Friday, December 16, 2011

ಕಂಗೆಡದಿರು ಇನ್ನು....

ಕಂಗೆಡದಿರು ಇನ್ನು....

 


















ಕಂಗೆಡದಿರು ಇನ್ನು ಮದಡು ಮತಿಯೇ ನೀನು
ಜಂಜಡ ಬದುಕಿಗೆ ಬೆದರಿ ಅಳುಕದಿರು
ಮಂಜುನಾಥನು ಇವ ಅಂಜಿಕೆ ಕಳೆಯುವ
ನಂಜನ್ನು ನುಂಗಿದವ ಸಜ್ಜನರ ಪೊರೆವ   ...೧

ಉಲ್ಲಾಸದಿಂದಿರು ಉದಾಸ ಪಡಲೇಕೆ 
ಬೇಸರ ಭಾವವ ಮನದಿ ಬೆಸೆಯದಿರು
ಹಸುಗೂಸ ಪೊರೆವಂತೆ ನಸುನಗುತ ಲಾಲಿಸುವ
ಕೈಲಾಸದೊರೆ ಇವ ಜೀವ ಹಸನಾಗಿಸುವ  ...೨

ಹಂಗಿನ ಬದುಕಲ್ಲಿ ಹಿಂಗದೆ ನಡೆಯುತ್ತ
ಮಂಗಳಮೂರ್ತಿಯ  ನೆನೆಯುತ್ತಿರು
ಸುಂದರ ಶಿವನವನು ಕುಂದುಗಳ ಮನ್ನಿಸುತ
ಚೆಂದಾದ ಜೀವನವ ನೀಡುವನು    ...೩

ಬಂಜರು ಬದುಕೆಂದು ಕಂಗೆಟ್ಟು ನರಳದೆ
ಕಂಜಲೋಚನನನ್ನು ಭಜಿಸುತ್ತಿರು
ಅಜನ ಸುತನು ಇವ ಅಭಯವ ನೀಡುವ
ಗಜವದನನ ಪಿತ ಮಹಾದೇವನು  ...೪

ಕಂತುಸುತ ನಿರುವಾಗ ಶಂಕೆಯ ನೀ ಬಿಟ್ಟು
ಶಂಕರನ ಮಹಿಮೆಯ ಪೊಗಳುತ್ತಿರು
ಅನಂತಶಯನನ ಅಂತರಂಗದ ಸಖ 
ಆತಂಕ ಕಳೆವನು ತ್ರಯಂಬಕನು  ....೫

http://soundcloud.com/shyamalarao/kangedadiru-manave-1/s-ot26f

 ಚಿತ್ರಕೃಪೆ : ಅಂತರ್ಜಾಲ



19 comments:

  1. Wow Sir....Superbbb...

    Bhakti Sudhe hariyuttide....

    ಕಂತುಸುತ ನಿರುವಾಗ ಶಂಕೆಯ ನೀ ಬಿಟ್ಟು
    ಶಂಕರನ ಮಹಿಮೆಯ ಪೊಗಳುತ್ತಿರು
    ಅನಂತಶಯನನ ಅಂತರಂಗದ ಸಖ
    ಆತಂಕ ಕಳೆವನು ತ್ರಯಂಬಕನು .......Tumbaane ishta aitu......

    ReplyDelete
  2. ಆರ್ತ ಜೀವಕ್ಕೆ ಭರವಸೆ ನೀಡುವ ಉತ್ತಮ ಗೀತೆ. ದೇವರನ್ನಲ್ಲದೆ ಬೇರೆ ಯಾರನ್ನು ಆಶ್ರಯಿಸಲು ಸಾಧ್ಯ? ಶ್ಯಾಮಲಾ ರಾವ ಸಹ ಮಧುರವಾಗಿ ಹಾಡಿದ್ದಾರೆ. ನಿಮಗೆ ಹಾಗು ಅವರಿಗೆ ಅಭಿನಂದನೆಗಳು.

    ReplyDelete
  3. ಚೆಂದದ ಭಕ್ತಿ ಗೀತೆ.ಅಭಿನಂದನೆಗಳು ಸರ್.

    ReplyDelete
  4. ಉತ್ತಮ ಭಕ್ತಿ ಗೀತೆ....
    ಅಭಿನಂದನೆಗಳು

    ReplyDelete
  5. ಬದುಕಿನಲ್ಲಿ ಬವಣೆಗೆ ಬೆದರದಿರು ನಮ್ಮ ಶಿವನಿದ್ದಾನೆ ಎಂದು ಚೆನ್ನಾಗಿ ವಿವರಿಸಿರುವಿರಿ.ಶ್ಯಾಮಲರಾವ್ ರವರ ಹಾಡುಗಾರಿಕೆಯೂ ಮೆಚ್ಚುಗೆಯಾಯ್ತು.ಇಬ್ಬರಿಗೂ ಅಭಿನಂದನೆಗಳು.

    ReplyDelete
  6. ಭಕ್ತಿಸುಧೆ ಎ೦ದು ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯಿಸಿದ ಅಶೋಕ್ ಕೊಡ್ಲಾಡಿ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  7. ಆರ್ತ ಜೀವಕ್ಕೆ ಭರವಸೆ ನೀಡುವುದು ದೇವಭಾವ ಮಾತ್ರ ಅಲ್ಲವೇ ಸುನಾತ್ ಸರ್?
    ತಮ್ಮ ಮೆಚ್ಚುಗೆಯ ಮಾತುಗಳಿಗೆ ನಾನು ಮತ್ತು ಶ್ಯಾಮಲಾರಾವ್ ಇಬ್ಬರೂ ಅಭಾರಿಗಳು.

