Monday, April 4, 2011

ಯುಗಾದಿ......



ಮಾಮರಗಳು ಕಾದಿಹವು

ಹಸಿರು ಚಿಗುರೊಡೆಯಲು

ಪರಪುಟ್ಟ ಪರಿತಪಿಸೆ

ಸಂಗಾತಿಯ ಕಾಣಲು

ಚೈತ್ರಳಾ ನಿರೀಕ್ಷೆಯಲಿ

ಪ್ರಕೃತಿಯು ತಾನಿರಲು

ನೀ ಬಂದೆಯಾ ಋತುರಾಜ

ಈ ಯುಗದ ಆದಿಯಲಿ ?


ಅರಳಿಸುತ ಮನಸುಗಳ

ವಿಕಸಿತ ಕುಸುಮಗಳಂತೆ

ಸರಳಿಸುತ ಬದುಕನು

ಕರಾಳತೆಯ ಬಿಸಿ ತಾಗದಂತೆ

ವಿರಳವಾಗಿಹ ಭಾವಗಳ

ಮರಳಿ ತುಂಬಿಸುವಂತೆ

ನೀ ಬಂದೆಯಾ ಋತುರಾಜ

ಈ ಯುಗದ ಆದಿಯಲಿ ?


ಬೇವಿನೆಸಳಿನ ಕಹಿಯಲಿ

ಮಾವು ಹಲಸುಗಳ ಸಿಹಿ ತುಂಬಿ

ಸಿಹಿ ನೆನಪುಗಳ ಅಡಿಯಲ್ಲಿ

ಕಹಿ ಭಾವಗಳ ಛಾಪನಳಿಸಿ

ಕವಿ ಭಾವ ಹೃದಯಗಳಿಗೆ

ಸವಿ ಧಾರೆಯನೆರೆಯುತ್ತ

ನೀ ಬಂದೆಯಾ ಋತುರಾಜ

ಈ ಯುಗದ ಆದಿಯಲಿ ?

ಸರ್ವರಿಗೂ "ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು...



ಚಿತ್ರಕೃಪೆ : ಅಂತರ್ಜಾಲ

29 comments:

  1. ತಮಗೂ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

    ReplyDelete
  2. ಚೆ೦ದದ ಕವಿತೆ.
    ನಿಮಗೂ ನಿಮ್ಮ ಪರಿವಾರಕ್ಕೂ ಯುಗಾದಿಯ ಶುಭಾಶಯಗಳು.

    ReplyDelete
  3. ಚೆಂದದ ಕವಿತೆ.ನಿಮಗೂ ಯುಗಾದಿಯ ಶುಭಾಶಯಗಳು.

    ReplyDelete
  4. ಯುಗಾದಿಯ ಶುಭಾಶಯಗಳು. ಕವನ ತುಂಬಾ ಇಷ್ಟವಾಯಿತು

    ReplyDelete
  5. ತಮಗೂ, ಎಲ್ಲರಿಗೂ ಯುಗಾದಿ "ಖರ"ನಾಮ ಸಂವತ್ಸರದ ಹಬ್ಬದ ಶುಭಾಶಯಗಳು

    ReplyDelete
  6. ಅನಂತರಾಜರೆ,
    ಯುಗಾದಿಗೆ ತುಂಬ ಕಾವ್ಯಮಯವಾದ ಸ್ವಾಗತ ನೀಡಿದ್ದೀರಿ.
    ಖರ ಸಂವತ್ಸರವು ಸರ್ವರಿಗೂ ಮಂಗಳಕರವಾಗಲಿ.

    ReplyDelete
  7. ಯುಗಾದಿಯ ಉತ್ತಮ ಪೀಠಿಕೆ..ಸುಂದರ ಸಾಲುಗಳು
    ಅದರಲ್ಲೂ
    ಕರಾಳತೆಯ ಬಿಸಿ ತಾಗದಂತೆ

    ವಿರಳವಾಗಿಹ ಭಾವಗಳ

    ಮರಳಿ ತುಂಬಿಸುವಂತೆ

    ನೀ ಬಂದೆಯಾ ಋತುರಾಜ

    ಈ ಯುಗದ ಆದಿಯಲಿ ?

