ನಾವು ಚಿಕ್ಕ ಮಕ್ಕಳಾಗಿದ್ದಾಗ.. ಈಗಿನಂತೆ ಮಕ್ಕಳಿಗಾಗಿಯೇ ಅನೇಕ ಪುಸ್ತಕಗಳೂ, ಟಿವಿ, ಯಾವುದೂ ಇಲ್ಲದಿದ್ದ ಕಾಲದಲ್ಲಿ, ನಮ್ಮ ಹಿರಿಯರು ತಮ್ಮ ಅನುಭವಗಳನ್ನೂ, ಜ್ಞಾನವನ್ನೂ... ಬಾಯಿ ಪಾಠಗಳ ಮೂಲಕ ಕಿರಿಯರಿಗೆ ಕಲಿಸುತ್ತಿದ್ದರು. ದೇವರ ಶ್ಲೋಕಗಳೂ, ಅಮರಕೋಶ, ನೀತಿ ಕಥೆಗಳೂ, ಪ್ರಾಸಬದ್ಧ ಮಾತುಗಳೂ, ಗಾದೆಗಳೂ, ಆಚಾರ-ವಿಚಾರಗಳೂ... ಇವೆಲ್ಲದರ ಜೊತೆಗೇ ಮಗ್ಗಿ.. ಲೆಕ್ಕ.. ಹೆಣ್ಣು ಮಕ್ಕಳಿಗೆ ಹಾಡು ಹಸೆ.... ಹೀಗೆ. ಇವುಗಳಿಂದ ಒಂದು ಅತ್ಯದ್ಭುತವಾದ ಅನುಕೂಲವೆಂದರೆ, ತೀರಾ ಚಿಕ್ಕ ವಯಸ್ಸಿಗೇ ಮಕ್ಕಳ ನಾಲಿಗೆ ಸಲೀಸಾಗಿ.. ಕ್ಲಿಷ್ಟ ಪದಗಳ ಉಚ್ಛಾರಣೆ ಸರಾಗವಾಗಿ ಬರುವಂತೆ ಮಾಡುತ್ತಿತ್ತು. ಮಾತು ಸ್ಪಷ್ಟವಾಗುತ್ತಿತ್ತು, ಸ್ಫುಟವಾಗುತ್ತಿತ್ತು. ಇಷ್ಟೆಲ್ಲಾ ಕಸರತ್ತು ಮಾಡಿದರೂ ಕೆಲವು ಮಕ್ಕಳಿಗೆ ಕೆಲವು ಅಕ್ಷರಗಳು ತುಂಬಾ ತುಂಟಾಟ ಮಾಡಿ, ಕಾಟ ಕೊಡುತ್ತಿದ್ದವು... ಆ ರೀತಿಯ ಒಂದೆರಡು ಹಾಸ್ಯ ಪ್ರಸಂಗಗಳು ಇಲ್ಲಿ ನಿಮಗಾಗಿ..
