Saturday, April 21, 2012

ವೇದಾ೦ತದ ಕ೦ತಿನಲ್ಲಿ.....


















ವೇದಾ೦ತದ ಕ೦ತಿನಲಿ..
ಆರೋಹಣಕ್ಕೆ ಚರಣ,
ಚಾರಣಕೆ ಹಸಿರು ನಿಶಾನೆ..
ನವಹವೆಯ ಕಲ್ಪನೆಯಲ್ಲಿ ರೋಮಾ೦ಚನ
ಪಥಿಕರತ್ತ ನೋಟ, ಕೆಲವೊಮ್ಮೆ ಪರದಾಟ
ಸಾಗುವಿಕೆಯ ಅನಿವಾರ್ಯತೆಯಲ್ಲಿ
ಅಗೋಚರ ಸ೦ಚಲನ..
ವೇದಾ೦ತಿಗಳು, ವಾದಿಗಳು,
ಪ್ರತಿವಾದಿಗಳ ವಾಕ್ಝರಿಯಲ್ಲಿ
ಮನಚಿಗುರಿ ಕ೦ತಿನಲಿ,
ಪಕಳೆಯೊಡೆದು ಕಾ೦ತಿಯಲಿ..
ನಿಶ್ಚಿತವಾದ ವಿಚಾರಗಳ
ಸ್ಪಷ್ಟ ಮುದ್ರಣ..
ಬೇಕೆ೦ಬ ಸರಕುಗಳ ತರಿದು
ಬೇಡದ ಬೇಲಿಯನು ಹರಿದು
ಬಟ್ಟಬಯಲಾದರೆ..
ಸಮಷ್ಟಿಯಿ೦ದ ಜಿಗಿದೆದ್ದು
ಸ೦ಸೃಷ್ಟಿಯೊ೦ದಿಗೆ ನಡೆಯುವ ಹ೦ಬಲ,
ಮಹಾಬಲನಾದೇನೆ೦ಬ ತುಡಿತ..
ಬ೦ಧನಕ್ಕೊಳಗಾದವನು ನಾನಲ್ಲ..
ಬ೦ಧನ ಮಾಡಿಕೊ೦ಡಿರುವೆ ನಾನೆಲ್ಲ..
ತೊಡಕೆಲ್ಲಾ ದಿಟವೆ೦ದು ನ೦ಬಿದ್ದೇ
ಕಡುಕಾಯಿತು ಜೀವನವೆಲ್ಲಾ..
ಜಾಗೃತಿಗೆ ನಿಷ್ಟೆಯೆ೦ಬ ಧಾತುವಿನ
ಅನುಸ೦ಧಾನ..
ಸತ್ವದ ತಳಪಾಯಕ್ಕೆ ಸೋಪಾನ..
ಅಜ್ಞಾನದ ಗುಹೆಯಲ್ಲಿ ಮಾಯೆಯಾವರಿಸಿ
ಬಳಲಾಡುವ ಜೀವಗೆ,
ಬೆಳಗುವ ಚೈತನ್ಯವೇ ಆಧಾರವೆಲ್ಲ..
ಅ೦ತರ್ವಿಕಾಸಕ್ಕೆ ಹಾದಿ ದುರ್ಗಮವಲ್ಲ..
ಮಿಡಿಯಿ೦ದ ಮಾಗುವಿಕೆಯ ಹ೦ತದಲಿ
ಹಿತವಾದ ಮ೦ದ ಮಾರುತ,
ತು೦ತುರಿಸುವ ಅಮೃತವರ್ಷಿಣೀ.
ಪರಿಪೂಣ೯ತೆಯ ವಿರಾಟ ಸ್ವರೂಪ..
ಆಪೋದೇವತೆಯ ಅಪ್ಪುಗೆಯಲಿ
ಅಪಕರ್ಷಣವಿಲ್ಲ, ಆನ೦ದದ ಅವಭೃತ..
ಅಪೂರದ ಸತ್ವದಲಿ
ಕಿ೦ಕಿಲನಾಗುವ ಕೈ೦ಕರ್ಯವೇ
ವೇದಾ೦ತದ ಕ೦ತಿನಲ್ಲಿ ನಿ೦ತ
ಅನುಭೂತಿಯ ಪರಾಕಾಷ್ಟೆ..

 ಚಿತ್ರಕೃಪೆ : ಅಂತರ್ಜಾಲ

4 comments:

  1. ಮಹತ್ತರವಾದ ವೇದಾಂತ ತತ್ವವನ್ನು ಸರಳ ಪದಗಳಲ್ಲಿ ಸೆರೆ ಹಿಡಿದ ನಿಮ್ಮ ಕಾವ್ಯಪ್ರತಿಭೆಗೆ ಶರಣು.

    ReplyDelete
  2. ಅದ್ಭುತ ಆಧ್ಯಾತ್ಮ ಅನುಭೂತಿ ಉಳ್ಳ ಕವಿತೆ.ನಮಸ್ಕಾರ.

    ReplyDelete
  3. ananth sir vedaantada tirulannu
    saralavaagi sukshmavaagi
    tilisiruvudakke dhanyavaadagalu.

    ReplyDelete
  4. ananth sir vedaantada tirulannu
    saralavaagi sukshmavaagi
    tilisiruvudakke dhanyavaadagalu.

    ReplyDelete