Sunday, October 3, 2010

ಚಂದಿರ





ಅಂಬರವೇರಿದ ಸುಂದರ ಮೊಗದವ
ಚಂದಿರ ಕುಳಿತಾನೆ..

ಚಿಂತಿತ ಮನಸನು ವಿಕಸಿತಗೊಳಿಸುತ
ಸಂತಸ ತರುತಾನೆ....೧


ಜುಳು ಜುಳು ಹರಿಯುವ ನೀರಲಿ
ಬೆಳ್ಳಿಯ
ಬೆಳಕನು ಕೊಡುತಾನೆ

ಕೊಳದಲಿ ಅರಳಿದ ನೈದಿಲೆ ಮೊಗವನು
ಚುಂಬಿಸಿ ನಗುತಾನೆ....೨


ಇರುಳಲಿ ಅರಳುವ ರಾಣಿಯ ಮಿಲನಕೆ

ಭರದಲಿ ಬರುತಾನೆ
ಮಾದಕ ನಿಲುವಿನ ಮೋಹಕ ಚೆಲುವಿಗೆ
ಮನಸನು ಕೊಡುತಾನೆ....೩

ಸಾಗರ ಜೊತೆಯಲಿ ಸರಸವ ಆಡುತ
ಬಾನಿಗೆ ಕರೀತಾನೆ

ಉಕ್ಕುವ ಅಲೆಗಳ ಜೊತೆಯಲಿ ಕೂಡುತ
ನಕ್ಕು ನಲಿಯುತಾನೆ.....೪

ಬೆಳ್ಳಿತಾರೆಯರು ಬಳಸಿ ಬರುತಿರಲು
ಬಂಧಿಯಾಗುತಾನೆ
ಮೋಡದ ಮರೆಯಲಿ ಓಡುತ ಓಡುತ

ವಿದಾಯ ಎನುತಾನೆ...೫


ಚಿತ್ರಕೃಪೆ : photobucket.com

47 comments:

  1. bahaLa sundara chandirana varNane.. :)

    ReplyDelete
  2. ಸುಂದರ ಕವನ ಅನಂತ್ ಸರ್.ಇಷ್ಟವಾಯಿತು.

    ReplyDelete
  3. ತುಂಬಾ ಚೆಂದದ ಕವನ. ಮನಸ್ಸು ಪ್ರಫುಲ್ಲಿತವಾಯಿತು. ಕವನದ ಓಟ ವಿಶಿಷ್ಟವೆನಿಸಿತು.

    ReplyDelete
  4. ಅನಂತ್ ಸರ್, ಕವನ ಇಷ್ಟವಾಯಿತು.

    ReplyDelete
  5. ಸರ್

    ಸುಂದರ ಸಾಲುಗಳು

    ಹಾಡೋಕೆ ಚೆನ್ನಾಗಿದೆ

    ReplyDelete
  6. tumba chennagide sir kavana jotege chitra

    ReplyDelete
  7. ಅನಂತ್ ಸರ್
    ಸುಂದರ ಚಿತ್ರ ಜೊತೆಗೆ ಕವನ ಕೂಡ ಇಷ್ಟವಾಯಿತು...

    ReplyDelete
  8. ಅನಂತ್ ಸರ್..

    ಬಹಳ ಸುಂದರ ಕವನ...
    ಪ್ರಸಬದ್ಧವಾಗಿದೆ... ಹಾಡಬಹುದು ಅನಿಸುತ್ತದೆ..

    ಅಭಿನಂದನೆಗಳು... ಮೋಹಕ ಸಾಲುಗಳಿಗೆ...

    ReplyDelete
  9. ಸುಂದರ ಕವನ... ಚಂದಮಾಮನ ವರ್ಣನೆ ಇಷ್ಟವಾಯಿತು...

    ReplyDelete
  10. ತುಂಬು ಚಂದಿರನ ಪ್ರಣಯದಾಟಗಳನು ಸುಂದರವಾಗಿ ವರ್ಣಿಸಿದ್ದೀರಿ ಅನಂತ್ ಸರ್.. ನೀವೆಂದಂತೆ ಎಲ್ಲಿ ಚಂದಿರ ವಿದಾಯವೆಂದು ಬಿಡುವನೋ ಎಂಬ ಆತಂಕದಲ್ಲಿ, ಅವಸರದಲ್ಲಿ.., ಸಾಗರದೊಟ್ಟಿಗೆ ಸರಸವಾಡುವ, ಉಕ್ಕುವ ಅಲೆಗಳಲಿ ಕೂಡುತ ಆಡುವ ಚಂದಿರನ ನೋಡಲು... ಅವನ ಕರೆಗೆ ಓಗೊಟ್ಟು ಹೊರಟಿರುವಂತಿದ್ದಾಳೆ ಹುಡುಗಿ..... ನಿಜವಾಗಿ ಸುಲಲಿತವಾಗಿ ಹಾಡಿಕೊಳ್ಳುವಂತಿದೆ ಪದಗಳ ಜೋಡಣೆ. ತುಂಬಾ ಇಷ್ಟವಾಯಿತು.