ಮನೆಯಾಕೆ ಅವತ್ ಬೆಳ್ಬೆಳಿಗ್ಗೇನೆ ಮಗನ ವಿಷಯಕ್ಕೆ ಮತ್ತೆ ಕಂಪ್ಲೈಟ್ ಹೇಳೋಕೆ ಶುರು - ಮಾಡಿದ್ದಳು "ಇವನೇನ್ರಿ ಇವನು.... ಎಷ್ಟು ಸಲ ರಿಪೀಟ್ ಮಾಡಿಸಿದ್ರೂ ಮತ್ ಅದೇ ಮಿಸ್ಟೇಕ್ ಮಾಡ್ತಾನಲ್ರೀ...” “ಏನಾಯ್ತು..” ಅಂದೆ. “ಫ್ಲಿಪ್” (flip) ಅನ್ನೋ ವರ್ಡ್ ನ ಪ್ಲಿಫ್ (plif) ಅಂತಾನೇ ಪ್ರನೌನ್ಸ್ ಮಾಡ್ತಾನೆ.. ಅಂದಳು. ಅದಕ್ಕೆ ನಾನು “ಅರೇ... ಅಷ್ಟೇನಾ... ನನಗೂ ಕೂಡ ಆ ವರ್ಡ್ ಸ್ವಲ್ಪ ಕನ್ಫ್ಯೂಸೇ.... ಕಣೇ.. ನಾನೂ ಹಂಗೇ ಅಂದಿರ್ತೀನಿ ಎಷ್ಟೋ ಸಲ”... ಅಂತ ಹೇಳಿ ನಕ್ಕೆ :-) ಆದರೆ ಅವಳು ನಗಲಿಲ್ಲ
ಪದಗಳ ಉಚ್ಛಾರಣೆಯಲ್ಲಿ ಸ್ವಲ್ಪ ಮಾತ್ರ ಬದಲಾವಣೆ ಇದ್ದಲ್ಲಿ ಹೇಗೋ ಅರ್ಥೈಸಿಕೊಳ್ಳಬಹುದು. ಆದರೆ ಪದಗಳೇ ಪೂರ ವ್ಯತಿರಿಕ್ತವಾಗಿದ್ದರೆ ಹೇಗೆ ಗುರುತಿಸೋದು ? ನನ್ನ ಇನ್ನೊಬ್ಬ ಮಾವನ ಮಗನ ವಿಷಯ ಕೇಳಿ ಇಲ್ಲಿ...
ಮಕ್ಕಳಾಗಿದ್ದಾಗ ನಮ್ಮ ಹಳ್ಳಿಯಲ್ಲಿ ಸಾಮೂಹಿಕ ಬಹಿರ್ದೆಶೆಗೆ ಹೋಗೋದು.. ನಮಗೆ ಒಂದು ಆನಂದದಾಯಕ ವಿಷಯ ಆಗಿತ್ತು. ಚೇಷ್ಟೆಗಳನ್ನು ಮಾಡಿಕೊಂಡು, ಹಾಡು ಹೇಳಿಕೊಂಡು ಒಂದು ಸುಂದರ ಪಿಕ್ನಿಕ್ ಗೆ ಹೋಗುವಂತೆ ಖುಷಿಯಾಗಿ ಹೋಗ್ತಿದ್ವಿ...! ನಮ್ಮೂರಿನ ರಂಗ “ಏ ಬರ್ಯೋ ಬಯ್ಲಿಗೆ ಹೋಗೋನು..” ಅಂತ ಒಮ್ಮೆ ಕೂಗು ಹಾಕಿದ್ರೆ ಸಾಕು...... ನಾವೆಲ್ಲರೂ ಮಂಗಗಳಂತೆ ಅವನನ್ನು ಹಿಂಬಾಲಿಸಿ ಹೊರಡೋದೆ...! ಒಂದಿನ ನಾವು ಕಾರ್ಯಮುಖರಾಗಿದ್ದ ಸಮಯ...! ಒಂದಿಬ್ಬರು ತಮ್ಮ ಕಾರ್ಯವನ್ನು ತರಾತುರಿಯಾಗಿ ಮುಗಿಸಿ ಬೇಗ ಹೊರಟ ಕಾರಣ – ಅವರಿಗೆ ಅಲ್ಲಿಯೇ ಸನಿಹದಲ್ಲಿ ಕಂಡಿದ್ದು ಒಂದು ಮಾವಿನ ಮರ – ತುಂಬಾ ಹಣ್ಣುಗಳು. ಒಬ್ಬ ಹತ್ತಿದ, ಇನ್ನೊಬ್ಬ ಆರಿಸಿಕೊಳ್ಳಲು