ಎಷ್ಟು ಬೇಡಲು ನಿನ್ನ ಕಷ್ಟವಾಗದು ಎನಗೆ
ನನ್ನಿಷ್ಟ ಮೂರುತಿಯೇ ಮಹಾಗಣಪತಿಯೇ ||ಪ||
ದಿವಾ ರಾತ್ರಿಯಲಿ ಭಯವನು ಹರಿಸುವ
ಅಭಯ ಮೂರುತಿಯು ನೀನಲ್ಲವೇ || ಅ ಪ ||
ದುಷ್ಟ ಕಾಲದಿ ಎನ್ನ ಕಷ್ಟ ಕೊನೆಗೊಳಿಸುವ
ಸಂಕಷ್ಟ ಹರನು ನೀನಲ್ಲವೇ || ೨ ||
ದುರುಳ ಬುದ್ಧಿಯವರನು ಸರಳಗೊಳಿಸುವವ
ಕರುಣಾಳು ಗಣಪನು ನೀನಲ್ಲವೇ || ೩ ||
ಭಕ್ತಿ ಭಾವವ ತುಂಬಿ ಸನ್ಮತಿಯಿಂದ ಪೂಜಿಸೆ
ಮುಕ್ತಿಯನು ನೀಡುವವ ನೀನಲ್ಲವೇ || ೪ ||
ಅನುದಿನ ಅನಂತಶಯನನ ನೆನೆಯುವ
ಮನವನು ನೀಡುವವ ನೀನಲ್ಲವೇ || ೫ ||
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ http://soundcloud.com/shyamalarao/sankashtahara
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಚಿತ್ರಕೃಪೆ : ಅಂತರ್ಜಾಲ
ಸರ್, ಗೌರಿ-ಗಣೇಶ ಹಬ್ಬಕೊಂದು ಸುಂದರ ಪ್ರಾರ್ಥನೆ... ಚೆನ್ನಾಗಿದೆ.
ReplyDeleteಸ್ನೇಹದಿಂದ,
ಚಂದ್ರು
Anantarajare,
ReplyDeleteGanesh habbada shubhashayagalu.
ಪ್ರಾಸಬದ್ಧವಾದ ಕವನ ಓದಲು ಮತ್ತು ಕೇಳಲು ಹಿತವೆನ್ನಿಸುತ್ತಿದೆ. ಗಣಪನ ಚಿತ್ರವೂ ಭಕ್ತಿ ಉಕ್ಕುವಂತಿದೆ.
ReplyDeleteಗಣೇಶನ ಮೇಲಿನ ಕವನ ಚೆನ್ನಾಗಿದೆ..
ReplyDelete