Wednesday, September 19, 2012

ಸಂಕಷ್ಟಹರ























ಎಷ್ಟು ಬೇಡಲು ನಿನ್ನ ಕಷ್ಟವಾಗದು ಎನಗೆ
ನನ್ನಿಷ್ಟ ಮೂರುತಿಯೇ ಮಹಾಗಣಪತಿಯೇ ||ಪ||

ದಿವಾ ರಾತ್ರಿಯಲಿ ಭಯವನು ಹರಿಸುವ
ಅಭಯ ಮೂರುತಿಯು ನೀನಲ್ಲವೇ  || ಅ ಪ ||

ದುಷ್ಟ ಕಾಲದಿ ಎನ್ನ ಕಷ್ಟ ಕೊನೆಗೊಳಿಸುವ
ಸಂಕಷ್ಟ ಹರನು ನೀನಲ್ಲವೇ  || ೨ ||

ದುರುಳ ಬುದ್ಧಿಯವರನು ಸರಳಗೊಳಿಸುವವ
ಕರುಣಾಳು ಗಣಪನು ನೀನಲ್ಲವೇ  || ೩ ||

ಭಕ್ತಿ ಭಾವವ ತುಂಬಿ ಸನ್ಮತಿಯಿಂದ ಪೂಜಿಸೆ
ಮುಕ್ತಿಯನು ನೀಡುವವ ನೀನಲ್ಲವೇ || ೪ ||

ಅನುದಿನ ಅನಂತಶಯನನ ನೆನೆಯುವ
ಮನವನು ನೀಡುವವ ನೀನಲ್ಲವೇ  || ೫  ||


ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ  http://soundcloud.com/shyamalarao/sankashtahara

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಚಿತ್ರಕೃಪೆ : ಅಂತರ್ಜಾಲ

4 comments:

  1. ಸರ್‍, ಗೌರಿ-ಗಣೇಶ ಹಬ್ಬಕೊಂದು ಸುಂದರ ಪ್ರಾರ್ಥನೆ... ಚೆನ್ನಾಗಿದೆ.
    ಸ್ನೇಹದಿಂದ,
    ಚಂದ್ರು

    ReplyDelete
  2. Anantarajare,
    Ganesh habbada shubhashayagalu.

    ReplyDelete
  3. ಪ್ರಾಸಬದ್ಧವಾದ ಕವನ ಓದಲು ಮತ್ತು ಕೇಳಲು ಹಿತವೆನ್ನಿಸುತ್ತಿದೆ. ಗಣಪನ ಚಿತ್ರವೂ ಭಕ್ತಿ ಉಕ್ಕುವಂತಿದೆ.

    ReplyDelete
  4. ಗಣೇಶನ ಮೇಲಿನ ಕವನ ಚೆನ್ನಾಗಿದೆ..

    ReplyDelete