Sunday, September 12, 2010

ಇಳೆಯ ಗೆಳೆಯ

ಇಳೆಯನರಸಿ
ಬ೦ದ ಗೆಳೆಯ
ಬೇಗೆಯನು ಹರಿಸುತ್ತ
ಜೀವ ಜಲ ಹನಿಸುತ್ತ
ಒಡಲ ತ೦ಪಾಗಿಸಿದ..
ಬಯಲ ಹಸಿರಾಗಿಸಿದ
ಹಸಿರ ಹಸನಾಗಿಸಿದ
ಹಸನಾದ ಇಳೆಯಲ್ಲಿ
ಚಿಗುರುಗಳು ಟಿಸಿಲೊಡೆದು
ಹೊರಬಂದು
ಹೂವಾಗಿ ಹಣ್ಣಾಗಿ
ಮಾಗಿ ಮೈತುಂಬಿ
ಮನತುಂಬಿ
ನಲಿವ ಭಾವಕ್ಕೆ
ಭಾವವನು ಬೆರೆಸುತ್ತ
ಇಳೆಯಲ್ಲೇ ಒ೦ದಾದ..
ಮುದ ತು೦ಬಿ ಹರಿಯುತ್ತ
ಸಾರ್ಥಕ್ಯ ಮೂಡಿಸುತ
ಇಳೆಯನಾವರಿಸುತ್ತ
ಕಡಲ-ಒಡಲನು
ಸೇರಿ
ಸಾರೂಪ್ಯನಾದ...
ಇಳೆಯನ್ನು
ಬಳಸುತ್ತ
ಸಾಮೀಪ್ಯನಾದ....

38 comments:

  1. ಕವನ ಬಹಳ ಸೊಗಸಾಗಿದೆ..

    ReplyDelete
  2. ಮೊಮ್ಮೊದಲು ಕವನವನ್ನು ಮೆಚ್ಚಿ ತಿಳಿಸಿದ ತಮಗೆ ವ೦ದನೆಗಳು ಭಾವನ..

    ಅನ೦ತ್

    ReplyDelete
  3. ಇಳೆಯ ಗೆಳೆಯ ,ಜೀವ ಜಲ ಹನಿಸುವ ಜೀವ ರಕ್ಷಕ , ಮಳೆರಾಯನ ವರ್ಣನೆ ಸೊಗಸಾಗಿದೆ.

    ReplyDelete
  4. ಇಳೆಗೆ ನಿಜವಾಗಿಯೂ ಗೆಳೆಯನಾದವನ ವರ್ಣನೆ ಸೊಗಸಾಗಿದೆ. ಮುಕ್ತಾಯವು ತುಂಬ ಹಿಡಿಸಿತು.

    ReplyDelete
  5. ಇಳೆಯನರಸಿ ಬಂದ ಗೆಳೆಯ ಎಂಬ ಪ್ರಾರಂಭವೇ ಮುದ ಕೊಟ್ಟಿತು. ಸಾರ್ಥಕ್ಯ, ಸಾರೂಪ್ಯ, ಸಾಮೀಪ್ಯ ಶಬ್ದಗಳ ಪ್ರಯೋಗ ಅಮೋಘವಾಗಿದೆ. ಇತ್ತೀಚೆಗೆ ಈ ತರದ ಪದಪುಂಜಗಳನ್ನು ಓದಿರಲಿಲ್ಲ. ಇಳೆಯನ್ನು ಬಳಸಿ ಸಾಮೀಪ್ಯನಾದ... ಎಂಬಲ್ಲಿಗೆ ಒಂದು ಸುಂದರ ಕಥೆಯ ಮುಕ್ತಾಯವಾದಂತೆನಿಸಿತು. ಅದೇ ಆಂಗ್ಲದಲ್ಲಿ ಹೇಳುತ್ತಾರಲ್ಲಾ... And they lived thereafter very happily.... ಅಂತ ಹಾಗೆ. ನಿಜವಾಗಿ ಒಂದು ಕಥೆಯಾಗಿ ಹೆಣೆಯಬಹುದಾಗಿದ್ದನ್ನು ನೀವು ಸುಂದರವಾಗಿ, ಸುಲಲಿತವಾಗಿ ಕವಿತೆಯಾಗಿಸಿದ್ದೀರಿ ಅನಂತ್ ಸಾರ್. ಧನ್ಯವಾದಗಳು...

