Friday, October 22, 2010

ಚೆಲುವೀ...

ಚೆಲುವೀ..

ಚೆಲುವೀ ಕಡು ಚೆಲುವೀ..

ಗುಡ ಗುಡನೆ ಮತ್ತ ನೀ ಯಾಕ ಓಡುವೀ..

ಚೆಲುವೀ. ..||

ಗ೦ಡಾನೂ ನಾ ಹೌದಾ..

ಪು೦ಡಾನೂ ನಾ ಹೌದಾ..

ಚ೦ಡೀಯಾ ಮಾಡಿದರ

ಪ್ರಚ೦ಡ ಆಗತೇನಾ.. ||

ಚೆಲುವೀ..

ಗುಡಿಸಲು ಮನಿ ಎ೦ದು

ಶಿಡಿ ಷಿಡಿ ಮಾಡ್ಬ್ಯಾಡಾ..

ಮಾಳಿಗಿ ಮನಿಯೊ೦ದ

ಬಾಡಿಗೆ ಹಿಡಿದೇನಾ... ||

ಚೆಲುವೀ..

ಬಡತಾನ ಇರಲ್ಯಾಕ

ಬಡವರು ನಾವಲ್ಲಾ..

ಬಡಬಡಿಸಿ ಜೀವ

ಬರಡು ಮಾಡಬ್ಯಾಡಾ..||

ಚೆಲುವೀ..

ಕಡಗಾವ ತ೦ದೀನಿ

ಸಡಗರದಿ ನೀ ಬಾರೆ..

ಬಡಿವಾರದ ಮಾತೀನಾ..

ಬಿನ್ನಾಣಗಿತ್ತೀಯೆ... ||

ಚೆಲುವೀ...


ಚಿತ್ರಕೃಪೆ : ಅಂತರ್ಜಾಲ



33 comments:

  1. ಚ೦ದ ಬರೆದಿದ್ದೀರಿ ಸರ್
    ಒಳ್ಳೆ ಜೋಶ್ ನಲ್ಲಿ ಹಾಡಬಹುದು...ನರ್ತಿಸಲೂ ಬಹುದು...

    ವ೦ದನೆಗಳು.

    ReplyDelete
  2. ಅನಂತ್ ಸರ್;ರಾಗ ಹಾಕಿ ಹಾಡಲು ಹಾಡು ತುಂಬಾ ಚೆನ್ನಾಗಿದೆ.ನಮಸ್ಕಾರ.

    ReplyDelete
  3. ಸರ್,

    ಚೆಲುವಿ ಪದ್ಯವೆಂದು ಓದಿದರೂ ಅದಕ್ಕೊಂದು ಲಯವನ್ನು ಕೊಟ್ಟಿರುವುದರಿಂದ ಹಾಡಲೂಬಹುದು. ಚೆನ್ನಾಗಿದೆ.

    ReplyDelete
  4. ವಾವ್ ಸೂಪರ್ !! ಕುಣಿಯುತ್ತಾ ಹಾಡಲು ಚೆನ್ನಾಗಿದೆ. ಜಾನಪದ ತಾಳಗಳಿಗೆ ಹೇಳಿ ಮಾಡಿಸಿದಂತಿದೆ.

    ReplyDelete
  5. ಸರ್
    ಚಲುವಿಯ ಬೆಡಗು -ಬಿನ್ನಾಣ ವನ್ನು ಚೆನ್ನಾಗಿ ವಿವರಿಸಿದ್ದಿರ..ರಾಗ ಮಾಡಿ ಹಾಡುವ ಹಾಡಾಗಿದೆ..!

    ReplyDelete
  6. ಅನಂತರಾಜರೆ,
    ಜಾನಪದ ಧಾಟಿಯ ನಿಮ್ಮ ಹಾಡು ತುಂಬ ಸೊಗಸಾಗಿದೆ. ನನ್ನ ಹೆಂಡತಿಯ ಎದುರಿಗೆ ಕುಣಿಯುತ್ತ ಹಾಡಿಯೇ ಬಿಟ್ಟೆ!

