Saturday, May 28, 2011

ಸತ್ವೋತ್ಕರ್ಷಣ











ನೀಲಿ ಬಾಂದಣದಿ ಉದಯಿಸಿದ ಹೊಂಗಿರಣ

ಸಡಗರದಿ ಭುವಿಯತ್ತ ಸಾಗಿತ್ತು ಪಯಣ

ಆಸರೆಯ ಅರಸುತ್ತ ನೇಸರದಿ ಪಸರಿಸುತ

ಧರೆಗೆ ಧಾರೆಯಂತೆ ತುಂಬಿಸಿತು, ಬಿಂಬಿಸಿತು ||೧||


ಕತ್ತಲಿನ ಮುಸುಕಿನಲಿ ಬೇಸರದ ನಸುಕಿನಲಿ

ಮುದುಡಿದ್ದ ತಿರೆಯು ತುಸುತುಸುವೇ ಬೆರೆಯುತ್ತ

ಅರುಣನಾ ಸ್ನೇಹವನು ಒಪ್ಪಿತ್ತು, ನಾಚಿತ್ತು

ತನ್ನೆಡೆಗೆ ಸೆಳೆದಿತ್ತು, ಮನದಣಿಯ ಅಪ್ಪಿತ್ತು ||೨||


ಹೊಂಬಣ್ಣ ಹೊತ್ತಿದ್ದ ಹಸನಾದ ವಸುಧೆಯು

ಹಸಿರು ಚಿಗುರೆಲೆಗಳನು ಸಂತಸದಿ ಅರಳಿಸಿತು

ಒಲವಿನಾ ರಾಗವನು ಪರಪುಟ್ಟ ಹಾಡಿತ್ತು

ಪ್ರೇಮ ಭಾವವ ತುಂಬಿ ಮಾಧುರ್ಯ ಹೊಮ್ಮಿಸಿತು ||೩||


ಮಂದಾರ ಕುಸುಮಗಳು ಮಧುಕರನ ಝೇಂಕಾರಕೆ

ವಿಕಸಿಸಿತು, ಪ್ರಖರಿಸಿತು ಮೈ ಬಿರಿದು ನಲಿದಿತ್ತು

ಅರುಣ-ಧರಣಿಯ ಮಿಲನ ಪ್ರೀತಿಯ ಬೆಸುಗೆಯಲಿ

ಜೀವಗಳ ಕರ್ಷಿಸುತ ಸತ್ವದ ಉತ್ಕರ್ಷಣವಾಯಿತು ||೪||

18 comments:

  1. ಭಾವ ಪೂರ್ಣ ಕವನ!ತುಂಬಾ ಇಷ್ಟವಾಯಿತು.

    ReplyDelete
  2. ಧರಣಿಯಲ್ಲಿ ಅರುಣನ ಕಿರಣಗಳಿಂದಾಗುವ ಪ್ರಭಾವವನ್ನು ಕವನದ ಮೂಲಕ ತುಂಬಾ ಸೊಗಸಾಗಿ ಚಿತ್ರಿಸಿರುವಿರಿ. ಅಭಿನಂದನೆಗಳು

    ReplyDelete
  3. ಕವನವನ್ನು ಮೆಚ್ಚಿ ಪ್ರತಿಕ್ರಿಯೆಯನ್ನು ದಾಖಲಿಸಿದ ಡಾ. ಸರ್ ಅವರಿಗೆ ವ೦ದನೆಗಳು.
    ಅನ೦ತ್

    ReplyDelete
  4. ಅರುಣ ಧರಣಿಯರ ಮಿಲನದ ಚಿತ್ರಣವನ್ನು ಮೆಚ್ಚಿದ ಮ೦ಜುಳಾದೇವಿ ಅವರಿಗೆ ಅಭಿನ೦ದನೆಗಳು.