ನಿಂತ. ಮೇಲೆ ಹತ್ತಿದವ ಹಣ್ಣುಗಳನ್ನು ಉದುರಿಸಿದ. ಮರದ ಇನ್ನೊಂದು ಬದಿಯ – ಸ್ವಲ್ಪ ದೂರದಲ್ಲಿ ಕಾರ್ಯೋನ್ಮುಖನಾಗಿದ್ದ ನನ್ನ ಮಾವನ ಮಗನಿಗೆ “ಮಾಡುವ ಕೆಲಸಕ್ಕಿಂತ” ಮರದ ಕಡೆಯೇ ಹೆಚ್ಚು ಗಮನ. ಇದ್ದಕ್ಕಿದ್ದಂತೆ ಅತೀ ಉತ್ಸಾಹದಿಂದ ಒಮ್ಮೆಲೇ ಕೂಗಿದ.. “ಅತ್ನ ಬಿತ್ನ.. ಇತ್ನ ಬಿತ್ನ..” (ಆ ಕಡೆ ಬಿತ್ತಾ.. ಈ ಕಡೆ ಬಿತ್ತಾ..).. ಯಾರಿಗೂ ಅರ್ಥ ಆಗಲಿಲ್ಲ.... ಅವನ ಸಹವಾಸ ದೋಷದಿಂದ ನನಗೆ ಸ್ವಲ್ಪ ಅರ್ಥ ಆಗಿತ್ತು... ನಾ ಚೇಷ್ಟೆ ಮಾಡುವ
ಉದ್ದೇಶದಿಂದ “ಇತ್ನೆ ಬಿತ್ತು” ಅಂದೆ. ಅಷ್ಟು ಕೇಳಿಸಿಕೊಂಡವನೇ.., ತಾನೇನು ಮಾಡುತ್ತಿದ್ದೆ ಎಂಬುದನ್ನೂ ಮರೆತು... ಮಾವಿನ ಹಣ್ಣನ್ನು ಹೆಕ್ಕಿಕೊಳ್ಳಲು.... ಮರದ ಇತ್ತ ಬದಿಗೆ ಓಡಿ ಬರತೊಡಗಿದ... ಎಲ್ಲರೂ ಬಿದ್ದು ಬಿದ್ದು ನಕ್ಕೆವು... ಮಹರಾಯ ಆತುರದಲ್ಲಿ ಬಾಟಮ್ ಲೆಸ್ ಆಗಿ ಓಡಿ ಬರುತ್ತಿದ್ದ....!!!
ಎದುರು ಮನೆಯಲ್ಲಿ ಹೋಂ ವರ್ಕ್ ಮಾಡಿಸುತ್ತಿದ್ದ ತಾಯಿ ಮಗಳಿಗೆ ಗದರಿಸುತ್ತಿದ್ದಳು – “ನನ್ ತಲೆ ಕೆಟ್ಟೋಗಿದೆ. ಎಷ್ಟು ಸಲ ಹೇಳ್ಕೊಡೋದು?”... ಆ ಮಗು ಹ್ರಸ್ವಕ್ಕೆ ದೀರ್ಘ, ದೀರ್ಘಕ್ಕೆ ಹ್ರಸ್ವ ಮಾಡುತ್ತಿತ್ತು. ಜಂಗಲ್ ಗೆ ಜಾಂಗಲ್ ಅಂತ ಪ್ರನೌನ್ಸ್ ಮಾಡಿದ್ರೆ... ಕಾಲಿಂಗ್ ಗೆ ಕಲ್ಲಿಂಗ್ ಅಂತ ಹೇಳ್ತಾ ಇತ್ತು. ತಾಯಿ – ಮಗಳ ಈ ಹ್ರಸ್ವ – ದೀರ್ಘದ ಹೋರಾಟ ನಮಗೆ ನಿತ್ಯದ ಪರಿಪಾಠವಾಗಿತ್ತು. ಎಷ್ಟೋ ಪದಗಳು ನಮ್ಮ ಮಾತಿನಲ್ಲೂ ಹಾಸುಹೊಕ್ಕಾಗಿ ಬಿಟ್ಟಿದ್ದವು. ನಾವು ತಮಾಷೆಗೆ ಮಾತನಾಡುತ್ತಾ... ಅದನ್ನೇ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೆವು..! ಒಂದು ಸಂಜೆ ಅಮ್ಮ – ಮಗಳು