    ಅನ೦ತ್

    ReplyDelete
  8. ಚೆ೦ದದ ಭಕ್ತಿಗೀತೆಯೆ೦ದು ಪ್ರತಿಕ್ರಿಯಿಸಿದ ಡಾ. ಕೃಷ್ಣಮೂರ್ತಿ ಅವರಿಗೆ ವ೦ದನೆಗಳು.

    ಅನ೦ತ್

    ReplyDelete
  9. ಉತ್ತಮ ಭಕ್ತಿಗೀತೆಯೆ೦ದು ಮೆಚ್ಚುಗೆ ಸೂಚಿಸಿದ ವಿಜಯಶ್ರೀ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  10. ಬದುಕಿನಲ್ಲಿ ಬವಣೆ ಪಡುವಾಗ ಕ೦ಗೆಡದೆ ಸು೦ದರ ಶಿವನನ್ನು ನೆನೆಯವುದೇ ಉತ್ತಮ ಮಾರ್ಗ ಎನ್ನುವುದು ಕವಿಯ ಭಾವವಾಗಿದೆ. ಮೆಚ್ಚಿ ಪ್ರತಿಕ್ರಿಯಿಸಿದ ಮ೦ಜುಳಾ ಅವರಿಗೆ ನನ್ನ ಮತ್ತು ಶ್ಯಾಮಲಾರಾವ್ ಅವರ ಪರವಾಗಿ ವ೦ದನೆಗಳು.

    ಅನ೦ತ್

    ReplyDelete
  11. ಬಂಜರು ಬದುಕೆಂದು ಕಂಗೆಟ್ಟು ನರಳದೆ
    ಕಂಜಲೋಚನನನ್ನು ಭಜಿಸುತ್ತಿರು.......
    ಭರವಸೆ ತುಂಬುವ ಉತ್ತಮ ಭಕ್ತಿಗೀತೆಯನ್ನು ಹಾಡುಗಾರಿಕೆ ಸಹಿತ ಕೊಟ್ಟ ನಿಮಗೆ ಧನ್ಯವಾದಗಳು.
    ಆ ಮಾನಸಪತಿ ನಿಮಗೆ ಇನ್ನಷ್ಟು ಗೀತೆ ರಚಿಸುವ ಸ್ಪೂರ್ತಿ ತುಂಬಲಿ ಎನ್ನುವ ಹಾರೈಕೆ ನನ್ನದು.

    ReplyDelete
  12. ನಿಮ್ಮ ಈ ಭಕ್ತಿ ಗೀತೆ ಶಂಕರ ಸುಧೆಯಾಗಿ ಹೊಮ್ಮಿದೆ. ಗೀತೆಯಲ್ಲಿ ಉಪಮೆ ಗಳನ್ನೂ ಬಹಳ ಚೆನ್ನಾಗಿ ಬಳಸಿದ್ದೀರ. "ಅನಂತಶಯನನ ಅಂತರಂಗದ ಸಖ" ಎಂಬ ಸಾಲು ಹರಿ ಹಾಗು ಹರರ ನಡುವಿನ ಸಾಮರಸ್ಯದ ಪ್ರತೀಕವಾಗಿ ಹೊಮ್ಮಿದೆ. ಭಕ್ತಿಯಿಂದ ಕರೆದರೆ ಬಾರದ ದೈವವಾವುದು ?? ... ನಿಮ್ಮ ಈ ಸುಂದರ ಭಕ್ತಿಪೂರ್ವಕ ಸಾಲುಗಳಿಗೆ ನನ್ನ ನಮನಗಳು.ನಿಮಗೆ ಅಭಿನಂದನೆಗಳು ಸರ್.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  13. ಮನೋಭಿಮಾನಿಗಾಗಿ ನಿಮ್ಮ ಸಾಲುಗಳು
    ತುಂಬಾ ಸುಂದರವಾಗಿವೆ ಸರ್
    ಸ್ವರ್ಣ

    ReplyDelete
  14. @ ಪ್ರಕಾಶ್ - ಭಕ್ತಿಗೀತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿ, ಹಾರೈಸಿದ ತಮಗೆ ಧನ್ಯವಾದಗಳು.

    ಅನ೦ತ್

    ReplyDelete
  15. @ ಬಾಲು ಸರ್ - ಶ೦ಕರ ಸುಧೆ ಎನ್ನುವ ಹೊಸ ವಿಶೇಷಣ ಹಾಗೂ ಹರಿ-ಹರರ ನಡುವಿನ ಸಾಮರಸ್ಯದ ಪ್ರತೀಕ ಎ೦ದು ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.

    ಅನ೦ತ್

    ReplyDelete
  16. @ ಸ್ವರ್ಣ ಮೇಡ೦ - ಮನೋಭಿಮಾನಿ ದೇವತೆಯ ಪ್ರಾರ್ಥನೆಯನ್ನು ಮೆಚ್ಚಿ ಬರೆದು ತಿಳಿಸಿದ ತಮಗೆ ಧನ್ಯವಾದಗಳು.

    ಅನ೦ತ್

    ReplyDelete
  17. ಶಂಭೋ ಶಂಕರ! ತುಂಬಾ ಚೆನ್ನಾಗಿದೆ ಶಿವನ ಗುಣಗಾನ.

    ReplyDelete
  18. @ ಪ್ರದೀಪ್ - ಶಿವನ ಗುಣಗಾನ ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ವ೦ದನೆಗಳು.

    ಅನ೦ತ್

    ReplyDelete
  19. ಭಕ್ತಿಯ ಸಾಲುಗಳು ಮನತಟ್ಟುತ್ತವೆ

    ReplyDelete