
ಹುದುಗಿದ್ದ ಕನಸುಗಳು
ಮರಳುಗಾಡಿನ ತೆರದಿ
ಬರಡಾದ ನನಸುಗಳು
ಮೌನವನು ಮೈವೆತ್ತಿ
ಮರೆತಿದ್ದ ಮಾತುಗಳು
ನಿನ್ನೊಲವ ಧಾರೆಗದು
ಚಿಗುರೊಡೆಯಿತು....
ರಾಗಗಳ ಮಧುರತೆಯು
ಮಂದಗಾಮಿನಿಯಂತೆ
ಹರಿದಿದ್ದ ಮಮತೆಯು
ಬೇಗೆಯಲಿ ಬತ್ತಿದ್ದ
ಕಾರುಣ್ಯ ಚಿಲುಮೆಯು
ನಿನ್ನೊಲವ ಧಾರೆಗದು
ಚಿಗುರೊಡೆಯಿತು....
ವ್ಯಾಕುಲದ ಮಂದಿರದಿ
ಅಡಗಿದ್ದ ಲಹರಿಗಳು
ಅನುಗಾಲ ಅರಳದೆಯೆ
ಮುದುಡಿದ್ದ ಮಂದಾರ
ಕುಣಿಕೆಯಲಿ ಸಿಲುಕಿದ್ದ
ಭಾವ ಕುಸುಮಗಳು
ನಿನ್ನೊಲವ ಧಾರೆಗದು
ಚಿಗುರೊಡೆಯಿತು....
ಚಿತ್ರ ಕೃಪೆ : ಅಂತರ್ಜಾಲ
nice photos and feelings...!
ReplyDeletechennagidde ...........
ReplyDeletenice poetry sir.regards.
ReplyDeleteನಿನ್ನೊಲವ ಧಾರೆಗದು
ReplyDeleteಚಿಗುರೊಡೆಯಿತು....
very nice lines.
ಒಲವಿನ ಧಾರೆಯು ಮನವನ್ನು ಅರಳಿಸುವ ಪರಿಯನ್ನು ಭಾವಪೂರ್ಣವಾಗಿ ಕವನಿಸಿದ್ದೀರಿ.
ReplyDeleteಅನಂತ್ ಸರ್ ರವರೆ,ನಿಮ್ಮ ಕವನದ ಒಂದೊಂದು ಸಾಲೂ ಭಾವಪೂರ್ಣವಾಗಿದೆ. ಕವನದ ಧಾಟಿ ನಮಗೆ ತುಂಬಾ ಇಷ್ಟವಾಯಿತು.ನಿಮಗೆ ನಮ್ಮ ಧನ್ಯವಾದಗಳು.ನೀವೂ ಕೂಡ ನಮ್ಮ ಬ್ಲಾಗ್ ನ,ಪ್ರಥಮ,ಪ್ರಮುಖ ಪ್ರೋತ್ಸಾಹಿ ಗಳಾಗಿದ್ದೀರಿ.
ReplyDeleteಅದು ಹಾಗೆ ಮುಂದುವರೆಯಲಿ ಎಂದೂ ಆಶಿಸುತ್ತೇನೆ.ನಿಮಗೆ "ಹೊಸ ವರ್ಷದ ಶುಭಾಶಯಗಳು"
EE kavanadalli kelavu amulya padagalu chennagi baLakeyagive. ex. mandara, chiguru ...etc.,
ReplyDeleteThank You sir for giving a nice poem
ಮೊದಲನೆಯದು ತುಂಬಾನೇ ಹಿಡಿಸಿತು...
ReplyDeletesundaravaagide sir
ReplyDeletesundara chitragalu kooda
hosa varshada shubhashayaglu
ಸರ್,
ReplyDeleteಫೋಟೊಗಳಿಗೆ ತಕ್ಕ ಕವನಗಳು ತುಂಬಾ ಚೆನ್ನಾಗಿವೆ..
ಕನಸುಗಳೂ, ಮಾತುಗಳೂ, ಉದಯಿಸುತ್ತಿರುವ ಸೂರ್ಯನಂತೆ ಒಲವ ಧಾರೆಯ ಸಿಂಚನದಿಂದ ಉಕ್ಕುತ್ತಿದೆ... ಸುಪ್ತವಾಗಿದ್ದ ರಾಗಗಳ ಮಧುರತೆಯೂ, ಮಮತೆಯೂ, ಕಾರುಣ್ಯ ಚಿಲುಮೆಯೂ ಒಲವ ಧಾರೆಗೆ ಉಕ್ಕಿ... ಎರಡು ಭಾವಗಳು ಸೇರಿವೆ.. ವ್ಯಾಕುಲದ ಮಂದಿರದಿ, ಮಂದಾರ ಕುಣಿಕೆಯಲಿ ಸಿಲುಕಿದ್ದ ಭಾವವರಳಿದಾಗ.. ಎರಡಾಗಿದ್ದು ಒಂದೇ ಆಗಿದೆ ಮತ್ತು ದಿವ್ಯವಾದ ಬೆಳಕಿನಲ್ಲಿ ಸೇರಿ ಹೋಗಿವೆ ಎಂಬ ಅರ್ಥವಲ್ಲವೇ ಅನಂತ್ ಸಾರ್..? ನಿಮ್ಮ ಭಾವಗಳು ಒಳ್ಳೆಯ ಸಂಗೀತದಂತೇ ಇವೆ. ಕವನ ಓದ್ತಾ ಇದ್ದರೆ ಒಂದು ಸುಂದರ ರಾಗ ಹಾಡಿದಂತಾಯ್ತು.... ಚಿತ್ರಗಳು ಕವನಕ್ಕೆ ಅರ್ಥಪೂರ್ಣ ಜೊತೆನೀಡಿವೆ. ಧನ್ಯವಾದಗಳು ಸಾರ್... ಕವನ ಮನವರಳಿಸಿತು.. :-)
ReplyDeleteಶ್ಯಾಮಲ
ಸುಂದರವಾದ ಭಾವನೆಗಳು..
