Sunday, September 6, 2015

ರಂಗಧಾಮದ ರಂಗ












ರಂಗಧಾಮದ ರಂಗ ಧರೆಯಲ್ಲಿ ಉದಯಿಸಿದ
ಅಂತರಂಗದಾ ಒಲವ ಸೆಳೆದು ಬಯಲಾಗಿಸಿದ  ||

ಕಣ್ಣಲ್ಲಿ ಕಣ್ಣಿಟ್ಟು ಕಣ್ಣಾ ತಾನೆನಿಸಿದ
ಮಣ್ಣಲ್ಲಿ ಕುಣಿಯುತ ಕಣಕಣದಿ ನೆಲೆಸಿದ
ಹುಣ್ಣೀಮೆ ಬೆಳಕಲಿ ತಣ್ಣಾನೆ ಗಾಳಿಯಲಿ
ಚಿಣ್ಣಾರ ಒಡಗೂಡಿ ಚಿನ್ನಾಟ ನಡೆಸಿದ ..  ||||

ಮೋಹನ ರಾಗದಲಿ ಮುರಳೀಯ ನುಡಿಸುತ
ಮೋಹಕ ಭಾವಗಳ ಬಹಿರಂಗಗೊಳಿಸಿದ
ಶೃಂಗಾರ ಲೀಲೆಯ ಅನಾವರಣ ಮಾಡುತ
ಸಂಗಾ ಸುಖದ ಬಯಕೆ ಉತ್ತುಂಗಕ್ಕೇರಿಸಿದ..  ||||

ಉದಾಸ ಮನದಲ್ಲಿ ಉಲ್ಲಾಸ ತುಂಬಿಸುತ
ಗೋಕುಲ ಬಾಲಕ ವ್ಯಾಕುಲ ಹರಿಸಿದ
ಚಿನ್ಮಯ ರೂಪದ ಅನಂತ ಶಯನನು
ಚಿಂತಿತ ಚಿತ್ತದಲಿ ಚಿತ್ತಾರ ಚಿತ್ರಿಸಿದ.. ||||


https://soundcloud.com/shyamalarao/rangadhama



ಚಿತ್ರಕೃಪೆ : ಅಂತರ್ಜಾಲ


1 comments:

  1. ಮಧುರವಾದ ಭಕ್ತಿಗೀತೆ. ಓದಿ ಹಾಗು ಕೇಳಿ ಆನಂದವಾಯಿತು.

    ReplyDelete