    ಯುಗಾದಿಯ ಶುಭಾಶಯಗಳು ಅನಂತ ಸರ್

    ReplyDelete
  8. ಸಿಹಿ ನೆನಪುಗಳ ಅಡಿಯಲ್ಲಿ ಕಹಿ ಭಾವಗಳ ಛಾಪನಳಿಸಿ... "ಖರ"ನಾಮ ಸಂವತ್ಸರವು... ನಿಮ್ಮ ಕವಿ ಹೃದಯದ ಭಾವಗಳನ್ನರಳಿಸಿ.. ನಮಗೆ ಕವನಗಳ ಸವಿಧಾರೆಯನ್ನೇ ನೀಡಲಿ... ಅನಂತ್ ಸಾರ್.. ಹೊಸ ವರ್ಷಕ್ಕೆ ಸುಂದರ ಸ್ವಾಗತ... :-)

    ಶ್ಯಾಮಲ

    ReplyDelete
  9. @ ವಿಜಯಶ್ರೀ - ಮೊಮ್ಮೊದಲು ಪ್ರತಿಕ್ರಿಯಿಸಿದ ತಮಗೂ ಮತ್ತು ಕುಟು೦ಬದವರಿಗೂ ಹೊಸ ವರುಷದ ಶುಭಾಶಯಗಳು.

    ಅನ೦ತ್

    ReplyDelete
  10. ಕವಿತೆ ಮೆಚ್ಚಿ ಪ್ರತಿಕ್ರಿಯಿಸಿದ ಮನಮುಕ್ತಾ ಅವರಿಗೆ ಧನ್ಯವಾದಗಳು ಹಾಗೂ ಯುಗಾದಿಯ ಶುಭಾಶಯಗಳು.

    ಅನ೦ತ್

    ReplyDelete
  11. ಡಾ. ಸರ್ ಅವರಿಗೆ ಧನ್ಯವಾದಗಳು ಹಾಗೂ ಯುಗಾದಿಯ ಶುಭಾಶಯಗಳು.

    ಅನ೦ತ್

    ReplyDelete
  12. ಕವನ ಮೆಚ್ಚಿ ಬರೆದು ತಿಳಿಸಿದ ಮನಸು ಅವರಿಗೆ ಧನ್ಯವಾದಗಳು ಹಾಗೂ ಯುಗಾದಿಯ ಶುಭಾಶಯಗಳು.

    ಅನ೦ತ್

    ReplyDelete
  13. ಗುರು ಸರ್ ತಮಗೂ ಮತ್ತು ಕುಟು೦ಬದವರಿಗೂ ಖರನಾಮ ಸ೦ವತ್ಸರದ ಶುಭಾಶಯಗಳು.

    ಅನ೦ತ್

    ReplyDelete
  14. ಸೀತಾರಾ೦ ಸರ್ - ತಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು

    ಅನ೦ತ್

    ReplyDelete
  15. ಸುನಾತ್ ಸರ್ - ತಮ್ಮ ಮೆಚ್ಚುಗೆ ಮತ್ತು ಹಾರೈಕೆಗಳಿಗೆ ಧನ್ಯವಾದಗಳು. ತಮಗೂ ಮತ್ತು ಕುಟು೦ಬದವರಿಗೂ ಹೊಸ ಸ೦ವತ್ಸರದ ಶುಭಾಶಯಗಳು.

    ಅನ೦ತ್

    ReplyDelete
  16. ಅಜಾದ್ ಸರ್ - ಕವನ ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು. ತಮಗೂ ಯುಗಾದಿಯ ಶುಭಾಶಯಗಳು.


    ಅನ೦ತ್

    ReplyDelete
  17. ಶ್ಯಾಮಲಾ - ಕವನ ಇಷ್ಟವಾಯಿತೆ? ಧನ್ಯವಾದಗಳು. ಹೊಸ ವರುಷದಲ್ಲಿ ಹರುಷವೇ ತು೦ಬಿರಲಿ. ತಮಗೂ ಯುಗಾದಿಯ ಶುಭಾಶಯಗಳು.

    ಅನ೦ತ್

    ReplyDelete
  18. ಅನಂತ್ ಸರ್,

    ಅರ್ಥಪೂರ್ಣ, ಭಾವಪೂರ್ಣ ಕವನ, ಪ್ರತಿಯೊಂದು ಸಾಲುಗಳು ಇಷ್ಟವಾದವು...ಹೊಸವರುಷ ಹರುಷವನ್ನು ತರಲಿ...ನಿಮಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...

    ReplyDelete
  19. ಸರ್, ನಿಮಗೂ ಸಹ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಕವನ ತುಂಬಾ ಅರ್ಥಪೂರ್ಣವಾಗಿದೆ. ಅಭಿನಂದನೆಗಳು.

    ReplyDelete
  20. ತಮ್ಮ ಅಭಿಮಾನ ಪೂರ್ವಕ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಅಶೋಕ್ ಸರ್.
    ತಮಗೂ ಮತ್ತು ಕುಟು೦ಬದವರಿಗೂ ಯುಗಾದಿಯ ಶುಭಾಶಯಗಳು.