    ಶ್ಯಾಮಲ

    ReplyDelete
  11. ಅನಂತರಾಜರೆ,
    ಲಲಿತ ಪದಗಳನ್ನು ಬಳಸಿ, ಬೆಳದಿಂಗಳಿನಷ್ಟೇ ಹಿತಕರವಾದ ಕವನವನ್ನು ನೀಡಿದ್ದೀರಿ. ಅಭಿನಂದನೆಗಳು.

    ReplyDelete
  12. ಪ್ರಾರ೦ಭದಲ್ಲಿ ಪ್ರತಿಕ್ರಿಯಿಸಿ ಮೆಚ್ಚುಗೆ ಸೂಚಿಸಿದ ಭಾವನಾ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  13. ಕವನವನ್ನು ಮೆಚ್ಚಿದ ಡಾ.ಕೃಷ್ಣಮೂರ್ತಿ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  14. ಕವನದ ಓಟವನ್ನು ಮೆಚ್ಚಿದ ಸೀತಾರ೦ ಅವರಿಗೆ ಧನ್ಯವಾದಗಳು. ರಿದಮ್ ಗೆ ಹೆಚ್ಹು ಒತ್ತು ಕೊಟ್ಟು ಬರೆಯಲು ಪ್ರಯತ್ನಿಸಿದೆ.

    ಅನ೦ತ್

    ReplyDelete
  15. ಕವನವನ್ನು ಇಷ್ಟಪಟ್ಟ ಚ೦ದ್ರು ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  16. ಸು೦ದರ ಸಾಲುಗಳು ಎ೦ದು ಪ್ರತಿಕ್ರಿಯಿಸಿದ ಡಾ.ಗುರು ಸರ್ ಅವರಿಗೆ ವ೦ದನೆಗಳು.

    ಅನ೦ತ್

    ReplyDelete
  17. ಮೆಚ್ಚುಗೆ ಸೂಚಿಸಿದ ಮನಮುಕ್ತಾ ಅವರಿಗೆ ವ೦ದನೆಗಳು.

    ಅನ೦ತ್

    ReplyDelete
  18. ಚಿತ್ರ ಮತ್ತು ಚಿತ್ರಣ ಎರಡನ್ನೂ ಮೆಚ್ಚಿದ ಮನಸು ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  19. ಚಿತ್ರ ಜೊತೆಗೆ ಕವನವನ್ನು ಇಷ್ಟ ಪಟ್ಟ ಶಶಿ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  20. ಬಹಳ ಸುಂದರ ಕವನ...ಪ್ರಾಸಬಧ್ಧವಾಗಿದೆ ಎ೦ದು ಪ್ರಶ೦ಸಿಸಿದ ಪ್ರಕಾಶ್ ಸರ್ ಗೆ ವ೦ದನೆಗಳು.

    ಅನ೦ತ್

    ReplyDelete
  21. ಚಂದಮಾಮನ ವರ್ಣನೆ ಇಷ್ಟವಾಯಿತೆ...ದನ್ಯವಾದಗಳು ಪ್ರಗತಿ ಮೇಡ೦.

    ಅನ೦ತ್

    ReplyDelete
  22. ನಿಮ್ಮ ಸು೦ದರ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ಯಾಮಲಾ. ಚಿತ್ರಣಕ್ಕೆ ಚಿತ್ರವೇ ಪೈಪೋಟಿ ಕೊಡುವ೦ತಿದೆ.. ಅಲ್ಲವೆ? ಸುಲಲಿತ ಪದಗಳ ಜೋಡಣೆಯನ್ನು ಮೆಚ್ಚಿದ್ದೀರಿ.
    ಧನ್ಯವಾದಗಳು.

