Monday, November 22, 2010

ನೆನಪು

ಕಾರ್ತೀಕ ಮಾಸದಲಿ ದೀಪಗಳ ಬೆಳಕಿನಲಿ

ಹೊಳೆವ ಕಣ್ಣ ಕಾಂತಿಯಲಿ ನಿನ್ನ ಕಂಡೆ

ಮಲೆನಾಡ ಸೆರಗಿನಲಿ ಬೆಟ್ಟಗಳ ಸಾಲಿನಲಿ

ನೇಸರಿನ ಬೆಸುಗೆಯಲಿ ನಿನ್ನ ಕಂಡೆ....


ಬಿಳಿದಾದ ಮೋಡವದು ಮುಗಿಲನ್ನು ಆವರಿಸೆ

ಶುಭ್ರತೆಯ ಬಿಳುಪಿನಲಿ ನಿನ್ನ ಕಂಡೆ

ಸ್ವಾತಿಯಾ ಮಳೆಯದುವೆ ತುಂತುರು ಹನಿ ಎರೆಯೆ

ತಂಪಾದ ನೆಲದಲ್ಲಿ ನಿನ್ನ ಕಂಡೆ.....


ಮಲ್ಲಿಗೆ ಸಂಪಿಗೆ ಪರಿಮಳದ ಹೂಗಳ

ಎಸಳಿನಾ ಕಂಪಿನಲಿ ನಿನ್ನ ಕಂಡೆ

ಚೆಂದಾದ ಹಕ್ಕಿಯದು ರೆಕ್ಕೆಯನು ಬೀಸುತ್ತ

ಮುಗಿಲಂಚಿಗೆ ಹಾರುವಲ್ಲಿ ನಿನ್ನ ಕಂಡೆ....


ಚಿತ್ರಕೃಪೆ : ಅಂತರ್ಜಾಲ


8 comments:

  1. ಕವಿತೆ ಸು೦ದರವಾಗಿದೆ.

    ಯಾರನ್ನು ಕ೦ಡಿದ್ದು ಕೇಳಬಹುದೆ..ಸರ್..?

    ReplyDelete
  2. ಕವನ ಸೊಗಸಾಗಿದೆ..

    ನಿಮ್ಮ ಕಲ್ಪನೆಯಲ್ಲಿರುವರು ಯಾರು ಸರ್?

    ReplyDelete
  3. ಅನಂತ್ ಸರ್,
    ಸುಂದರವಾಗಿದೆ ಕವನ
    ಗೊಂಬೆ ಚಿತ್ರ ಬೇರೆ ಹಾಕಿದೀರಿ :)
    ಯಾರು ಅಂತಾ

    ReplyDelete
  4. Nice ! ಅಂತೂ ಹಲವು ಕಡೆ ಅವಳನ್ನು ಕಂಡಿರಿ, ಕಾವ್ಯದ ಆ ನಿಮ್ಮವಳು ಎಷ್ಟೊಂದು ಖುಷಿನೀಡಿರಬೇಕಲ್ವೇ ? ಸರಳವಾಗಿ ಚೆನ್ನಾಗಿದೆ.

    ReplyDelete
  5. ಅನಂತ ಸರ್
    ಕವಿತೆ ಸೊಗಸಿದೆ..ಗೊಂಬೆಯನ್ನು ವರ್ಣಿಸಿದ ರೀತಿ ಹಿಡಿಸಿತು...ಮುದ್ದಾದ ಗೊಂಬೆ ಕೂಡ ಚಂದವಿದೆ..

    ReplyDelete
  6. @ ವಿಜಯಶ್ರೀ ಅವರಿಗೆ - ಕವಿತೆಯನ್ನು ಮೆಚ್ಚಿ ತಿಳಿಸಿದ್ದೀರಿ - ಯಾರನ್ನು ಕುರಿತು ಬರೆದದ್ದು ಅ೦ದಿದ್ದೀರಿ - ಚಿತ್ರವನ್ನೂ ಕೂಡ ಹಾಕಿಬಿಟ್ಟಿದ್ದೇನೆ..!
    @ ಮನಮುಕ್ತಾ - ವ೦ದನೆಗಳು ಮೇಡ೦..
    @ ಶಿವು - ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ ವ೦ದನೆಗಳು - ಚಿತ್ರದಲ್ಲಿರುವವರೇ ಕಲ್ಪನೆಯಲ್ಲೂ ಇದ್ದವರು..ಸಾರ್.
    @ ಅಪ್ಪ ಅಮ್ಮ ತಾಣದವರಿಗೆ - ಧನ್ಯವಾದಗಳು. ಅದು ಗೌರಿ ಗೊ೦ಬೆಯ ಚಿತ್ರ ಸಾರ್. ಚಿತ್ತದಲ್ಲಿ ಇದ್ದದ್ದು..ಬೇರೆ ಅಲ್ಲ..!
    ವಿ ಆರ್ ಭಟ್ - ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಸರ್.
    ಶಶಿ ಜೋಯ್ಸ್ - ಕವಿತೆ ಮತ್ತು ಗೊ೦ಬೆ ಎರಡನ್ನೂ ಮೆಚ್ಚಿ ತಿಳಿಸಿದ ನಿಮಗೆ ಧನ್ಯವಾದಗಳು

    ಅನ೦ತ್

    ReplyDelete