    ಅನ೦ತ್

    ReplyDelete
  21. ತಾಣಕ್ಕೆ ಸ್ವಾಗತ ಸತ್ಯಪ್ರಸಾದ್ ಅವರೆ. ಕವನವನ್ನು ಮೆಚ್ಚಿ ಬರೆದು ತಿಳಿಸಿದ್ದೀರಿ. ಧನ್ಯವಾದಗಳು ಹಾಗೂ ಯುಗಾದಿಯ ಶುಭಾಶಯಗಳು.

    ಅನ೦ತ್

    ReplyDelete
  22. ಸರ್‍, ಕವನದೊಂದಿಗೆ ಚೈತ್ರ / ವಸಂತರಿಗೆ ಸ್ವಾಗತ ಚೆನ್ನಾಗಿದೆ. ತಮಗೂ ತಮ್ಮ ಕುಟುಂಬದವರಿಗೂ ಹಾರ್ದಿಕ ಹೊಸ ವರ್ಷದ ಶುಭಾಶಯಗಳು

    ಚಂದ್ರು

    ReplyDelete
  23. ಅನಂತರಾಜ್ ರವರೆ,
    ಋತುಗಳ ರಾಜನ ಆಗಮನ ಸಮಯದಲ್ಲಿ ಮೂಡಿಹ ನಿಮ್ಮ ಕವನ ಚೆನ್ನಾಗಿದೆ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ, ನನ್ನ ಮತ್ತು ನನ್ನವರ ಶುಭಾಶಯಗಳು.

    ReplyDelete
  24. @ ಚ೦ದ್ರು ಸರ್ - ಕವನವನ್ನು ಮೆಚ್ಚಿ ಬರೆದು ತಿಳಿಸಿದ್ದೀರಿ ನಿಮಗೆ ಧನ್ಯವಾದಗಳು ಹಾಗೂ ಹೊಸ ವರ್ಷದ ಶುಭಾಶಯಗಳು.

    ReplyDelete
  25. @ ಮ೦ಜುಳಾದೇವಿ - ತಾಣಕ್ಕೆ ಸ್ವಾಗತ ಮೇಡ೦. ಋತುಗಳ ರಾಜನ ಆಗಮನದ ಸಮಯದಲ್ಲಿ ಮೂಡುವ ಭಾವಗಳ ನಿರೂಪಣೆಯನ್ನು ಮೆಚ್ಚಿ ಬರೆದು ತಿಳಿಸಿದ್ದೀರಿ. ಧನ್ಯವಾದಗಳು. ತಮಗೂ ತಮ್ಮವರಿಗೂ ಹಾಗೂ ಕುಟು೦ಬವರ್ಗದವರಿಗೂ ಯುಗಾದಿಯ ಶುಭಾಶಯಗಳು.

    ಅನ೦ತ್

    ReplyDelete
  26. ಅನಂತರಾಜ್ ಸರ್...

    ಯುಗಾದಿಯ ಆಚರಣೆ ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೆ?

    ಸೊಗಸಾದ ಕವನ.. !!

    ನಮ್ಮ ಹೊಸವರ್ಷಾಚರಣೆಯಲ್ಲಿ ಪ್ರಕೃತಿಯೂ ಪಾಲ್ಗೊಳ್ಳುತ್ತದೆ..

    ಹೊಸ ಚಿಗುರು.. ಹೂಮೊಗ್ಗರಳಿ..

    ಕೋಗಿಲೆಯೂ ಹಾಡುತ್ತದೆ..

    ನಿಮಗೂ
    ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು...

    ReplyDelete
  27. ಪ್ರಕೃತಿಯಲ್ಲಿನ ಸು೦ದರ ಮಾರ್ಪಾಟುಗಳನ್ನು ಕವನದ ಮೂಲಕ ಅ೦ದವಾಗಿ ಸೆರೆಹಿಡಿದಿದ್ದೀರಿ ಸರ್, ಧನ್ಯವಾದಗಳು!

    ReplyDelete
  28. @ ಪ್ರಕಾಶ್ ಸರ್ - ತಮಗೂ ತಮ್ಮ ಕುಟು೦ಬ ವರ್ಗದವರಿಗೂ ಹೊಸ ಸ೦ವತ್ಸರದ ಶುಭಾಶಯಗಳು.

    ReplyDelete
  29. @ ಪ್ರಭಾಮಣಿ ನಾಗರಾಜ್ - ಸ೦ವತ್ಸರದ ಬದಲಾವಣೆಯಲ್ಲಿ ಪ್ರಕೃತಿಯಲ್ಲಿನ ಮಾರ್ಪಾಡು ಕೂಡ ಸತ್ಯ-ಸು೦ದರವಾಗುತ್ತದೆಯಲ್ಲವೆ? ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಅನ೦ತ್

    ReplyDelete