Saturday, March 3, 2012

ಅಮ್ಮನಿಗೆ ಒ೦ದು ಪತ್ರ

















ನಿಮ್ಮ ಮನೆಯ ಕೂಸು ನಾನಾದರೂ
ನಿಮ್ಮ ಮನೆಯ ಬೆಳಕು ನಾನಾದರೂ
ನಾನೀಗ ಬೆಳಗುತಿಹೆ ನನ್ನ ಮನೆಯಲ್ಲಿ
ಅಮ್ಮ ನೀ ಸುಮ್ಮನೆ ಕೊರಗದಿರು   ||

ಹೆತ್ತವರ ನೆನಪಿಸುವ ಅತ್ತೆ ಮಾವ೦ದಿರು
ಒಡಹುಟ್ಟಿದವರ೦ತೆ ಅತ್ತಿಗೆ ಮೈದುನರು
ಒಡನಾಡಿದವರ೦ತೆ ನೆರೆಹೊರೆಯವರು
ಅಮ್ಮ ನೀ ಸುಮ್ಮನೆ ಕೊರಗದಿರು   ||

ಒಲವಿನ ಚಿಲುಮೆಯ ಹರಿಸುವರು ನನ್ನವರು
ಮಗುವಿನ೦ತೆ ಮೃದು ಹೃದಯದವರು
ನೆಪ ಮಾಡಿ ನನ್ನ ಬಳಿಯೇ ಸುತ್ತುತ್ತಲಿಹರು
ಅಮ್ಮ ನೀ ಸುಮ್ಮನೆ ಕೊರಗದಿರು   ||

ನೆರೆಮನೆಯ ಹೆಣ್ಣು ನಾನಾದರು
ಈ ಅರಮನೆಯ ಕಣ್ಣು ನಾನಾಗಿಹೆನು
ಈ ಪ್ರೀತಿ ಮಮತೆಯಲಿ ನಾನು ಸೆರೆಯಮ್ಮ
ಅಮ್ಮ ನೀ ಸುಮ್ಮನೆ ಕೊರಗದಿರು   ||

ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ... http://soundcloud.com


ಚಿತ್ರಕೃಪೆ : ಅಂತರ್ಜಾಲ

12 comments:

  1. ಅಮ್ಮನಿಗೆ ಮಗಳ ಭರವಸೆ.. ಚನ್ನಾಗಿದೆ..

    ReplyDelete
  2. ಎರಡು ಮನೆ ಬೆಳಗುವ ಸೌಭಾಗ್ಯ ನಮ್ಮ ಹೆಣ್ಣುಮಕ್ಕಳಿಗೆ ದೊರೆತಿರುವಾಗ ಅಮ್ಮ ಕೊರಗುವ ಅವಶ್ಯಕತೆ ಇಲ್ಲ.ಮಗಳ ಪತ್ರ ಮನಮುಟ್ಟುವಂತಿದೆ.ಅಭಿನಂದನೆಗಳು.

    ReplyDelete
    Replies
    1. @ ಮ೦ಜುಳಾದೇವಿ - ಹೆತ್ತ-ಸಾಗಿದ, ಮನೆ-ಮನ ಬೆಳಗುವ ಸೌಭಾಗ್ಯ ಹೆಣ್ಣುಮಕ್ಕಳಿಗೆ ದೊರೆತಿರುವುದು ನಿಜವಾದರೂ, ಅಮ್ಮ-ಮಗಳ ಬಾ೦ಧವ್ಯದ ಬೆಸುಗೆ, ಅಕ್ಕರೆಯ ಸಾಗರ. ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

      ಅನ೦ತ್

      Delete
  3. ಅನಂತ ಸರ್ ಸುಂದರ ಭಾವನೆಗಳ ಸರಳ ಆದರೂ ಮನಮಿಡಿವ ಭಾವಮಂಥಿತ ಕವನ... ಹಾಡಿಕೊಳ್ಳಲೂಬಹುದು ಲಯಬದ್ಧ... ಹೆಣ್ಣು ಮಗಳು ಕೊಟ್ಟಮೆನೆಯಿಂದ ತವರಿಗೆ ಕೊಡುವ ಆಶ್ವಾಸನೆ...ಆಕೆಯ ನಯ-ಅನುಸರಣೀಯ ಸ್ವಭಾವಕ್ಕೆ ಹಿಡಿದ ಕನ್ನಡಿ...ಚನ್ನಾಗಿದೆ ಸರ್.

