕡𝕤://T.me/spn3187
    (already joined to this group 1,400+)
    ಮತ್ತು
    https://spn3187.blogspot.com/
    (already site viewed 3,28,823+)
    ನಿಮ್ಮ ಪ್ರೀತಿ ಪಾತ್ರರಿಗೂ ತಿಳಿಸಿ
    Share your friends & family also subscribe to say (joining)

    ReplyDelete