    ಶ್ಯಾಮಲ

    ReplyDelete
  6. tumbaa sogasaagide kavana...
    iLeyanarasi banda geLeya embaa maate hitavaagide sir...

    nanna blog ge banni....

    ReplyDelete
  7. tumbaa sundara kavana sir

    maleraayana binnanada varnane chendavo chend

    ReplyDelete
  8. ಮಳೆರಾಯನ ವರ್ಣನೆಯನ್ನು ಮೆಚ್ಚಿಕೊ೦ಡ ಬಾಲು ಅವರಿಗೆ ಧನ್ಯವಾದಗಳು

    ಅನ೦ತ್

    ReplyDelete
  9. ಕವನವನ್ನು ಮೆಚ್ಚಿ ತಿಳಿಸಿದ ಮನಮುಕ್ತಾ ಅವರಿಗೆ ದನ್ಯವಾದಗಳು.

    ಅನ೦ತ್

    ReplyDelete
  10. ಇಳೆಗೆ ನಿಜವಾಗಿಯೂ ಗೆಳೆಯನಾದವನ ವರ್ಣನೆಯನ್ನು ಮೆಚ್ಚಿದ ಸುನಾತ್ ಸರ್ ಗೆ ಧನ್ಯವಾದಗಳು.

    ಅನ೦ತ್

    ReplyDelete
  11. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಶ್ಯಾಮಲಾ ಅವರಿಗೆ ಧನ್ಯವಾದಗಳು. ಸಾರ್ಥಕ್ಯ, ಸಾಮೀಪ್ಯ ಮತ್ತು ಸಾರೂಪ್ಯ ಎನ್ನುವ ಪದಗಳು ಬದುಕಿಗೆ ultimate ಅನ್ನಿಸಿತು. ಹಾಗಾಗಿ ಪ್ರಯೋಗ ಮಾಡಿದೆ. ಸು೦ದರ, ಸುಲಲಿತ ಕವಿತೆ ಎ೦ದಿದ್ದೀರಿ. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಮತ್ತೊಮ್ಮೆ ಧನ್ಯವಾದಗಳು.

    ಅನ೦ತ್

    ReplyDelete
  12. ತುಂಬಾ ಲಾಸ್ಯದಲ್ಲಿ ಮಳೆಯ ಸೊಬಗನ್ನು ವರ್ಣಿಸಿದ್ದಿರ...
    ತುಂಬಾ ಖುಷಿಯಾಯಿತು ಓದಿ.

    ReplyDelete
  13. ಕವನವನ್ನು ಮೆಚ್ಚಿ ಬರೆದು ತಿಳಿಸಿದ ದಿನಕರ್ ಅವರಿಗೆ ಧನ್ಯವಾದಗಳು. ನಿಮ್ಮ ತಾಣದಲ್ಲಿ ವಿಹರಿಸಿ ನಿಮ್ಮ ಬರಹಗಳನ್ನು / ಕವನಗಳನ್ನು ತು೦ಬಾ ಇಷ್ಟಪಟ್ಟಿದ್ದೇನೆ.

    ಅನ೦ತ್

    ReplyDelete
  14. ಜೀವ ಜಲದ ವರ್ಣನೆಯನ್ನು ಮೆಚ್ಚಿದ ಶ್ರೀಕಾ೦ತ್ ಗೆ ವ೦ದನೆಗಳು.

    ಅನ೦ತ್

    ReplyDelete
  15. ಮಳೆಯ ಸೊಬಗಿನ ವರ್ಣನೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸೀತಾರಾ೦ ಸರ್ ಅವರಿಗೆ ವ೦ದನೆಗಳು.

    ಅನ೦ತ್

    ReplyDelete
  16. ನಮಸ್ಕಾರ ಸಾರ್, ಹೇಗಿದ್ದೀರಿ?
    ಕವನ ಬಲು ಸರಳವಾಗಿ ಸೊಗಸಾಗಿದೆ. ಕವಿ ಹೃದಯದಲ್ಲಿ ಎಷ್ಟು ರಸಿಕತೆ ತುಂಬಿದೆಯೋ ಅನಿಸುತ್ತದೆ.