    ReplyDelete
    Replies
    1. ನಮಸ್ತೆ ಅಜಾದ್ ಸರ್. ತಮ್ಮ ಮೆಚ್ಚುಗೆಯ ನುಡಿಗಳಿಗೆ ನಾನು ಅಭಾರಿ. ಇದೊ೦ದು ಸಾ೦ಪ್ರದಾಯಿಕ ಹಾಡು ಎನಿಸಿದರೂ, ಅಮ್ಮನ ಆತ೦ಕ, ಹರಿದು ಬರುವ ಪ್ರೀತಿ ಭಾವ ಹೃದ್ಯವಾಗುತ್ತದೆ ಎನ್ನಿಸಿ, ಈ ರಚನೆ ಸೃಷ್ಟಿಯಾಯಿತು. ಧನ್ಯವಾದಗಳು ಸರ್.

      Delete
  4. ಬಹಳ ಆಪ್ತವಾಗುತ್ತದೆ ಸರ್ ಕವನ...
    ಅಮ್ಮನಿಗೆ ಮಗಳ ಸಾಂತ್ವನ ಚೆನ್ನಾಗಿ ಮೂಡಿ ಬಂದಿದೆ....

    ReplyDelete
    Replies
    1. ಅಪ್ತವಾಗಿ ಪ್ರತಿಕ್ರಿಯಿಸಿದ ಮೌನರಾಗ ತಾಣದವರಿಗೆ ಧನ್ಯವಾದಗಳು. ಅಮ್ಮನಿಗೆ ಬರೆದ ಸಾ೦ತ್ವನದ ಪತ್ರ ತಮಗೆ ಆಪ್ತವಾದದ್ದು, ನನಗೆ ಧನ್ಯತಾ ಭಾವವನು ಮೂಡಿಸಿತು.

      Delete
  5. @ ಚುಕ್ಕಿ ಚಿತ್ತಾರ - ಮೊದಲು ಪ್ರತಿಕ್ರಿಯಿಸಿದ ವಿಜಯಶ್ರೀ ಅವರಿಗೆ ಧನ್ಯವಾದಗಳು.

    ReplyDelete
  6. ಅಮ್ಮನಿಗೆ ಅಮ್ಮನ ಅಕ್ಕರೆಯ ಉಡುಗೊರೆ. ಮನಸ್ಸು ಭಾರವಾಯ್ತು ಸಾರ್.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  7. ಮೊದಲ ಬಾರಿಗೆ ಪತಿಯ ಮನೆಗೆ ಮಗಳನ್ನು ಕಳುಹಿಸಿದ ಅಮ್ಮನ ಮನವು ಭಾರವಾಗುವುದು ಸಹಜವೇ. ಅವಳನ್ನು ಸಂತೈಸುವ ಈ ಗೀತೆ ಮನ ಮಿಡಿಯುವಂತಿದೆ.

    ReplyDelete
  8. ದುಗುಡಗೊ೦ಡ ಅಮ್ಮನ ಮನಕ್ಕೆ ತ೦ಪಾದ ಸಿಹಿ ಸಿ೦ಚನ.

    ಸೊಗಸಾದ ಸಾಲುಗಳು.

    ReplyDelete
  9. ಸರ್,
    ಅಮ್ಮನ ಮೇಲಿನ ಕವನ ತುಂಬಾ ಚೆನ್ನಾಗಿ ಬರೆದಿದ್ದೀರಿ..

    ReplyDelete