Tuesday, December 25, 2012

ಕರಿವರದ ಗಿರಿರಾಯ























ಕರಿವರದ ಗಿರಿರಾಯ ಕರುಣಾಳು ಎನ್ನೊಡೆಯ 
ಕರವ ಮುಗಿವೆನೊ ಪ್ರಭುವೆ ವೇಂಕಟರಾಯ  || ಪ ||

ಹರಿಕಾರ ಈ ಜೀವ ನಿನ್ನಡಿಗೆ ಮುಡಿಪಿಡುತ
ಚರಣಕ್ಕೆ ಪೊಡಮುಡುವೆ ಕಾಪಾಡು ಜೀಯಾ  || ಅ.ಪ ||

ಬೆಟ್ಟದಾಪುರ ದೊರೆಯೆ ದಿಟ್ಟ ನಿಲುವಲಿ ನಿಂತು
ಪಟ್ಟ ಮಹಿಷಿಯ ನೀನು ಕೆಳಗೆ ಬಿಟ್ಟೆ |
ಕಂಗೆಟ್ಟು ಕಳವಳದಿ ಬರುತಿರ್ಪ ಭಕುತರಿಗೆ
ಇಷ್ಟಾರ್ಥಗಳ ಕೊಟ್ಟು ಸಲಹುತಿರುವೆ || ೧ ||

ಬಾಂದಳವ ತುಂಬಿಸಿದ ಅಸದಳದ ಕಾರುಣ್ಯ
ಭೂತಳದ ನಾಡೊಳಗೆ ಪಸರಿಸಿರುವೆ |
ಸಪ್ತಪರ್ವತವಾಸಿ ಆಪ್ತವಾಗಿದೆ ಬದುಕು
ತೃಪ್ತವಾಗಿಹ ತನುವ ಅರ್ಪಿಸುತಿರುವೆ  || ೨ ||

ಅನುಗಾಲ ಅನುರಾಗ ಅಲೆಗಳಲಿ ತೇಲಿಸುತ
ಜನನಿಯಂದದಿ ಎನ್ನ ಪೊರೆಯುತಿರುವೆ |
ಮನದೊಳಗೆ ಮನವಾಗಿ ಆನಂದಮಯನಾಗಿ
ಅನಂತಶಯನನೆ ಮನವ ಮುದಗೊಳಿಸುತಿರುವೆ || ೩ ||
http://soundcloud.com

13 comments:

  1. ತುಂಬಾ ಸೊಗಸಾದ ಭಕ್ತಿಗೀತೆ....ಎಲ್ಲಾ ಸಾಲುಗಳು ಚೆನ್ನಾಗಿವೆ....ಜೊತೆಗೆ ಆಡಿಯೋ ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು.....ಕೇಳಿ ಆನಂದಿಸಿದೆ......ಅಭಿನಂದನೆಗಳು......

    ReplyDelete
    Replies
    1. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಅಶೋಕ್.

      Delete
  2. ಭಕ್ತಿಭಾವವನ್ನು ಉಕ್ಕಿಸುವ ಮಧುರ ಗೀತೆ.

    ReplyDelete
  3. ಪ್ರಾಸಬದ್ಧವಾದ ಭಕ್ತಿಗೀತೆ ಕೇಳಲು ಸೊಗಸಾಗಿದೆ

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಮ೦ಜುಳ ಅವರೆ.

      Delete
  4. ಧನ್ಯವಾದಗಳು ಸುನಾತ್ ಸರ್.

    ReplyDelete
  5. ಅತ್ಯುತ್ತಮ!
    ಧನ್ಯವಾದಗಳು ಸರ್...

    ReplyDelete
    Replies
    1. ಪ್ರಶ೦ಸೆಯ ನುಡಿಗಳಿಗೆ ಧನ್ಯವಾದಗಳು ಪ್ರಕಾಶ್ ಸರ್.

      Delete
  6. ತುಂಬಾ ಚೆನ್ನಾಗಿದೆ. 'ಮನದೊಳಗೆ ಮನವಾಗಿ ಆನಂದಮಯನಾಗಿ'
    ತುಂಬಾ ಇಷ್ಟ ಆಯ್ತು

    ReplyDelete
    Replies
    1. ಇಷ್ಟಪಟ್ಟು ಬರೆದು ತಿಳಿಸಿದ ಸ್ವಣ೯ ಅವರಿಗೆ ಧನ್ಯವಾದಗಳು.

      Delete
  7. ananth sir sundara
    bhaktigeetegaagi dhanyavaadagalu.

    ReplyDelete
  8. This comment has been removed by the author.

    ReplyDelete