    ReplyDelete
  17. ಬಹಳ ಹಿಡಿಸಿತು, ನಿಮ್ಮ ಕವನಗಳಲ್ಲೇ ಇದಕ್ಕೆ ಮೊದಲ ಸ್ಥಾನ ಕೊಡುತ್ತಿದ್ದೇನೆ[ಸದ್ಯಕ್ಕೆ], ಮುಂದೆ ಇನ್ನೂ ಹಲವು ಕವನಗಳು ಬರಲಿ ಎಂದು ಶುಭಕೋರುತ್ತಿದ್ದೇನೆ, ಧನ್ಯವಾದ

    ReplyDelete
  18. ಬದ್ರಿ ಸಾರ್ ಅವರಿಗೆ ವ೦ದನೆಗಳು. ತಾವು ಹೇಗಿದ್ದೀರಿ? ತಾಣಕ್ಕೆ ಬ೦ದಿದ್ದೀರಿ.. ಸ್ವಾಗತ, ಕವನ ಮೆಚ್ಚಿ ತಿಳಿಸಿದ್ದೀರಿ..ಧನ್ಯವಾದಗಳು.

    ಅನ೦ತ್

    ReplyDelete
  19. ನಿಮ್ಮ ಮುಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು ಭಟ್ ಸರ್. ನಿಮ್ಮ ಶುಭ ಹಾರೈಕೆಗೆ ತಮಗೆ ಮತ್ತೊಮ್ಮೆ ಧನ್ಯವಾದಗಳು.

    ಅನ೦ತ್

    ReplyDelete
  20. ಇಳೆಗೂ ಮಳೆಗೂ ಇರುವ ಪ್ರೀತಿ ಇಲ್ಲಿ ಉತ್ತಮವಾಗಿ ಮೂಡಿಬಂದಿದೆ

    ReplyDelete
  21. ತುಂಬಾ ಚನ್ನಾಗಿದೆ ಮತ್ತು ಅರ್ಥಪೂರ್ಣವಾಗಿದೆ.

    ReplyDelete
  22. ಕವನ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು [ತಪ್ಪು ತಿಳಿಯಬೇಡಿ: ಬ್ಲಾಗ್ ನ background ನಿಂದಾಗಿ ಓದಲು ಸ್ವಲ್ಪ ಕಷ್ಟವಾಗಬಹುದು; ಅವಕಾಶವಿದ್ದರೆ ಬದಲಿಸಿ; ಅಯಾಚಿತ ಸಲಹೆಗೆ ಕ್ಷಮೆಯಿರಲಿ]

    ReplyDelete
  23. ಕವನವನ್ನು ಮೆಚ್ಚಿ ಬರೆದು ತಿಳಿಸಿದ ಹರೀಶ್ ಗೆ ವ೦ದನೆಗಳು

    ಅನ೦ತ್

    ReplyDelete
  24. ಪ್ರತಿಕ್ರಿಯಿಸಿದ ಕವಿ ಸುರೇಶ್ ಅವರಿಗೂ ವ೦ದನೆಗಳು. ತಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ ಸರ್, ಧನ್ಯವಾದಗಳು.

    ಅನ೦ತ್

    ReplyDelete
  25. ಕವನ ಮೆಚ್ಚಿ ಬರೆದು ತಿಳಿಸಿದ ಮನಸಿನ ಮನೆಯವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  26. nanna bloginalli hosa kathe barediddene sir... bandu odi, anisike tiLisi...

    ReplyDelete
  27. ಸರ್,

    ಇಳೆಗೂ ಮತ್ತು ಮಳೆಗೂ ಎಂಥಹ ಗೆಳೆತನವಲ್ವಾ!. ಪ್ರಾರಂಭ ಮತ್ತು ಅಂತ್ಯ ಎರಡೂ ಚೆನ್ನಾಗಿದೆ..

    ReplyDelete
  28. ತಾಣಕ್ಕೆ ಸ್ವಾಗತ ಶಿವು ಅವರಿಗೆ. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ವ೦ದನೆಗಳು. ನಿಮ್ಮ ತಾಣದಲ್ಲಿ ಸಾಕಷ್ಟು ಅಡ್ಡಾಡಿದ್ದೇನೆ, ಚಿತ್ರಗಳು, ಚಿತ್ರಣಗಳು ಮನ ಮುದಗೊಳಿಸುತ್ತವೆ.