    ReplyDelete
  7. ಜಾನಪದ ದಾಟಿಯ ನೃತ್ಯಕ್ಕೂ ಒಗ್ಗುವ೦ತಿರುವ ನಿಮ್ಮ ಕವನ ಚೆನ್ನಾಗಿದೆ.

    ReplyDelete
  8. ಅನಂತ್ ಸರ್,
    ತಾಳ-ಲಯ ಜೊತೆಗೆ ಜಾನಪದ ಶೈಲಿ..
    ಚೆನ್ನಾಗಿದೆ ಹಾಡು

    ReplyDelete
  9. @ ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು ವಿಜಯಶ್ರೀ ಅವರಿಗೆ - ಪದ್ಯ ಜೋಶ್ ತ೦ದಿದ್ದರೆ ನಾ ಧನ್ಯ ..
    @ ರಾಗ ಹಾಕಲೂ ಬಹುದು ಎ೦ದು ಮೆಚ್ಚಿದ ಡಾ. ಮೂರ್ತಿ ಸರ್ ಅವರಿಗೆ ಧನ್ಯವಾದಗಳು.
    @ ಲಯಬಧ್ಧವಾಗಿದೆ ಎ೦ದು ಮೆಚ್ಚಿದ ಶಿವೂ ಅವರಿಗೆ ಧನ್ಯವಾದಗಳು.

    ReplyDelete
  10. ಪದ್ಯದ ಲಯವನ್ನು ಮೆಚ್ಚಿ buzz ನಲ್ಲಿ share ಮಾಡಿಕೊ೦ಡ ಬಾಲು ಅವರಿಗೆ ಧನ್ಯವಾದಗಳು ಸರ್.

    ಅನ೦ತ್

    ReplyDelete
  11. ಚಲುವಿಯ ಬೆಡಗು -ಬಿನ್ನಾಣವನ್ನು ಮೆಚ್ಚಿಕೊ೦ಡ ಶಶಿ ಜೋಯ್ಸ್ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  12. "ಜಾನಪದ ಧಾಟಿಯ ನಿಮ್ಮ ಹಾಡು ತುಂಬ ಸೊಗಸಾಗಿದೆ. ನನ್ನ ಹೆಂಡತಿಯ ಎದುರಿಗೆ ಕುಣಿಯುತ್ತ ಹಾಡಿಯೇ ಬಿಟ್ಟೆ!" ಎ೦ಬ ನಿಮ್ಮ ಮೆಚ್ಚುಗೆಯೇ ನನಗೆ ಸಲ್ಲುವ ಬಹುಮಾನ- ಸುನಾತ್ ಸರ್...ಧನ್ಯೋಸ್ಮಿ..

    ಅನ೦ತ್

    ReplyDelete
  13. ತರುಣ್ - ಜಾನಪದ ಧಾಟಿ ಸೂಪರ್ ಅನ್ನಿಸ್ತಾ..ಧನ್ಯವಾದಗಳು.

    ಅನ೦ತ್

    ReplyDelete
  14. ಜಾನಪದ ದಾಟಿಯ ಪದ್ಯ..ನೃತ್ಯಕ್ಕೂ ಒಗ್ಗುವ೦ತಿದ್ದರೆ ಅದರ ಮೆರಗು ಹೆಚ್ಚುತ್ತದೆ..ಅಲ್ಲವೆ kusu Muliyaalava ಅವರೆ. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.

    ಅನ೦ತ್

    ReplyDelete
  15. ಕವನ ಮೆಚ್ಚಿದ "ಸಾನ್ವಿಯ ಅಪ್ಪ ಅಮ್ಮ ತಾಣದವರಿಗ” ಧನ್ಯವಾದಗಳು ಸರ್.
    ತಾಳ-ಲಯದ ಜೊತೆಗೆ ಜಾನಪದ ಶೈಲಿಯನ್ನು ಇಷ್ಟಪಟ್ಟಿದ್ದೀರಿ..
    ವ೦ದನೆಗಳು.

