Monday, March 28, 2011

ತರಲೆ ಸಂವಾದ


ಬಡಿವಾರದ ಗಿಣಿ ಸಿಂಗಾರದ ಮಣಿ

ಬಂಗಾರದ ಬಳೆ ತರಲೇ ?

ಬಡಾಯಿ ಬಾಯಿಯ ಕಿಲಾಡಿ ಮಾತಿನ

ಹುಡುಗನೇ ನೀನೊಬ್ಬ ತರಲೆ ..೧


ಛಾತಿಯ ತೋರುವ ಮಾತಿನ ಮಲ್ಲಿಯೆ

ಮುತ್ತಿನ ಮೂಗುತಿ ತರಲೇ ?

ಸುತ್ತಣ ಬೀದಿಯ ಗಸ್ತು ತಿರುಗುವವ

ಹುಡುಗನೇ ನೀನೊಬ್ಬ ತರಲೆ..೨


ಬಳ್ಳಿಯ ನಡುವಿನ ಹೃದಯದ ಕಳ್ಳಿಯೆ

ಬೆಳ್ಳಿಯ ಡಾಬನು ತರಲೇ?

ಮರುಳು ಮಾತಿನಲಿ ಮೋಡಿ ಮಾಡುವವ

ಹುಡುಗನೇ ನೀನೊಬ್ಬ ತರಲೆ..೩


ಬಾಂದಣದೊಳಗಿನ ಚುಕ್ಕಿಗಳನೆಲ್ಲ

ಬಾಚಿ ಬೊಗಸೆಯಲಿ ತರಲೇ ?

ಬಾನಿನ ಅಂಚದು ಮಾವಿನ ಮರವಲ್ಲ

ಹುಡುಗನೇ ನೀನೊಬ್ಬ ತರಲೆ..೪


ಸುಂದರ ನಾರಿಯೆ ಅಂದದ ಪೋರಿಯೆ

ಮನ ಮಂದಿರಕೆ ನೀನೆಂದು ಬರುವೆ ?

ಚಂದ ಮಾತಿನಲಿ ಮುದವನು ತಂದಿಹ

ಹುಡುಗನೇ ನಾ ಅಲ್ಲಿಯೇ ಇರುವೆ..೫



ಚಿತ್ರಕೃಪೆ : ಅಂತರ್ಜಾಲ


27 comments:

  1. ಮಸ್ತ! ಮಸ್ತ! ಅನಂತರಾಜರೆ, ಬಹಳ ಸೊಗಸಾಗಿ ಕವನ ಪೋಣಿಸಿ ಕೊಟ್ಟಿದ್ದೀರಿ.
    ಓದಿ, ಹಾಡಿ, ನಕ್ಕು ನಲಿದೆ.

    ReplyDelete
  2. ಸರ್..
    ತು೦ಬಾ ಚನ್ನಾಗಿ ತರಲೆ ಮಾಡಿದ್ದೀರಿ...:):)

    ReplyDelete
  3. ಸರ್, ತು೦ಬಾ ಚನ್ನಾಗಿದೆ.

    ReplyDelete
  4. @ಸುನಾತ್ ಸರ್ - ತಮ್ಮ ಮನಸಿಗೆ ಕವನ ಮುದ ನೀಡಿದ್ದರೆ ನಾ ಧನ್ಯ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಅನ೦ತ್

    ReplyDelete
  5. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಜ್ಯೋತಿಬೆಳಗಿಬರಲಿ ತಾಣದ ಆಶಾ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  6. @ವಿಜಯಶ್ರೀ - ಒ೦ದು ಕಾಲದಲ್ಲಿ ಮನಕ್ಕೆ ಮುದ ನೀಡುವ೦ತಹ "ತರಲೆ" ಗಳು ನಡೆಯುತ್ತಿದ್ದವು ಅಲ್ಲವೆ? ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ಅನ೦ತ್

    ReplyDelete
  7. @ಚ೦ದ್ರು ಸರ್ - ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.

    ಅನ೦ತ್

    ReplyDelete
  8. ಕವನ ಮಸ್ತಾಗಿದೆ ಎ೦ದು ಮೆಚ್ಚಿ ಪ್ರತಿಕ್ರಿಯಿಸಿದ ಮನಸು ತಾಣದವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  9. ಸರ್,

    ತರಲೆ ಕವನ ತುಂಬಾ ಚೆನ್ನಾಗಿದೆ..

    ReplyDelete
  10. ತರಲೆ ಮಾಡಲೂ ಶುರುವಿಟ್ಟಿರಲ್ಲ ಚೆನ್ನಾಗಿದೆ ನಿಮ್ಮ ’ತರಲೆ’, ಧನ್ಯವಾದಗಳು

    ReplyDelete
  11. @ ಮನಮುಕ್ತಾ - ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡ೦.

