Tuesday, December 7, 2010

ಹೆತ್ತವಳು......










ಬೇಸರಿಸದಿರು
ನೀ ಎನ್ನ ಮುದ್ದು ಮಗುವೆ

ಸಾಕೆನಗೆ ನಿನ
ದೊಂದು ನಸು ನಗುವೆ... ||ಪ||

ಮಗುವಾಗಿ ನೀ ಬಂದೆ ಕರುಳಕುಡಿಯಾಗಿ ನಿಂದೆ
ಮಡಿಲನ್ನು ತುಂಬುತ್ತ ಮುದವನ್ನೆ ಹರಿಸಿದೆ

ಹಗಲಿನಲಿ ರಮಿಸುತ್ತ ನಾ ನಿನ್ನ ಪಾಲಿಸಿದೆ

ಇರುಳಿನಲಿ ನೀ ಎನ್ನ ನಿದ್ದೆಯನು ಹಾರಿಸಿದೆ...
||೧||

ಬಾಲ್ಯದಾ ದಿನಗಳಲಿ ಬಲು ದಿವ್ಯವಾಗಿದ್ದೆ

ಅಳುಮೋರೆ
ನೋ
ಡಿದೊಡೆ ನಾ ಬಹಳ ಕರಗಿದ್ದೆ
ನಿನ್ನೊಡನೆ ಆಟದಲಿ ನಾ ಮುಳುಗಿ ಹೋಗಿದ್ದೆ
ಸಂತಸವ ತರಲೆಂದೇ ಓಟದಲಿ ಸೋತಿದ್ದೆ....||೨||










ಕಲಿಯುವಾ ಶಾ
ಲೆಯದು ಬಲು ದೂರ ಎನುತಿದ್ದೆ
ಕಾಡುತ್ತ ಬೇಡುತ್ತ ನೀ ಒಲ್ಲೆ ಎಂದಳುತಿದ್ದೆ

ರಮಿಸುತ್ತ ಸಿಂಗರಿಸಿ ನಾ ನಿನ್ನ ಕಳಿಸಿದ್ದೆ

ತಿರುಗಿ ಮನೆಗೆ ಬಂದೊಡನೆ ನೀ ಎನ್ನ ಶಪಿಸಿದ್ದೆ...
||೩||

ಯೌವನದ ಹುರುಪಿನಲಿ ಬಲು ಶೋಕಿಯಾಗಿದ್ದೆ

ಅವ್ವನ ಮಾತುಗಳಿಗೆ ನೀ ಕಿವಿಯ ಮುಚ್ಚಿದ್ದೆ

ಹರೆಯದ ಬಯಕೆಗಳು ನೀನರಿಯೆ ಎಂದಿದ್ದೆ
ಮೌನವಾಗುತ ನಾ ಮನದಲ್ಲೇ ಕೊರಗಿದ್ದೆ...||೪||


ಸಂಸಾರ ತುಂಬಿರಲು ನನ್ನಿಂದ ದೂರಾದೆ

ಸಂಯಮ ತಾಳ್ಮೆಯನು ನೀ ಎಂದೋ ಮರೆತಿದ್ದೆ

ಮಾತುಗಳ ಮರೆತಿದ್ದ ನಾ ಮೂಕಿಯಾಗಿದ್ದೆ

ನಿನ್ನೊಡನೆ ಆಡಿದ್ದ ಸಮಯವನು ನೆನೆದಿದ್ದೆ...
||೫||

ಮುಪ್ಪಿನಾ ಬಾಧೆಯಲಿ ನಾ ಬಹಳ ನೊಂದಿರುವೆ

ಸಾಂತ್ವನದ ನುಡಿಯನ್ನು ನಿನ್ನಲ್ಲಿ ಅರಸಿರುವೆ

ನೋವುಗಳ ನುಂಗುತ್ತ ನರಳುತ್ತ ಮಲಗಿರುವೆ

ನಿನ್ನೊಂದು ಹಿತನುಡಿಗೆ ದಿನವೆಲ್ಲ ಕಾದಿರುವೆ....
||೬||

ಬೇಸರಿಸದಿರು ನೀ ಎನ್ನ ಮುದ್ದು ಮಗುವೆ
ಸಾಕೆನಗೆ ನಿನದೊಂದು ನಸುನಗುವೆ.......



ಚಿತ್ರ ಕೃಪೆ : ಅಂತರ್ಜಾಲ

26 comments:

  1. ಸುಂದರ ಕವನ ಅನಂತ್ ಸರ್.ಅಭಿನಂದನೆಗಳು.

