Saturday, September 27, 2014

ಶಾರದೆ.....





ಕರವ ಜೋಡಿಸಿ ಶಿರವ ಬಾಗಿಸಿ
ಅಡಿಗೆ ಮುಡಿವೆನು ಶಾರದೆ
ಅರಿವು ಮೂಡಿಸಿ ಭಾವ ಶೋಧಿಸು
ಅಪರ ನುಡಿಯನು ತಾರದೆ... ೧

ಜ್ಞಾನ ದೇಗುಲದಲ್ಲಿ ನೀನಿರೆ
ಧ್ಯಾನ ಶಿಖರವನೇರಿತು
ಬಾನ ತು೦ಬಿದ ಮೇಘರಾಗವು
ಭುವಿಯಲೆಲ್ಲ ಪಸರಿತು ..... ೨

ವಾಣಿ ವೀಣಾಪಾಣಿ ನಿರುತವು
ನಿನ್ನ ಸ್ಮರಣೆಯು ಇರುತಿರೆ
ಶುದ್ಧ ಭಕುತಿಯ ಮನವ ಕರುಣಿಸು
ನಿತ್ಯ ಸಾಧನೆ ಮಾಡಿಸು..... ೩

ಅ೦ತಃಸತ್ವದ ದೀಪ ಬೆಳಗಲಿ
ಸತ್ಯ ಮಾಗ೯ದಿ ನಡೆಯಲಿ
ಸ೦ತತವು ಅನ೦ತಶಯನನು
ಅ೦ತರ೦ಗದಿ ನೆಲಸಲಿ..... ೪


  ಚಿತ್ರಕೃಪೆ : ಅಂತರ್ಜಾಲ

10 comments:

  1. A true prayer. May Sharada bless us all.

    ReplyDelete
  2. Replies
    1. Mechchi baredu tilisiddakke Vandanegalu Vijayashree avare...:)

      Delete
  3. ಜ್ಞಾನ ದೇಗುಲದಲ್ಲಿ ನೀನಿರೆ
    ಧ್ಯಾನ ಶಿಖರವನೇರಿತು
    ಸುಂದರ ಸಾಲುಗಳು ಅನಂತ್ ಜಿ..
    ಸುಮಧುರ ಭಾಷಿಣಿ ಕವಿತಾ ವಾಹಿನಿ
    ಸನ್ಮತಿ ನೀಡೆಮಗೇ ತಾಯೇ..

    ReplyDelete
    Replies
    1. Nimma praanjala anisike galige dhanyavadagalu Savita ji...:)

      Delete
  4. Replies
    1. Mechchi baredu tilisida nimaga dhanyavadagalu Manamukta avare...:)

      Delete
  5. ವಾಗ್ಮಿಗಳ ನಾಲಿಗೆಯಲ್ಲಿ ನಲಿದಾಡುವ ತಾಯೆ, ಕವಿಗಳ ಲೇಖನಿಯಲ್ಲಿ ನಡೆದಾಡುವ ತಾಯೆ ನಿನಗಿದೋ ಚಂದದ ಪ್ರಾರ್ಥನೆ.

    ReplyDelete
    Replies
    1. Manasina maneyavarige nanna taanakke swaagata. Nimma sundara kavyamaya pratikriye ge dhanyavadagalu...

      Delete