    ಅನ೦ತ್

    ReplyDelete
  5. ಅನಂತ್ ಸಾರ್
    ಅರುಣ ಧರಣಿಯ ಮಿಲನದ ಭಾವ ಸುಂದರವಾಗಿದೆ. ಚಿತ್ರದಲ್ಲೂ ಅರುಣ ಇಳೆಯ ಮಿಲನ ಸಾಂಕೇತಿಕವಾಗಿದೇ. ಹೊಂಬಣ್ಣ ಸೋಕಿದ ವಸುಂಧರೆಯು ಹರುಷದಿಂದ ಹಸಿರು ಚಿಗುರೆಲೆಗಳನ್ನು ಅರಳಿಸಿರುವ ದೃಶ್ಯ ಕವಿಯ ಕಲ್ಪನೆ ಅನ್ನಿಸಲಿಲ್ಲ. ಸತ್ಯವಾದ ಘಟನೆ.. ನಿಮ್ಮ ಮಾತುಗಳ ಮೂಲಕ ನಾವು ಸಾಕ್ಷಿಯಾದೆವು ಅನ್ನಿಸಿತು. ಧನ್ಯವಾದಗಳು.. :-)

    ಶ್ಯಾಮಲ

    ReplyDelete
  6. ರವಿ ಸೋಕೆ ಧರೆ ಮಂದಸ್ಮಿತ... ಅಲ್ವಾ ಸರ್...

    ನೀವು ಎಷ್ಟು ಚೆನ್ನಾಗಿ ಬರೀತೀರಿ? ಭಾಷೆಯನ್ನು ಬಳಸುವಾಗ ಮತ್ತು ಪದ ಪದಗಳನ್ನು ಬೆಸೆಯುವಾಗ ಲಾಲಿತ್ಯದ ಅಂಟನ್ನು ಸೊಗಸಾಗಿ ಬಳಸುತ್ತೀರಿ. ನಾವು ಇನ್ನು ಎಳೆ ನಿಂಬೆ ಕಾಯಿಗಳು ಅದಕೆ ಗರ್ವ! ನಿಮ್ಮಷ್ಟೇ ಬೇಗನೇ ನಾನೂ ಪಳಗ ಬೇಕು...

    ಆಶೀರ್ವಾದವಿರಲಿ ಸರ್...

    Pl. visit my blogs:
    www.badaripoems.wordpress.com
    www.badari-poems.blogspot.com
    www.badari-notes.blogspot.com
    Ur comments are pathfinder to me.

    Pl. catch me at Facebook:
    Profile : Badarinath Palavalli

    ReplyDelete
  7. ಪದಗಳ ಬಳಕೆ ಅತ್ಯುತ್ತಮವಾಗಿದೆ ಸಾರ್.. ಮುಂಜಾನೆಯ ಪ್ರಕೃತಿಯ ದೃಶ್ಯವನ್ನು ಕಣ್ಣುಗಳ ಮುಂದೆ ಹಾಗೇ ಕಟ್ಟಿಕೊಡುತ್ತದೆ.

    ನಿಮ್ಮ ಬ್ಲಾಗಿಗೆ ನನ್ನ ಮೊದಲನೆಯ ಭೇಟಿ. ಬಹಳ ಸಂತೋಷವಾಯಿತು.

    ReplyDelete
  8. @ ಶ್ಯಾಮಲಾ- ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. ಅರುಣ-ಧರಣಿಯ ಮಿಲನ ನಿತ್ತ್ಯೋತ್ಸವವಾಗಿದ್ದು, ನಿರ೦ತರ ನಡೆಯುವ ಈ ಸತ್ವೋತ್ಕಷ೯ಣ ಭಾವಕ್ಕೆ ನಾವು ಸಾಕ್ಷಿಯಾಗಿದ್ದೇವೆ ಅಲ್ಲವೆ?
    ಅನ೦ತ್

    ReplyDelete
  9. @ ಸೀತಾರಾಮ್ - ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು

    ReplyDelete
  10. @ ಬದರೀನಾಥ್ - ಭಾಷೆಯ ಬಳಕೆಯಲ್ಲಿ ಲಾಲಿತ್ಯ-ಪದಗಳ ಪ್ರಯೋಗದ ಶೈಲಿಯನ್ನು ಮೆಚ್ಚಿ ಬರೆದು ತಿಳಿಸಿದ್ದೀರಿ. ಇದರಲ್ಲಿ ನನ್ನ ಪಾ೦ಡಿತ್ಯವೇನೂ ಇಲ್ಲ. ತಮ್ಮ ಅಭಿಮಾನಕ್ಕೆ ಧನ್ಯವಾದಗಳು. ನನ್ನ ಶುಭ ಆಶಯಗಳು ಸದಾ ನಿಮ್ಮೊಡನೆ ಇರುತ್ತದೆ.

    ಅನ೦ತ್

    ReplyDelete
  11. @ ಪ್ರದೀಪ್ - ತಾಣಕ್ಕೆ ಸ್ವಾಗತ. ದೃಶ್ಯ-ದೃಶ್ಯಾವಳಿಯನ್ನು ಮೆಚ್ಚಿ ಬರೆದು ತಿಳಿಸಿದ್ದೀರಿ. ಧನ್ಯವಾದಗಳು.

    ಅನ೦ತ್

    ReplyDelete
  12. ತುಂಬಾ ಚೆನ್ನಾಗಿದೆ ಕವನ.

    ನಿಮ್ಮವ,
    ರಾಘು.

    ReplyDelete
  13. @ರಾಘು- ಮೆಚ್ಚಿ ಬರೆದು ತಿಳಿಸಿದ ನಿಮಗೆ ಧನ್ಯವಾದಗಳು.

    ಅನ೦ತ್

    ReplyDelete
  14. ಚೆನ್ನಾಗಿದೆ ಸರ್,
    ಪದಗಳನ್ನು ಅತ್ಯಂತ ಸುಂದರವಾಗಿ ಬಳಸಿದ್ದೀರಿ....

    ReplyDelete
  15. ನಿಮ್ಮ ಬಾವನೆಗಳಿಗೆ ತಕ್ಕ ಹಾಗೆ ಪದಪ್ರಯೋಗಿಸಿದ್ದೀರಲ್ಲಾ ಸರ್, ವಾವ್. ಎಷ್ಟೋ ಬಾರಿ ನಮ್ಮ ಬಾವನೆಗಳಿಗೆ ಪದಗಳಿರಲಿ, ವ್ಯಕ್ತ ಪಡಿಸೋಕೆ ಭಾಷೆಯು ತಿಳಿಯುವುದಿಲ್ಲ. ಬಹಳ ಸುಂದರವಾಗಿದೆ ಸರ್. ಮಂದಾರ ಪುಷ್ಪಗಳು ಮಧುಕರನ ಝೇಂಕಾರಕ್ಕೆ ಮಿಡಿಯುತ್ತವೆಯೋ ಇಲ್ಲವೋ ಆದರೆ ನನ್ನ ಮನ ಮಾತ್ರ ಮಿಡಿದಿದೆ.
    ನಿಮ್ಮಂತಹ ಹಿರಿಯರು ನಮ್ಮಂತಹ ಕಿರಿಯರ ಬ್ಲಾಗಿಗೂ ಬೇಟಿ ನೀಡಿ ಸಲಹೆ ಸೂಚನೆಗಳನ್ನು ಹಿಡಿದರೆ ಬಹಳ ಸಂತೋಷವಾಗುತ್ತದೆ.

    ReplyDelete
  16. @ ಆಶಾ - ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಅನ೦ತ್

    ReplyDelete
  17. @ರಾಜ್ - ತಾಣಕ್ಕೆ ಸ್ವಾಗತ ರಾಜ್ ಅವರೆ. ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಬ್ಲಾಗಿಗೆ ಖ೦ಡಿತ ಭೇಟಿ ನೀಡುತ್ತೇನೆ. ಬರುತ್ತಿರಿ. ಧನ್ಯವಾದಗಳು.

    ಅನ೦ತ್

    ReplyDelete