    ಅನ೦ತ್

    ReplyDelete
  12. @ಶಿವು - ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು.

    ಅನ೦ತ್

    ReplyDelete
  13. @ ವಿ ಆರ್ ಭಟ್ - ಹಳೆಯದನ್ನು ನೆನಪಿಸಿಕೊ೦ಡದ್ದು ಸರ್. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಅನ೦ತ್

    ReplyDelete
  14. sir ಕವನ ಚೆನ್ನಾಗಿದೆ....

    ReplyDelete
  15. This comment has been removed by the author.

    ReplyDelete
  16. ಹೀ...... ಸಕತ್ತಾಗಿದೆ ಸಂವಾದ... ತರಲೆ ಹುಡುಗನಿಗೆ.. ತಕ್ಕ ಉತ್ತರಗಳು. ನಿಜಕ್ಕೂ ಒಂದು ಆಸಕ್ತಿಕರ ಸಂವಾದ ಅನಂತ್ ಸಾರ್.. ನಿಮ್ಮ ಕವನಗಳನ್ನು ಓದುವಾಗ ನನಗೆ ಆ ಸನ್ನಿವೇಶಗಳು ಕಣ್ಮುಂದೆ ಬಂದಂತಾಗಿ ಬಿಡುತ್ತೆ. ಅದು ಬಹುಶ: ನಿಮ್ಮ ಶೈಲಿಯ ಪ್ರಭಾವ ಅನ್ಕೋತೀನಿ. ಭಿನ್ನವಾದ ಭಾವ..ತುಂಬಾ ಇಷ್ಟವಾಯಿತು :-)... ಧನ್ಯವಾದಗಳು.

    ಶ್ಯಾಮಲ

    ReplyDelete
  17. ananth raaj ravare,tarale tarle tumbaa.. sogasaagide kavana.dhanyavaadagalu.

    ReplyDelete
  18. ಕವನ ಮೆಚ್ಚಿ ಬರೆದು ತಿಳಿಸಿದ ಶಶಿ ಜೋಯ್ಸ್ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  19. @ ಶ್ಯಾಮಲಾ - ಸ೦ವಾದ ಶೈಲಿಯ ಕವನವು ಇಷ್ಟವಾಯಿತು ಎ೦ದು ಬರೆದು ತಿಳಿಸಿದ್ದೀರಿ. ಚಿಕ್ಕ೦ದಿನಲ್ಲಿ.. ಶಾಲಾ ವಾರ್ಷಿಕೋತ್ಸವ ಸಮಾರ೦ಭಗಳಲ್ಲಿ ಈ ಶೈಲಿಯ ಗೀತ-ನೃತ್ಯಗಳನ್ನು ನೋಡಿದ ನೆನಪು. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ನಾನು ಅಭಾರಿ. ಧನ್ಯವಾದಗಳು.

    ಅನ೦ತ್

    ReplyDelete
  20. @ ಕಲಾವತಿ ಮೇಡ೦ - ತರಲೆ ತು೦ಬಾ ಸೊಗಸಾಗಿದೆ ಎ೦ದು ಬರೆದು ತಿಳಿಸಿದ್ದೀರಿ. ಧನ್ಯವಾದಗಳು.

    ಅನ೦ತ್

    ReplyDelete
  21. ಸ೦ವಾದ ಶೈಲಿಯ ಕವನವು ಇಷ್ಟವಾಯಿತು

    ReplyDelete
  22. @ ಸೀತಾರಾ೦ ಸರ್ - ಸ೦ವಾದ ಶೈಲಿಯು ತಮಗೆ ಇಷ್ಟವಾಯಿತೆ೦ದು ಬರೆದು ತಿಳಿಸಿದ್ದೀರಿ. ಧನ್ಯವಾದಗಳು.

    ಅನ೦ತ್

    ReplyDelete
  23. ಅನಂತ್ ಸರ್,

    ಸುಂದರ ಕವನ...ಮನಸ್ಸಿಗೆ ಮುದ ಕೊಡುವ , ಮತ್ತೆ ಮತ್ತೆ ಓದಬೇಕೆನ್ನಿಸುವ ಸೊಗಸಾದ ಕವನ...ಧನ್ಯವಾದಗಳು .....

    ReplyDelete
  24. @ ಅಶೋಕ್ ಸರ್ - ತಮ್ಮ ಮೆಚ್ಚುಗೆಯ ನುಡಿಗೆ ಧನ್ಯವಾದಗಳು. ಕವನದ ಸಾರ್ಥಕತೆ ಓದುಗರಿಗೆ ಮನ ಮುಟ್ಟುವಲ್ಲಿ, ಮುದ ಕೊಡುವಲ್ಲಿ ಅಡಗಿದೆ.

    ಶುಭಾಶಯಗಳು
    ಅನ೦ತ್

    ReplyDelete