    ReplyDelete
  23. ಲಲಿತ ಪದಗಳನ್ನು ಬಳಸಿ ಬೆಳದಿಂಗಳಿನಷ್ಟೇ ಹಿತಕರವಾದ ಕವನವನ್ನು ನೀಡಿದ್ದೀರಿ ಎ೦ದು ಪ್ರತಿಕ್ರಿಯಿಸಿದ ಸುನಾತ್ ಸರ್ ಗೆ ವ೦ದನೆಗಳು. ತಮ್ಮ ಮೆಚ್ಚುಗೆ ಮಾತುಗಳು ನನಗೆ ಪ್ರೋತ್ಸಾಹದಾಯಕವಾಗಿರುತ್ತದೆ.

    ಧನ್ಯವಾದಗಳು
    ಅನ೦ತ್

    ReplyDelete
  24. ಅನಂತರಾಜ್ ರವರೆ ಕವನ ಪ್ರಾಸಬದ್ಧ ವಾಗಿದೆ.ಒಳ್ಳೆಯ ರಾಗದ ಲಯವನ್ನೇ ಬಳಸಿಕೊಂದಿದ್ದೀರ,ಅಭಿನಂದನೆಗಳು

    ReplyDelete
  25. ಅನಂತರಾಜ್ ರವರೆ ಕವನ ಪ್ರಾಸಬದ್ಧ ವಾಗಿದೆ.ಒಳ್ಳೆಯ ರಾಗದ ಲಯವನ್ನೇ ಬಳಸಿಕೊಂದಿದ್ದೀರ,ಅಭಿನಂದನೆಗಳು

    ReplyDelete
  26. ಮಾದಕ ನಿಲುವಿನ ಮೋಹಕ ಚೆಲುವಿಗೆ
    ಮನಸನು ಕೊಡುತಾನೆ.... ತುಂಬಾ ಇಷ್ಟ ಆಯ್ತು ಈ ಸಾಲುಗಳು ತುಂಬಾ ಚನ್ನಾಗಿದೆ ಕವನ

    ReplyDelete
  27. ಅನಂತ್ ಸರ್,
    ಸೊಗಸಾದ ಚಂದದ ಚಂದಿರ ಕವನ !
    ಹಾಡಲು ಚೆನ್ನಾಗಿದೆ..

    ReplyDelete
  28. ಕವನವನ್ನೂ ರಾಗದ ಲಯವನ್ನೂ ಮೆಚ್ಚಿ ಬರೆದು ತಿಳಿಸಿದೆ ಕಲಾವತಿ ಮೇಡ೦ ಅವರಿಗೆ ದನ್ಯವಾದಗಳು.

    ಅನ೦ತ್

    ReplyDelete
  29. ಮಾದಕ ನಿಲುವಿನ ಮೋಹಕ ಚೆಲುವೆಯ ಮೆಚ್ಚಿದ ಮ೦ಜು ಗೆ ಧನ್ಯವಾದಗಳು!

    ಅನ೦ತ್

    ReplyDelete
  30. ಸೊಗಸಾದ ಚಂದದ ಚಂದಿರ ಕವನ ಎ೦ದು ಮೆಚ್ಚಿ ಪ್ರತ್ರಿಕ್ರಿಯಿಸಿದ ಅಪ್ಪ ಅಮ್ಮ ತಾಣದೊಡೆಯರಿಗೆ ಧನ್ಯವಾದಗಳು.

    ಅನ೦ತ್

    ReplyDelete
  31. ಇಷ್ಟವಾಯ್ತು, ಇಂದಿನ ದಿನದಲ್ಲಿ ಗೇಯಗೀತೆಗಳನ್ನು ಬಹಳಜನ ಬರೆಯುವುದೇ ಇಲ್ಲ, ಸುನಾಥರು ಹೇಳಿದ ಹಾಗೇ ಲಲಿತ ಪದಪುಂಜ ಬಳಸಿ ಬರೆದಿದ್ದೀರಿ,ಹೀಗೆ ಮತ್ತಷ್ಟು ಗೇಯ ಗೀತೆಗಳನ್ನು ಎದುರು ನೋಡುತ್ತೇನೆ, ಧನ್ಯವಾದ

    ReplyDelete
  32. ಚಂದದ ಚಿತ್ರಕ್ಕೆ ಸುಂದರ ಪದಗಳ ಕವಿತೆಯ ಅಲಂಕಾರ ,ಸುಂದರ ಭಾವನೆಗಳ ಅನಾವರಣ .ಖುಷಿಯಾಗಿದೆ. ನಿಮಗೆ ಧನ್ಯವಾದಗಳು