    ReplyDelete
  2. ಹೌದು..
    ಒಮ್ಮೊಮ್ಮೆ ಮರೆತುಬಿಡುತ್ತೇವೆ...

    ಅಮ್ಮನನ್ನು....

    ನಮ್ಮೊಳಗಿನ”ಅಮ್ಮ’ನನ್ನು ಬೆಳೆಸಿಕೊ೦ಡರೆ ಮಾತ್ರ ಅಮ್ಮ ಸದಾ ನೆನಪಿರುತ್ತಾಳೇನೋ........?

    ವ೦ದನೆಗಳು ಅನ೦ತ ಸರ್.

    ReplyDelete
  3. sundara kavana sir,
    ishTe saalugaLalli jeevana viavaNe maaDiddiri sir...

    mana tumbi bantu...

    ReplyDelete
  4. ಅನಂತ್ ಸರ್,

    ಭಾವಪೂರ್ಣ ಕವನ..

    ತುಂಬು ಪ್ರೀತಿಯಿಂದ

    ReplyDelete
  5. tumbaa sundara kavana. taaya manadaalavannu neevedisida pari manakalukuvantide.

    ReplyDelete
  6. ಅನಂತ ಸರ್ ಚೆನ್ನಾಗಿದೆ ಕವನ..

    ReplyDelete
  7. ಸರ್ ಮಗುವಿನ ನಗುವಿನ ಶಕ್ತಿ ಎಷ್ಟು ಅದ್ಭುತ ಆಲ್ವಾ,
    ಆ ನಗುವಿನಲ್ಲಿ ಕ್ರತಕತೆ ಇರೋದಿಲ್ಲ,
    ಹಿಂದೆ ಒಂದು, ಮುಂದೆ ಒಂದು ಅಂತ ಇರೋದಿಲ್ಲ
    ನಿಷ್ಕಲ್ಮಶ ,
    ಸುಂದರ ಕವನ

    ReplyDelete
  8. ಅನಂತರಾಜರೆ,
    ಬದುಕಿನ ಚಕ್ರವನ್ನು ಬಿಂಬಿಸುವ ಕವನ. ಹೆತ್ತು,ಹೊತ್ತು ಬೆಳೆಸಿದ ತಾಯಿಯು ತನ್ನ ಮಗುವಿಗೇ ಪರಕೀಯಳಾಗುವ ಒಂದು ಸಮಯ ಬರುತ್ತದೆ. ಆಗಲೂ ಸಹ ತಾಯಿ ತನ್ನ ಮಗುವಿನಿಂದ ಬಯಸುವದು ಒಂದು ನಸುನಗು ಮಾತ್ರ! ತುಂಬ ಭಾವಪೂರ್ಣ, ಅಷ್ಟೇ ವಾಸ್ತವವಿಕತೆಯ ಕವನ.

    ReplyDelete
  9. @ ಡಾ. ಸರ್ - ಕವನ ಮೆಚ್ಚಿ ಮೊದಲು ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು
    @ ಶ್ರೀಮತಿ ವಿಜಯಶ್ರೀ - ನಿಮ್ಮ ಮಾತು ನಿಜ, ಎಲ್ಲ ಜೀವಗಳಲ್ಲಿಯೂ ಅಮ್ಮ-ಭಾವ ಮತ್ತು ಮಗು-ಭಾವ ಇದ್ದೇ ಇರುತ್ತದೆ. ಅದರ ಮೂಲ ನಮ್ಮಲ್ಲಿರುವ ಸಾತ್ವಿಕತೆ. ಪ್ರತಿಕ್ರಿಯೆಗೆ ಧನ್ಯವಾದಗಳು.
    @ ದಿನಕರ್ ಸರ್ - ಅಮ್ಮ-ಭಾವವೇ ಹಾಗೆ ಮನ ತು೦ಬಿಸುತ್ತದೆ. ಧನ್ಯವಾದಗಳು

    ReplyDelete
  10. @ ಅಪ್ಪ ಅಮ್ಮ ತಾಣದವರಿಗೆ - ಭಾವಪೂರ್ಣ ಕವನ ಎ೦ದು ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.
    @ ಶ್ರೀಮತಿ ಶಶಿ ಜೋಯ್ಸ್ - ಕವನ ಮೆಚ್ಚಿದ ತಮಗೆ ಧನ್ಯವಾದಗಳು
    @ ಡಾ ಗುರುಮೂರ್ತಿ ಸರ್ - ಮಗುವಿನ ಮುಗ್ಧತೆ, ನಿಷ್ಕಲ್ಮಶ ಭಾವವೇ ಅದನ್ನು ದೈವತ್ವಕ್ಕೆ ಏರಿಸುತ್ತದೆ. ಧನ್ಯವಾದಗಳು.