ಸಿಂಗಾರ ಮಾಡಿಕೊಂಡು ಹೊರಗೆ ಹೊರಟಂತಿತ್ತು. ಮಗು ಗೇಟ್ ತೆಗೆದುಕೊಂಡು ನಮ್ಮನೆ ಒಳಗೆ ಓಡಿ ಬಂದು ಕೈನಲ್ಲಿ ಕೀ ಗೊಂಚಲನ್ನು ತೂಗುಯ್ಯಾಲೆ ಆಡಿಸುತ್ತಾ... “ಅಂಕಲ್, ಅಂಕಲ್.. ಮತ್ತೇ... ನಾನೂ, ಅಮ್ಮ “ಇಬ್ರು”... ಟೆಂಪಲ್ ಗೆ ಹೋಗ್ತಿದೀವಿ. ಅಜ್ಜಿ ಬಂದ್ರೆ “ಕಿಸ್” ಕೊಡಿ”... ಅಂತ ಹೇಳಿ ಓಡಿಬಿಡೋದಾ..... !!!!
ಚಿತ್ರ ಕೃಪೆ : ಅಂತರ್ಜಾಲ
ಹಹ್ಹಹ್ಹಾ! ‘ಕಿಸ್’ ಕೊಟ್ರಾ, ಅನಂತರಾಜ?
ReplyDeleteಲೇಖನದಲ್ಲಿಯ ವಿಡಂಬನೆ ತುಂಬ ಚೆನ್ನಾಗಿದೆ.
ತುಂಬಾ ಹಾಸ್ಯಮಯ ಲೇಖನ.ಖುಷಿಯಾಯಿತು ಸರ್.ಅಭಿನಂದನೆಗಳು.
ReplyDeletehha..hha..haaa...
ReplyDeleteolle haasya....:)>
ಚೆನ್ನಾಗಿದೆ ನಿಮ್ಮ ಕಿಸ್ಸಾಯಣ ಹ ಹ ಹ .
ReplyDeleteಕೆಲವೊಮ್ಮೆ ಹೀಗಾಗುತ್ತೆ ಏನು ಮಾಡಲು ಆಗೋಲ್ಲ ಅಲ್ವ!!!
ಹಹಹಹ .... ಬಹಳ ಚೆನ್ನಾಗಿದೆ :))))
ReplyDeleteನಾನು ಚಿಕ್ಕವಯಸ್ಸಿನಲ್ಲಿ "kerchief" ಗೆ "ಕಪಿಚು ಕಪಿಚು" ಅಂತಿದ್ನಂತೆ. ಕಾಗೆ ಯನ್ನು "ತಾಗೆ" ಅಂತಿದ್ನಂತೆ.. ಇಂಗ್ಲಿಷ್ ನಲ್ಲಿ ೬ ರನ್ನು ೯ ಆಗಿ ಬರಿತಿದ್ನಂತೆ.
hha hha... tumbaa nagu bantu odi.... chennaagide sir...
ReplyDeleteಅನಂತ್ ಸರ್,
ReplyDeleteತುಂಬಾ ಚೆನ್ನಾಗಿದೆ :)
anantaraaj sir ravare haasyamaya lekhana tumba chennaagide.vandanegalu.
ReplyDelete:))((:
ReplyDeleteಹಹ್ಹಹ್ಹ... ತುಂಬಾ ಚೆನ್ನಾಗಿ ಬಂದಿದೆ...
ReplyDeleteನಮ್ಮನಡುವೆ ಹಲವು ಹಾಸ್ಯದ ಘಟನೆಗಳು ನಡೆಯುತ್ತಿರುತ್ತವೆ, ನೀವು ಬರೆದ ಈ ಲೇಖನ ಕೂದ ಅಂತಹದರಲ್ಲೊಂದು, ಚೆನ್ನಾಗಿದೆ.