    ಅನ೦ತ್

    ReplyDelete
  16. * ಕವಿತೆ ಮೆಚ್ಚಿದ ಮನಮುಕ್ತಾ ಅವರಿಗೆ ಧನ್ಯವಾದಗಳು
    * "tumba jora nimma shrimathi" - ನನ್ನ ಭಾವಕೆ mirror ಹಿಡಿದಾಗ ತಾಣದವರಿಗೆ -
    ಶ್ರೀಮತಿ ಅ೦ದರೆ ಜೋರೂ(ಹಿ೦ದಿಯಲ್ಲಿ..)ಅಲ್ವಾ..ಸರ್? -ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
    * ಮಸ್ತ್ ಅದಾ..ಅ೦ದು ಮ೦ಜು ಗೆ ಧನ್ಯವಾದಗಳು.

    ಅನ೦ತ್

    ReplyDelete
  17. ಜಾನಪದ ಹಾಡಿನಂತಿದೆ.. ಶಬ್ದಾಲಂಕಾರ ಬಹಳ ಸೊಗಸಾಗಿದೆ.. :)

    ReplyDelete
  18. ನನಗನಿಸಿದ್ದು ಅನಂತರಾಜರಿಗೆ ಹೊಸದಾಗಿ ಪ್ರಾಯಬಂತೇ ಎಂದು! ಅಂತೂ ನಮ್ಮೆಲ್ಲರ ಜೊತೆ ನೀವೂ ಕುಣಿಯಹತ್ತಿದ್ದೀರಿ, ಬದುಕೇ ರಂಗಸ್ಥಳವೆಂದಮೇಲೆ ಕುನಿಯಲೇ ಬೇಕಲ್ಲ! ಕವನ ಗೇಯವಾಗಿದೆ, ಮತ್ತಷ್ಟು ಗಾನಾ ಬಜಾನಾ ಮಾಡಿ, ಧನ್ಯವಾದಗಳು

    ReplyDelete
  19. ಸರ್‍, ಜೀವಂತ ಚಿತ್ರಕ್ಕೆ ಜೀವಂತ ಕವಿತೆ. ಚೆನ್ನಾಗಿದೆ.
    ಸ್ನೇಹದಿಂದ,

    ReplyDelete
  20. ಒಳ್ಳೇ ಧಾಟಿಯ ಚಂದದ ಕವನ. ಹಾಡಿಕೊಳ್ಳುವಾಗ ನಾವು ಸ್ಕೂಲಿನಲ್ಲಿ ಮಾಡುತ್ತಿದ್ದ ಜಾನಪದ ನೃತ್ಯದ ನೆನಪಾಗಿತ್ತು...ಬಡತನ ಇದ್ದರೂ... ಗುಡಿಸಲ ಮನೆಯಾದರೂ... ಸಿಡಿಪಿಡಿ ಮಾಡದೇ ತನ್ನ ಚೆಲುವೀ ನಗುನಗುತ್ತಿರಲೆಂದು ಕಡಗ ತಂದ ಗಂಡನ ಒಲವು, ಪ್ರೀತಿಯನ್ನೂ... ರಸಿಕತೆಯನ್ನೂ...;-) ನವಿರಾಗಿ ಸೂಚಿಸಿರುವ ಭಾವ... ಸಕತ್ತಾಗಿದೆ ಅನಂತ್ ಸಾರ್...

    ಶ್ಯಾಮಲ

    ReplyDelete
  21. ಯಾರೇ ನೀನು ಚೆಲುವೆ..chennagide

    ನನ್ನ 'ಮನಸಿನಮನೆ'ಗೂ ಬನ್ನಿ..

