Sunday, June 27, 2010

ವಸುಮತಿ...

ವಸುಮತಿ
ಕನಸುಗಾತಿ...
ತುಸು ತೆಳ್ಳಗೆ
ನಸು ಬೆಳ್ಳಗೆ
ಅಂದದ ಮೋರೆಯ
ಸುಂದರ ಪೋರಿಗೆ
ಚಂದಿರ ವದನನ
ವರಿಸುವ ಕನಸು...
ಬಂದನೊಬ್ಬ
ರಾಜಕುಮಾರ
ಒಂದಾನೊಂದು ದಿನ
ಸಿಂಗರಿಸಿದ
ಕುದುರೆಯನ್ನೇರಿ...
ಒಂದೇ ನೋಟಕೆ
ಪೋರಿಯ ಕದುಪು ರಂಗೇರಿ...
ಲಜ್ಜೆಯಲಿ ತಲೆಬಾಗಿ
ಹೆಬ್ಬೆರಳು ನೆಲವ ಕೆದುಕೆ
ರೆಪ್ಪೆಯಾಡಿಸುವಲ್ಲಿ
ನೆಲಕ್ಕೆ ಜಿಗಿದನು ಪೋರ...
ದೃಢ ದೇಹದವ
ಕೆಂಪು ಮೋರೆಯವ
ಚಿಗುರು ಮೀಸೆಯಡಿ
ಹುಸಿ ನಗು...
ನೀಲಿ ಕಂಗಳ ನೇರ ದೃಷ್ಟಿಯಲಿ
ಜಗವ ಗೆಲ್ಲುವ ಮೆರುಗು...
ಹತ್ತಿರವೇ ನಿಂತವ
ಎತ್ತರದ ದೇಹದವ...
ಸುತ್ತಲೊಮ್ಮೆ ಗಮನಿಸಿ
ಪೋರಿಯ ಗಲ್ಲವನ್ನೊಮ್ಮೆ ಮೇಲೆತ್ತಿ...
ಮರುಘಳಿಗೆಯಲ್ಲಿಯೇ...
ಪೋರ ಪೋರಿಯರು ಕುದುರೆಯನ್ನೇರಿ...
ಹಾರುತ ಜಿಗಿಯುತ
ನಾಗಾಲೋಟದಿ ಓಡಿದವು
ಸುಂದರ ದಿನಗಳು.
ಪೋರ ಪೋರಿಯರಿಗೆ
ಜಗದ ಅರಿವೇ ಇಲ್ಲ... ಬೇಕಿರಲಿಲ್ಲ...
ಓಟದ ರಭಸದಿ ಜಾರಿದಂತೆನಿಸೆ
ಕೂಗಿದಳು... ಬೆಡಗಿ...
ಬೆಚ್ಚನೆಯ ಕೈಗಳು
ಹಣೆ ಮುಟ್ಟಲು... ಬೆದರಿದಳು...
ಎದುರಿಗೆ ಅಮ್ಮ....!
ಕೇಳಿದಳು...
ಕ...ನ...ಸೇ...ನೆ...?!!!

17 comments:

  1. ಸು೦ದರ ಕನಸಿನ ಚಿತ್ರಣ. ತಮ್ಮ ಕವನ ಮನಕ್ಕೆ ಮುದ ನೀಡಿತು

    ReplyDelete
  2. ಹರಯದ ಪೋರಿ ವಸುಮತಿಯ ಕನಸು... ಸಕತ್ತಾಗಿದೆ. ನಾಗಾಲೋಟದೊಳೋಡುವ ಕುದುರೆಯನೇರಿ ಬರುವ ರಾಜಕುಮಾರ ಎಲ್ಲ ತರುಣಿಯರ ಕನಸಿನಲ್ಲೂ ಲಗ್ಗೆ ಇಡುತ್ತಾನಲ್ಲವೇ...? !! :-)

    ಶ್ಯಾಮಲ

    ReplyDelete
  3. ಅಹ
    ಏನು ಕನಸು ಪೋರಿಗೆ
    ಸುಂದರ ಕವನ

    ReplyDelete
  4. ಚಿಕ್ಕಚಿಕ್ಕ ಸಾಲುಗಳು ಮುದನೀಡಿದವು

    ReplyDelete
  5. ಸೀತಾರಾ೦ ಸರ್, ಶ್ಯಾಮಲಾ, ಗುರು ಸರ್ ಹಾಗೂ ದೀಪಸ್ಮಿತ ಸರ್..