ReplyDeleteನಿಮ್ಮ ಅನುಭವದ ಹಾಸ್ಯ ಪ್ರಸ೦ಗಗಳು ಬಹಳ ಸೊಗಸಾಗಿವೆ. ನಮ್ಮೊಡನೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು ಸರ್.
ReplyDeleteAnanth Sir,
ReplyDeletelate aagi comment maadta irodakke kshame irali...Kaaranaantaragalinda blog kade kelavu tingalinda blog kade baralagalilla, nimma ella haleyapostgalannu odutta iddini...
nimma ee vidambana lekhana tumba ishta aitu..Chennagide sir...
@ ಸುನಾತ್ ಸರ್ - ತಮ್ಮ ಮೆಚ್ಹುಗೆಗೆ ಧನ್ಯವಾದಗಳು.
ReplyDelete@ Dr. sir - tamage khushi kottiddare nanna lekhana sarthakya padeyitu. dhanyavaadagalu.
ReplyDelete@ vijayashree - nimma mechchugege dhanyavadagalu.
ReplyDeleteಕಿಸ್ಸಾಯಣ - nimage ishta vaayite... dhanyavaadagalu
ReplyDelete@ Bhavana - kapichu, taage - nimage haleya nenapugalu marukalisiddu keli santoshavayitu.
ReplyDelete@ Dinakar sir - tamma mechchugege dhanyavadagalu
ReplyDelete@ Appa-amma Sir - ishta pattidakke dhanyavaadagalu
@ Kalavati Madam - hasya lekhana kke mechchuge vyakta padisiddeeri - vandanegalu
@ Guruprasad - Dhanyavadagalu
ReplyDelete@ Tejas - ishtavaayite, vandanegalu
@ VR Bhat Sir - haasyada ghatanege mechchuge vyakta padisiddeeri..dhanyavaadagalu
ReplyDelete@ Prabhamani avare - haasya prasangagalu tamage ishtavadave? dhanyavaadagalu.
ReplyDelete@ ashok - taanavannu veekshisiddakke haagoo tamma uttma vimarshe ge dhanyavaadagalu..sir.
ReplyDeletenimma taanakke nanna nana modala beti
ReplyDeletechennagide nimma hasyada dati
chennagide
nimma taanakke modala beti. taana sundaravaagide. haasya lekhana nanna chikkandina nenapugalannu nenapisithu.
ReplyDelete@ Asha avarige - thaanaakke swaagatha, tamma mechchugege dhanyavaadagalu.
ReplyDeleteananth
@ Manadangalada taanadavarige - nanna taanakke bheti needi haasya lekhanavannu mechchi baredu tilisida tamage dhanyavaadagalu.
ReplyDeleteananth
ಅನಂತ್ ಸರ್,...ಹಹಹಹ ಬಹಳ ಸುಂದರ ಮತ್ತು ರಂಜನೀಯ ಲೇಖನ...ಮನಸು ಉಲ್ಲಸಿತ ಆಯ್ತು...ಬಹಳ ದಿನಗಳನಣ್ತರ ನಿಮ್ಮಲ್ಲಿಗೆ ಬಂದರೂ...
ReplyDelete@ ಅಜಾದ್ ಸರ್ - ಬಹಳ ದಿನಗಳ ನ೦ತರ ನನ್ನ ತಾಣಕ್ಕೆ ಆಗಮಿಸಿದ್ದೀರಿ. ಸುಸ್ವಾಗತ. ನಿಮ್ಮ ಆತ್ಮೀಯ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.
ReplyDeleteಅನ೦ತ್
ಅನಂತ್ ಸರ್,
ReplyDeleteತುಂಬಾ ಚೆನ್ನಾಗಿದೆ :)