ನಿಮ್ಮ ಮನೆಯ ಕೂಸು ನಾನಾದರೂ
ನಿಮ್ಮ ಮನೆಯ ಬೆಳಕು ನಾನಾದರೂ
ನಾನೀಗ ಬೆಳಗುತಿಹೆ ನನ್ನ ಮನೆಯಲ್ಲಿ
ಅಮ್ಮ ನೀ ಸುಮ್ಮನೆ ಕೊರಗದಿರು |೧|
ಹೆತ್ತವರ ನೆನಪಿಸುವ ಅತ್ತೆ ಮಾವ೦ದಿರು
ಒಡಹುಟ್ಟಿದವರ೦ತೆ ಅತ್ತಿಗೆ ಮೈದುನರು
ಒಡನಾಡಿದವರ೦ತೆ ನೆರೆಹೊರೆಯವರು
ಅಮ್ಮ ನೀ ಸುಮ್ಮನೆ ಕೊರಗದಿರು |೨|
ಒಲವಿನ ಚಿಲುಮೆಯ ಹರಿಸುವರು ನನ್ನವರು
ಮಗುವಿನ೦ತೆ ಮೃದು ಹೃದಯದವರು
ನೆಪ ಮಾಡಿ ನನ್ನ ಬಳಿಯೇ ಸುತ್ತುತ್ತಲಿಹರು
ಅಮ್ಮ ನೀ ಸುಮ್ಮನೆ ಕೊರಗದಿರು |೩|
ನೆರೆಮನೆಯ ಹೆಣ್ಣು ನಾನಾದರು
ಈ ಅರಮನೆಯ ಕಣ್ಣು ನಾನಾಗಿಹೆನು
ಈ ಪ್ರೀತಿ ಮಮತೆಯಲಿ ನಾನು ಸೆರೆಯಮ್ಮ
ಅಮ್ಮ ನೀ ಸುಮ್ಮನೆ ಕೊರಗದಿರು |೪|
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ... http://soundcloud.comಚಿತ್ರಕೃಪೆ : ಅಂತರ್ಜಾಲ
ಅಮ್ಮನಿಗೆ ಮಗಳ ಭರವಸೆ.. ಚನ್ನಾಗಿದೆ..
ReplyDeleteಎರಡು ಮನೆ ಬೆಳಗುವ ಸೌಭಾಗ್ಯ ನಮ್ಮ ಹೆಣ್ಣುಮಕ್ಕಳಿಗೆ ದೊರೆತಿರುವಾಗ ಅಮ್ಮ ಕೊರಗುವ ಅವಶ್ಯಕತೆ ಇಲ್ಲ.ಮಗಳ ಪತ್ರ ಮನಮುಟ್ಟುವಂತಿದೆ.ಅಭಿನಂದನೆಗಳು.
ReplyDelete@ ಮ೦ಜುಳಾದೇವಿ - ಹೆತ್ತ-ಸಾಗಿದ, ಮನೆ-ಮನ ಬೆಳಗುವ ಸೌಭಾಗ್ಯ ಹೆಣ್ಣುಮಕ್ಕಳಿಗೆ ದೊರೆತಿರುವುದು ನಿಜವಾದರೂ, ಅಮ್ಮ-ಮಗಳ ಬಾ೦ಧವ್ಯದ ಬೆಸುಗೆ, ಅಕ್ಕರೆಯ ಸಾಗರ. ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.
Deleteಅನ೦ತ್
ಅನಂತ ಸರ್ ಸುಂದರ ಭಾವನೆಗಳ ಸರಳ ಆದರೂ ಮನಮಿಡಿವ ಭಾವಮಂಥಿತ ಕವನ... ಹಾಡಿಕೊಳ್ಳಲೂಬಹುದು ಲಯಬದ್ಧ... ಹೆಣ್ಣು ಮಗಳು ಕೊಟ್ಟಮೆನೆಯಿಂದ ತವರಿಗೆ ಕೊಡುವ ಆಶ್ವಾಸನೆ...ಆಕೆಯ ನಯ-ಅನುಸರಣೀಯ ಸ್ವಭಾವಕ್ಕೆ ಹಿಡಿದ ಕನ್ನಡಿ...ಚನ್ನಾಗಿದೆ ಸರ್.
ReplyDeleteನಮಸ್ತೆ ಅಜಾದ್ ಸರ್. ತಮ್ಮ ಮೆಚ್ಚುಗೆಯ ನುಡಿಗಳಿಗೆ ನಾನು ಅಭಾರಿ. ಇದೊ೦ದು ಸಾ೦ಪ್ರದಾಯಿಕ ಹಾಡು ಎನಿಸಿದರೂ, ಅಮ್ಮನ ಆತ೦ಕ, ಹರಿದು ಬರುವ ಪ್ರೀತಿ ಭಾವ ಹೃದ್ಯವಾಗುತ್ತದೆ ಎನ್ನಿಸಿ, ಈ ರಚನೆ ಸೃಷ್ಟಿಯಾಯಿತು. ಧನ್ಯವಾದಗಳು ಸರ್.
Deleteಬಹಳ ಆಪ್ತವಾಗುತ್ತದೆ ಸರ್ ಕವನ...
ReplyDeleteಅಮ್ಮನಿಗೆ ಮಗಳ ಸಾಂತ್ವನ ಚೆನ್ನಾಗಿ ಮೂಡಿ ಬಂದಿದೆ....
ಅಪ್ತವಾಗಿ ಪ್ರತಿಕ್ರಿಯಿಸಿದ ಮೌನರಾಗ ತಾಣದವರಿಗೆ ಧನ್ಯವಾದಗಳು. ಅಮ್ಮನಿಗೆ ಬರೆದ ಸಾ೦ತ್ವನದ ಪತ್ರ ತಮಗೆ ಆಪ್ತವಾದದ್ದು, ನನಗೆ ಧನ್ಯತಾ ಭಾವವನು ಮೂಡಿಸಿತು.
Delete@ ಚುಕ್ಕಿ ಚಿತ್ತಾರ - ಮೊದಲು ಪ್ರತಿಕ್ರಿಯಿಸಿದ ವಿಜಯಶ್ರೀ ಅವರಿಗೆ ಧನ್ಯವಾದಗಳು.
ReplyDeleteಅಮ್ಮನಿಗೆ ಅಮ್ಮನ ಅಕ್ಕರೆಯ ಉಡುಗೊರೆ. ಮನಸ್ಸು ಭಾರವಾಯ್ತು ಸಾರ್.
ReplyDeleteನನ್ನ ಬ್ಲಾಗಿಗೂ ಸ್ವಾಗತ.
ಮೊದಲ ಬಾರಿಗೆ ಪತಿಯ ಮನೆಗೆ ಮಗಳನ್ನು ಕಳುಹಿಸಿದ ಅಮ್ಮನ ಮನವು ಭಾರವಾಗುವುದು ಸಹಜವೇ. ಅವಳನ್ನು ಸಂತೈಸುವ ಈ ಗೀತೆ ಮನ ಮಿಡಿಯುವಂತಿದೆ.
ReplyDeleteದುಗುಡಗೊ೦ಡ ಅಮ್ಮನ ಮನಕ್ಕೆ ತ೦ಪಾದ ಸಿಹಿ ಸಿ೦ಚನ.
ReplyDeleteಸೊಗಸಾದ ಸಾಲುಗಳು.
ಸರ್,
ReplyDeleteಅಮ್ಮನ ಮೇಲಿನ ಕವನ ತುಂಬಾ ಚೆನ್ನಾಗಿ ಬರೆದಿದ್ದೀರಿ..