ಖಗವನೇರಿದ ಉರಗಶಯನನೆ
ಜಗವ ಪೊರೆಯುವ ಅಜನ ಜನಕನೆ |
ಸುಜನ ವಂದಿತ ಗರುಡ ಗಮನನೆ
ಅನಘ ನಿನ್ನಯ ಚರಣಗೊಂದಿಪೆ ||
ಅರಿಯ ಕುಲದಲಿ ಬಂದ ಪೋರನು
ಹರಿಯ ಮಹಿಮೆಯ ನಿರುತ ಭಜಿಸಲು |
ಸಿರಿಯ ರಮಣನೆ ಕರುಣೆಯಿಂದಲಿ
ಸಿಂಹರೂಪವ ಧರಿಸಿ ಬಂದಿಹೆ || ೧ ||
ಕ್ಷಾತ್ರ ತೇಜವ ಭಂಗಗೊಳಿಸಲು
ಪರಶುಧಾರಣ ರಾಮನೆನಿಸಿದೆ |
ಜನಕ ಕುವರಿಯ ಕರವ ಪಿಡಿಯುತ
ಕಂಜಲೋಚನ ರಾಮನೆನಿಸಿದೆ || ೨ ||
ಕರಿಯ ಬಾನಲಿ ರುದ್ರ ನರ್ತನ
ವರುಷಧಾರೆಗೆ ಭುವಿಯು ತಲ್ಲಣ |
ಕಂದಮಾಧವ ಧರೆಯಲುದಿಸಲು
ಧರಣಿ ದೇವಿಯು ಮುದದಿ ನಲಿದಳು || ೩ ||
ಬಾಲ ವಟುವಿನ ಸೋಗು ಧರಿಸುತ
ಬಲಿಯ ಬಳಿಯಲಿ ಭೂಮಿ ಬೇಡಿದೆ |
ಮೂರು ಪಾದದಿ ಜಗವ ವ್ಯಾಪಿಸಿ
ಮೀರಿ ನಿಂತಿಹ ತ್ರಿವಿಕ್ರಮನೆ || ೪ ||
ಮತ್ಸ್ಯ ಕೂರ್ಮ ವರಾಹ ರೂಪದಿ
ದೈತ್ಯ ಕುಲವನು ಧ್ವಂಸಗೊಳಿಸಿದೆ |
ಶುದ್ಧ ಬುದ್ಧನೆ ಕೃದ್ಧ ಕಲ್ಕಿಯೆ
ಅನಂತಶಯನನೆ ನಿನ್ನ ನಮಿಸುವೆ || ೫ ||
https://soundcloud.com/shyamalarao/khagavanerida
ಚಿತ್ರಕೃಪೆ : ಅಂತರ್ಜಾಲ
ದಶಾವತಾರಗಳ ವರ್ಣನೆಯನ್ನು ಸುಲಭವಾಗಿ, ಸುಂದರವಾಗಿ, ಮನ ಮುಟ್ಟುವಂತೆ ಮಾಡಿದ್ದೀರಿ. ಧನ್ಯವಾದಗಳು.
ReplyDeletelayabaddhavaada dashaavathaarada chandada bhakti giite. dhanyavaadagalu.
ReplyDeleteದಶಾವತಾರ ಮತ್ತು ಭಾಗವತದ ದುಲಭ ಪಾಠ. ನಿಮ್ಮನ್ನು ಆ ಶ್ರೀ ಹರಿಯು ಸದಾ ಬ್ಲಾಗಿಸುವ ವರ ಕೊಡಲಿ.
ReplyDelete