    ಮುದ ನೀಡಿತೆ ನನ್ನೀ ಕವನ
    ಮುದವಾಯ್ತು ಅದ ಕೇಳಿ ನನ್ನ ಮನ..

    ವ೦ದನೆಗಳು

    ReplyDelete
  6. ಸುಂದರ ಕನಸಿನ ಸೊಗಸಾದ ಕವನ.ನಿಮ್ಮ ಬ್ಲಾಗಿನ ಫಾಲೋಯರ್ ಆಗಿದ್ದೇನೆ.ತಾವೂ ಫಾಲೋಯರ್ ಆದರೆ ಕವನಗಳು ಪೋಸ್ಟ್ ಆಗಿದ್ದು ಗೊತ್ತಾಗುತ್ತೆ.

    ReplyDelete
  7. ಕವನ ಮೆಚ್ಚಿ ಬರೆದು ತಿಳಿಸಿದ್ದಕ್ಕೆ ವ೦ದನೆಗಳು ಡಾ.ಮೂರ್ತಿಯವರೆ, ನಾನೂ ಕೂಡ ನಿಮ್ಮ ಬ್ಲಾಗಿಗೆ ಫಾಲೋಯರ್ ಆಗಿದ್ದೇನೆ.

    ReplyDelete
  8. ತುಂಬಾ ಚೆನ್ನಾಗಿದೆ ನಿಮ್ಮ ಕಲ್ಪನೆ ಅನಂತ್ ಸರ್.
    ನಿಮ್ಮವ,
    ರಾಘು.

    ReplyDelete
  9. ಕವನ ಮೆಚ್ಚಿ ಬರೆದು ತಿಳಿಸಿದ್ದಕ್ಕಾಗಿ ರಾಘು ಮತ್ತು ವಿಜಯಶ್ರೀ ಅವರಿಗೆ ವ೦ದನೆಗಳು.
    ಅನ೦ತ್

    ReplyDelete
  10. "ಹಾರುತ ಜಿಗಿಯುತ
    ನಾಗಾಲೋಟದಿ ಓಡಿದವು
    ಸುಂದರ ದಿನಗಳು."

    - ಸುಂದರ ಸಾಲುಗಳು. ಕವನ ಮುದಗೊಳಿಸುವಂತಿದೆ.

    ReplyDelete
  11. ಕವನವನ್ನು ಓದಿ ಮೆಚ್ಚುಗೆ ಸೂಚಿಸಿದ ತೇಜಸ್ವಿನಿಯವರಿಗೆ ವ೦ದನೆಗಳು.

    ಅನ೦ತ್

    ReplyDelete
  12. tumba ishtavaaytu sir kavana..

    Dileep Hegde

    ReplyDelete
  13. ವ೦ದನೆಗಳು ಮೆಚ್ಚುಗೆಗೆ....ದಿಲೀಪ್

    ಅನ೦ತ್

    ReplyDelete
  14. ಸೊಗಸಾಗಿ ಕನವರಿಸಿದ್ದೀರಿ, ನಿಮ್ಮ ಕಬ್ಬದಾಟ ನಮಗೆ ಹಬ್ಬದೂಟವಾಗಲಿ, ಬರೆಯಿರಿ ಅನಂತದಲ್ಲಿ, ನುಗ್ಗಿರಿ ದಿಗಂತದೆತ್ತರಕ್ಕೆ ! ಜೈ ಹೋ !

    ReplyDelete
  15. ನಿಮ್ಮ ಹಾರೈಕೆಗೆ ವ೦ದನೆಗಳು ಭಟ್ ಸರ್.

    ಅನ೦ತ್

    ReplyDelete
  16. ಸರ್, ಸಕತ್ತಗಿವೆ ಸಾಲುಗಳು :)

    ReplyDelete