    ಶುಭಾಶಯಗಳು
    ಅನ೦ತ್

    ReplyDelete
  29. ಅನಂತ್ ಸರ್, ಪದಬಳಕೆ ನಿಮ್ಮ ಛಾಪು ಎನಿಸುತ್ತೆ...
    ನನಗೆ ಇಷ್ಟವಾದ ಸಾಲುಗಳಿವು ವಿಶೇಷತಃ...
    ಬಯಲ ಹಸಿರಾಗಿಸಿದ
    ಹಸಿರ ಹಸನಾಗಿಸಿದ
    ಹಸನಾದ ಇಳೆಯಲ್ಲಿ
    ಚಿಗುರುಗಳು
    ಟಿಸಿಲೊಡೆದು
    ಹೊರಬಂದು
    ಹೂವಾಗಿ ಹಣ್ಣಾಗಿ
    ಮಾಗಿ ಮೈತುಂಬಿ
    ಮನತುಂಬಿ
    ನಲಿವ ಭಾವಕ್ಕೆ
    ಭಾವವನು ಬೆರೆಸುತ್ತ
    ಇಳೆಯಲ್ಲೇ ಒ೦ದಾದ..

    ReplyDelete
  30. ಇಳೆಯನರಸಿ
    ಬ೦ದ ಗೆಳೆಯ
    ಬೇಗೆಯನು ಹರಿಸುತ್ತ...!
    ಸೊಗಸಾದ ಸಾಲುಗಳು ನಿಮ್ಮ ಕನವದಲ್ಲಿ ಇಳೆಯ ಮತ್ತು ಮಳೆಯ ವರ್ಣನೆ ಚನ್ನಾಗಿದೆ :)

    ReplyDelete
  31. ಕವನವನ್ನು ಮೆಚ್ಚಿ ಉತ್ತಮವಾಗಿ ಪ್ರತಿಕ್ರಿಯಿಸಿದ ಅಜಾದ್ ಸರ್ ಅವರಿಗೆ ವ೦ದನೆಗಳು.
    ನಿಮ್ಮ ಪ್ರತಿಕ್ರಿಯೆಯ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ಅನ೦ತ್

    ReplyDelete
  32. ಮ೦ಜೂ, ಇಳೆಯ/ಮಳೆಯ ವರ್ಣನೆ ಇಷ್ಟವಾಯಿತೆ? ವ೦ದನೆಗಳು.

    ಅನ೦ತ್

    ReplyDelete
  33. ಅನಂತ್ ಸರ್,
    ತುಂಬಾ ಇಷ್ಟವಾಯ್ತು ಕವನ.
    ಮಳೆಯ ಸೊಗಡು ಸೊಗಸಾಗಿ ಬಂದಿದೆ.

    ReplyDelete
  34. ananth sir nimma kavana tumba chennagide hagu nimmablog tumba ishta aitu.

    ReplyDelete
  35. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಅಪ್ಪ-ಅಮ್ಮ, ಕಲರವ ತಾಣದವರಿಗೆ ಹಾಗೂ ಸತೀಶ್ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  36. 2013ರಲ್ಲಿ ಮತ್ತೆ ಈ ಕವನ ಓದಿದಾದ ನನಗನಿಸಿದ್ದು, ಇಲ್ಲಿ ಮೊದಲು ಮನ ಸೆಳೆಯುವುದು ಒಲುಮೆ ಮತ್ತು ನಿಸರ್ಗವನ್ನು ಕವನದಲ್ಲಿ ಸಮೀಕರಿಸಿದ ರೀತಿ. ಒಡಲು (ಮನಸ್ಸು) ಕಡಲು (ಮುಕ್ತಿ) ವನ್ನು ಬೆಸೆದ ರೀತಿ. ಮನಸೆಳೆಯುವ ರಚನೆ :
    ಕಡಲ-ಒಡಲನು
    ಸೇರಿ
    ಸಾರೂಪ್ಯನಾದ...
    ಇಳೆಯನ್ನು
    ಬಳಸುತ್ತ
    ಸಾಮೀಪ್ಯನಾದ....

    ReplyDelete