    ReplyDelete
  22. cheluvi chennaagide.
    and now i like the look of your blog
    :-)
    malathi S

    ReplyDelete
  23. @ ಭಾವನಾ - ಜಾನಪದ ಹಾಡಿನ೦ತಿದೆ ಎ೦ದು ಮೆಚ್ಚಿದ ಭಾವನಾ ಅವರಿಗೆ ಧನ್ಯವಾದಗಳು.
    @ ವಿ ಆರ್ ಭಟ್ - ಹೊಸದಾಗಿ ಪ್ರಾಯ ಬ೦ದದ್ದಲ್ಲ..ಭಟ್ಟರೇ..ಅದು ಇದ್ದದ್ದು..ಹೋಗಲೇವಲ್ಲದು..! ಮೆಚ್ಚುಗೆಗೆ ಧನ್ಯವಾದಗಳು ಸರ್.
    @ ಚ೦ದ್ರು ಸರ್ - ಕವನದ ಜೀವ೦ತಿಕೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು

    ಅನ೦ತ್

    ReplyDelete
  24. ಕವನದ ಧಾಟಿಯನ್ನು ಮೆಚ್ಚಿ, ಶಾಲಾ ದಿನಗಳಲ್ಲಿ ಮಾಡುತ್ತಿದ್ದ ಜಾನಪದ ನೃತ್ಯದ ಸೊಗಡನ್ನು ನೆನಪಿಸಿಕೊಳ್ಳುತ್ತಾ.. ಗಂಡನ ಒಲವು, ರಸಿಕತೆಯ ಭಾವವನ್ನು ಮೆಚ್ಚಿಕೊ೦ಡ ಶ್ಯಾಮಲಾಗೆ ಧನ್ಯವಾದಗಳು.

    ಅನ೦ತ್

    ReplyDelete
  25. @ ಮನಸಿನ ಮನೆಯವರಿಗೆ - ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
    @ ಮಾಲತಿ ಅವರಿಗೆ - ಕವನದ ಜೊತೆಗೆ ತಾಣದ ನೋಟವನ್ನು ಮೆಚ್ಚಿದ ತಮಗೆ ಧನ್ಯವಾದಗಳು.

    ಅನ೦ತ್

    ReplyDelete
  26. ತುಂಬಾ ಚೆನ್ನಾಗಿದೆ ಚೆಲುವಿ ಹಾಡು.

    ReplyDelete
  27. ಅನಂತರಾಜ ರವರೆ ,ನಿಮ್ಮ ಚೆಲುವಿ ಕವನ ಚೆಲುವಾಗಿಯೇ ಇದೆ.ಧನ್ಯವಾದಗಳು

    ReplyDelete
  28. ನಮಸ್ತೆ ಅನಂತ್ ಸರ್...

    ಕಡೆಗೂ ಬಡಬಡಿಸುವ ತನ್ನ ಚೆಲುವಿಗೆ, ಬಾಡಿಗೆಯಾಗಿ ಮಾಳಿಗೆ ಮನೆಯನ್ನೂ, ಕಡಗಾವ ತಂದು ಪ್ರೀತಿ ತೋರಿಸೋ ಆ ಚೆಲುವನ ಬಗ್ಗೆ ಹೊಗಳಲೇ ಬೇಕಾದ್ದು...

    ಸರ್... ಹಾಡು ತುಂಬಾ ಚೆನ್ನಾಗಿದೆ. ನನಗೆ ತುಂಬಾನೆ ಖುಷಿಯಾಯ್ತು. ಇನ್ನೊಂದು ಏನಂದ್ರೆ, ನೀವು ಆಜ್ಞಾಪಿಸಿದರೆ, ನಾನು ಈ ಹಾಡಿಗೆ ರಾಗ ಸಂಯೋಜಿಸಿ, ನನ್ನ ಮುದ್ದು ಪುಟಾಣಿಗಳಿಗೆ ಕಲಿಸಿಕೊಡಬಲ್ಲೆ.......


    ಧನ್ಯವಾದಗಳೊಂದಿಗೆ ....ಸ್ವಪ್ನಾ.ಎನ್.ಶ್ರೀಯಾನ್.

    ReplyDelete
  29. @ ಸೀತಾರಾ೦ - ಮೆಚ್ಚುಗೆಗೆ ವ೦ದನೆಗಳು ಸರ್.
    @ ಕಲರವ - ಕವನವನು ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.
    @ ಸಪ್ನಾ - ತಾಣಕ್ಕೆ ಸ್ವಾಗತ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

    ReplyDelete