    ReplyDelete
  11. ಸುನಾತ್ ಸರ್ - ನಿರುತ ನಡೆವ ಜೀವ ಪಯಣ, ದೇವ ಬರೆದ ಜಗದ ನಿಯಮ - ಆದರೆ ಪಯಣದ ಮೂಲಕ್ಕೆ ಕಾರಣರಾದವರನ್ನು ಪರಕೀಯರನ್ನಾಗಿಸುವುದು ಮಾತ್ರ ವಿಪ್ರಯಾಸ ಮತ್ತು ಕಠಿಣವಾದ ವಾಸ್ತವಿಕತೆ. ಪ್ರತಿಕ್ರಿಯೆಗೆ ಧನ್ಯವಾದಗಳು.

    ಅನ೦ತ್

    ReplyDelete
  12. ಅನಂತ್ ಸಾರ್..
    ಎಲ್ಲಾ ಜೀವಿಗಳಲ್ಲೂ... "ಅಮ್ಮ ಭಾವ" ಇದ್ದೇ ಇದೆಯೆಂಬ ನಿಮ್ಮ ಮಾತು ನಂಗೆ ತುಂಬಾ ಮುದ ಕೊಟ್ಟಿತು. ನಾವು ಎಷ್ಟೇ ದೊಡ್ಡವರಾದರೂ ನಮ್ಮೊಳಗೆ ಒಂದು ಮಗು ಇದ್ದೇ ಇರುತ್ತದೆಂಬಂತೆ... ನಮ್ಮೊಳಗೆ ಒಬ್ಬ ಅಮ್ಮ ಕೂಡ ಇರ್ತಾಳೆ ಅನ್ನೋದು ನಿಜಕ್ಕೂ ಅದ್ಭುತವಾದ ಸಂಗತಿ. ಗಂಡಾಗಲೀ, ಹೆಣ್ಣಾಗಲೀ, ಈ ಮಾತೃಭಾವವನ್ನು ಯಾವಾಗಲೂ ಜಾಗೃತವಾಗಿರಿಸಿಕೊಂಡರೆ, ಜೀವನ ಅತ್ಯಂತ ಸುಂದರವಾಗುವುದರಲ್ಲಿ ಸಂಶಯವೇ ಇಲ್ಲ. ನಿಮ್ಮ ಕವನದಲ್ಲಿನ ತಾಯಿಯ ಆರ್ದ್ರತೆ ಮನಸ್ಸಿಗೆ ತಟ್ಟಿತು.

    ಶ್ಯಾಮಲ

    ReplyDelete
  13. ಸರ್, ಉತ್ತಮವಾದ ಕವನ. ತಾಯಿ ಪ್ರೀತಿಯ ಬಗ್ಗೆ ಎಷ್ಟು ಸಾವಿರ ಬರಹಗಳು ಬಂದರೂ ಕಡಿಮೆಯೇ

    ReplyDelete
  14. Ananth avare, you do not believe me but this poem brought tears into my eyes.. I usually am very detached kind of person but this poem really made me miss my mother.... the struggle she put to make us what we are now..

    ReplyDelete
  15. @ ಶ್ಯಾಮಲಾ - ಕವನವನ್ನು ಮೆಚ್ಚಿ ಪ್ರತಿಕ್ರಿಯಿಸುತ್ತ ’ಕವನದಲ್ಲಿನ ತಾಯಿಯ ಆರ್ದ್ರತೆ ಮನಸ್ಸಿಗೆ ತಟ್ಟಿತು’ ಎ೦ದಿದ್ದೀರಿ. ಅಮ್ಮ-ಮಗು ಭಾವ ಎಲ್ಲರಲ್ಲಿಯೂ ಅ೦ತರ್ಗತವಾಗಿರುವುದರಿ೦ದಲೇ, ಸಾತ್ವಿಕತೆಯ ಅಸ್ತಿತ್ವ ಇರುವುದು ಅಲ್ಲವೆ?
    ಧನ್ಯವಾದಗಳು
    ಅನ೦ತ್

    ReplyDelete
  16. @ ದೀಪಸ್ಮಿತ - ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು, ’ತಾಯಿ ಎ೦ಬ ದೈವಕೆ ಬೇರಾರು ಸಾಟಿಯೇ..’ ಅಲ್ಲವೆ? ವ೦ದನೆಗಳು.