ReplyDeleteಭಾವನೆಗಳ ಈ ಲೋಕದಲ್ಲಿ ಹಲವೊಮ್ಮೆ ಕನಸು ನನಸಾಗದು ಯಾಕೆ ಎಂಬುದನ್ನು ಕಾವ್ಯರೂಪಕ್ಕಿಳಿಸಿದ್ದೀರಿ,ತಮಗೆ ಶುಭಾಶಯಗಳು
ReplyDeleteಚುಕ್ಕಿ ಚಿತ್ತಾರ ಅವರೇ..
ReplyDeleteಚಿತ್ರಗಳ ಜೊತೆ ನನ್ನ ಭಾವಗಳನ್ನೂ ಮೆಚ್ಚಿದ್ದೀರಿ. ಧನ್ಯವಾದಗಳು ನಿಮಗೆ.
ಮಂಜು ಅವರಿಗೂ ಡಾ.ಕೃಷ್ಣಮೂರ್ತಿ ಸಾರ್ ಅವರಿಗೂ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಪ್ರಭಾಮಣಿ ಮೇಡಮ್..
ReplyDeleteಒಲವ ಧಾರೆ ಹರಿದಾಗಲೇ ಅಲ್ಲವೇ ಭಾವ ಚಿಗುರೊಡೆಯುವುದು.. ಮೆಚ್ಚಿದ್ದಕ್ಕೆ ಧನ್ಯವಾದಗಳು.
ಸುನಾತ್ ಸಾರ್..
ಒಲವಿನ ಧಾರೆ ಮನವನ್ನರಳಿಸುವ ಪರಿಯನ್ನು ಮೆಚ್ಚಿದ್ದಕ್ಕೆ ನಿಮಗೂ ಧನ್ಯವಾದಗಳು.
ಕಲರವದ ಸ್ನೇಹಿತರೇ..
ReplyDeleteಕವನದ ಧಾಟಿಯನ್ನೂ, ಭಾವವನ್ನೂ ಪೂರ್ಣವಾಗಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮಗೂ ಹೊಸ ವರ್ಷದ ಶುಭಾಶಯಗಳು, ತಡವಾಗಿ ತಿಳಿಸುತ್ತಿರುವೆ..
ಗುಬ್ಬಚ್ಚಿ ಸತೀಶ್ ಅವರೇ
ಕವನದಲ್ಲಿನ ’ಅಮೂಲ್ಯ’ ಪದಗಳನ್ನು ಗುರುತಿಸಿ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಕತ್ತಲೆ ಮನೆಯವರಿಗೂ, ಶಿವು ಅವರಿಗೂ, A-Nil ಅವರಿಗೂ.. ಮೆಚ್ಚಿದ್ದಕ್ಕೆ ಧನ್ಯವಾದಗಳು...
ReplyDeleteಡಾ ಗುರು ಅವರಿಗೂ ಧನ್ಯವಾದಗಳು. ನಿಮಗೂ ಹೊಸ ವರ್ಷದ ಶುಭಾಶಯಗಳು.
ವಿ ಆರ್ ಭಟ್ ಅವರೇ
ReplyDeleteಮೆಚ್ಚಿದ್ದಕ್ಕೆ ಧನ್ಯವಾದಗಳು. ಕನಸಿನ ಭಾವಗಳೆಲ್ಲಾ ಒಲವ ಧಾರೆ ಹರಿದರೆ ಚಿಗುರೊಡೆಯುತ್ತದಲ್ಲವೇ...
ಕವನವನ್ನು ಮೆಚ್ಚಿಕೊಂಡ ಶ್ಯಾಮಲ.... ನಲುಗುತ್ತಿರುವ ಭಾವಗಳಿಗೆ ಅಕ್ಕರೆಯ ಧಾರೆಯು ಚಿಗುರೊಡೆಸುವ ಕ್ರಿಯೆ ಜೀವನದಲ್ಲಿ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಸಂಗೀತದಂತೆ ಇದೆ ಎಂದು ಮೆಚ್ಚಿ ತಿಳಿಸಿದ್ದೀರಿ... ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeletechennaagide kaavyadhare
ReplyDelete