    ReplyDelete
  33. VR ಭಟ್ ಸರ್ - ಲಲಿತ ಪದಪುಂಜ ಬಳಸಿ ಬರೆದಿದ್ದೀರಿ ಎ೦ದು ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ, ಧನ್ಯವಾದಗಳು

    ಚರಿತಾ ಭಟ್ ಮೇಡ೦ - ತಾಣವನ್ನು ಇಷ್ಟ ಪಟ್ಟಿದ್ದೀರಿ. ವ೦ದನೆಗಳು

    ಬಾಲು ಸರ್ - ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ ಹಾಗೇ buzz ನಲ್ಲಿ ಕೂಡ share ಮಾಡಿದ್ದೀರಿ. - ಧನ್ಯವಾದಗಳು

    ಅನ೦ತ್

    ReplyDelete
  34. ಸೊಗಸಾಗಿವೆ ಸಾಲುಗಳು..
    ಬೆಳದಿಂಗಳ ಬಾಲೆಯ ಚಿತ್ರ ಕೂಡ ಕವನಕ್ಕೆ ಮೆರಗು ನೀಡುವಂತಿದೆ..

    ReplyDelete
  35. ಸು೦ದರ ಸಾಲುಗಳ ಭಾವಗೀತಾತ್ಮಕ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್.

    ReplyDelete
  36. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಕತ್ತಲ ಮನೆ ತಾಣದವರಿಗೆ ಹಾಗೂ ಪ್ರಭಾಮಣಿ ನಾಗರಾಜ್ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  37. ಅನಂತ್ ಸರ್...ಬೌಲ್ಡ್ ಔಟ್ ಅಂತಾರಲ್ಲಾ ಹಾಗಾಯ್ತು ನಿಮ್ಮ ಕವನದ ಸುಂದರ ಹರಿವನದಿಯಲೆಯ ಮೇಲೆ ಹತ್ತಿಹಗುರಾಗಿ ತೇಲಿದನುಭವ...ವಾವ್...

    ReplyDelete
  38. ಮೆಚ್ಚಿ ಪ್ರತಿಕ್ರಿಯಿಸಿದ ವಸ೦ತ್ ಗೆ ಧನ್ಯವಾದಗಳು.
    ತಾಣಕ್ಕೆ ಭೇಟಿ ನೀಡಿ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ ಅಜಾದ್ ಸರ್ ಅವರಿಗೂ ವ೦ದನೆಗಳು.

    ಅನ೦ತ್

    ReplyDelete
  39. Anant Sir,

    nimma blog ge nanna modala bheti, Janapada shailiya ee kavana ishta aitu, haage gunugunisabahudaada kavana, nimma ella postgalannu ondondaage odutiddene. Dhanyavaadagalu....

    namma "Kushi yallu bhagiyaagi...........

    http://ashokkodlady.blogspot.com

    ReplyDelete
  40. ತಾಣಕ್ಕೆ ಸ್ವಾಗತ ಅಶೋಕ್, ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ಅನ೦ತ್

    ReplyDelete
  41. ಲಯಬದ್ಧವಾಗಿದೆ. ಭಾವಗೀತೆಯ ಶೈಲಿಯಲ್ಲಿದೆ

    ReplyDelete
  42. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ದೀಪ ಸ್ಮಿತಾ ಅವರಿಗೆ ಧನ್ಯವಾದಗಳು

    ಅನ೦ತ್

    ReplyDelete
  43. ಸುಂದರವಾಗಿ,ರಾಗ ಸಂಯೋಜಿಸಿ ಹಾಡುವಂತಿದೆ.

    ಮೋಹಕ ಕವನ.

    ತುಂಬಾ ಸೊಗಸಾಗಿದೆ ಧನ್ಯವಾದಗಳು.

    ಬೆಳದಿಂಗಳ ಬಾಲೆಯ ಚಿತ್ರ ಕೂಡ ಕವನಕ್ಕೆ ಮೆರಗು ನೀಡುವಂತಿದೆ..

    ReplyDelete
  44. aaha estu chandada kavana saar .. tumbane istavaaytu...

    ReplyDelete
  45. ಚಿತ್ರ-ಚಿತ್ರಣವನ್ನು ಮೆಚ್ಚಿದ ವೆ೦ಕಟಕೃಷ್ಣ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  46. ಚೆ೦ದದ ಕವನವೆ೦ದು ಇಷ್ಟಪಟ್ಟ ರ೦ಜಿತಾ ಅವರಿಗೆ ಧನ್ಯವಾದಗಳು.

    ಅನ೦ತ್

    ReplyDelete