    ಅನ೦ತ್

    ReplyDelete
  17. @ ಭಾವನಾ ಮೇಡ೦ - ಕವನ ಹೊರಹೊಮ್ಮಿಸಿದ ಮಾತೃಭಾವ ನಿಮ್ಮ ಮನಸ್ಸನ್ನು ತಟ್ಟಿದ್ದು, ಕರ್ತೃವಿಗೊ೦ದು ಸಾರ್ಥಕ್ಯಭಾವ. Mother is always ultimate. - ನಿಮ್ಮ ಮೆಚ್ಚುಗೆಯ ಪ್ರತ್ರಿಕ್ರಿಯೆಗೆ ಧನ್ಯವಾದಗಳು.

    ಅನ೦ತ್

    ReplyDelete
  18. ತಾಯ ಋಣವನ್ನು ಎಲ್ಲರೂ ನೆನಪಿಡುವರೇ? ಕೆಲವರು ಮಾತ್ರ ಅದನ್ನು ಮರೆಯದೇ ನಡೆಸುವರು.ಶಂಕರಭಗವತ್ಪಾದರು ಆ ಕಾಲಕ್ಕೇ ಹೇಳಿದರು ’ಕುಪುತ್ರೋ ಜಾಯೇತ ಕ್ವಚಿತಪಿ ಕುಮಾತಾ ನ ಭವತಿ’ -ಒಬ್ಬ ಕೆಟ್ಟ ಮಗನಿರಬಹುದು ಆದರೆ ಒಬ್ಬ ಕೆಟ್ಟ ತಾಯಿ ಇರುವುದಿಲ್ಲ, ತಾಯಿಯ ಮನಸ್ಸು ತಾನು ಹೇಗಿದ್ದರೂ ಮಕ್ಕಳು ಚೆನ್ನಾಗಿರಲಿ ಎಂದೇ ಹಾರೈಸುತ್ತದೆ. ಕವನ ಚೆನ್ನಾಗಿದೆ! ಧನ್ಯವಾದಗಳು

    ReplyDelete
  19. ಬಹಳ ಭಾವ ಪೂರ್ಣವಾದ ಕವನ ಸರ್, ಚೆನ್ನಾಗಿದೆ. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.

    ReplyDelete
  20. @ ಭಟ್ ಸರ್ - ಶಂಕರಭಗವತ್ಪಾದರ ಅಮೂಲ್ಯ ಮಾತುಗಳವು. ಕವನದ ಬಗ್ಗೆಯ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.
    @ ಪ್ರಭಾಮಣಿ ನಾಗರಾಜ್ - ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು

    ಅನ೦ತ್

    ReplyDelete
  21. ಅಮ್ಮನನ್ನು ನೆನಪಿಸುವ ಭಾವಪೂರ್ಣ ಕವನ ಓದಿ ಮನಸ್ಸಿಗೆ ಖುಷಿಯಾಯಿತು..

    ReplyDelete
  22. ಅನಂತರಾಜ್,ಸರ್ ರವರೆ,ಸುಂದರವಾದ ಭಾವಪೂರ್ಣ ಕವನ. ಅಭಿನಂದನೆಗಳು

    ReplyDelete
  23. @ ಶಿವು ಸರ್ - ವ೦ದನೆಗಳು, ತಮ್ಮ ಮೆಚ್ಚುಗೆಯನ್ನು ಸೂಚಿಸಿ ಪ್ರತಿಕ್ರಿಯಿಸಿದ್ದಕ್ಕೆ.
    @ ಕಲಾವತಿ ಮೇಡ೦ - ವ೦ದನೆಗಳು, ತಮ್ಮ ಮೆಚ್ಚುಗೆ ಮತ್ತು ಅಭಿನ೦ದನೆಗೆ.

    ಅನ೦ತ್

    ReplyDelete
  24. ondu maguvina baalyada sundara chitrana.. mugdhaate ... ade avalu beledu nitaagina aatanka... javaabdaari kaviteya bennelubu anthe kaantaa ide... kusu iddara maniga bisanige yaatakka/... nija

    ReplyDelete
  25. @ Dr. Chandrika Hegde - nimma mechchugeya nudigalige dhanyavaadagalu. nija- koosu iddaa manige beesaniki yaatakka..

    ananth

    ReplyDelete
  26. Very nice. tumba chennagide Ananth Naik Avre

    ReplyDelete